KAS MASTERMIND
23.4K subscribers
3.86K photos
32 videos
1.09K files
511 links
Karnataka and all state question with answer (Kannada)❤️ & English language

YouTube channel

https://www.youtube.com/@KASMASTERMIND-x5n

Telegram id @MrRAJKUMAR02
Download Telegram
🌿DTAA
(Double Taxation Avoidance Agreement):

ಎರಡು ದೇಶಗಳಲ್ಲಿ ಒಂದೇ ಆದಾಯಕ್ಕೆ ಎರಡೆರಡು ಬಾರಿ ತೆರಿಗೆ ವಿಧಿಸುವುದನ್ನು ತಪ್ಪಿಸಲು ಮಾಡಿಕೊಳ್ಳುವ 'ದ್ವಿಪಕ್ಷೀಯ ತೆರಿಗೆ ಒಪ್ಪಂದ'. (ಭಾರತ-ಮಾರಿಷಸ್ DTAA ಒಪ್ಪಂದವು ಪ್ರಸಿದ್ಧವಾಗಿದೆ).

GAAR (General Anti-Avoidance Rule): ತೆರಿಗೆ ವಂಚನೆ ತಡೆಯಲು ಭಾರತದಲ್ಲಿ ಜಾರಿಗೆ ತರಲಾದ ಕಾನೂನು ನಿಯಮಾವಳಿ.

FATF ಮತ್ತು OECD: ಜಾಗತಿಕವಾಗಿ ಟ್ಯಾಕ್ಸ್ ಹೇವನ್‌ಗಳ ದುರುಪಯೋಗ ಮತ್ತು ಕಪ್ಪು ಹಣ ವರ್ಗಾವಣೆಯನ್ನು ನಿಯಂತ್ರಿಸುವ ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು.

ಪನಾಮಾ ಮತ್ತು ಪೇಪರ್ಸ್ ಲೀಕ್ಸ್ (Panama & Pandora Papers): ಪ್ರಪಂಚದಾದ್ಯಂತ ಪ್ರಮುಖ ನಾಯಕರು ಮತ್ತು ಉದ್ಯಮಿಗಳು ಟ್ಯಾಕ್ಸ್ ಹೇವನ್‌ಗಳಲ್ಲಿ ಅಡಗಿಸಿಟ್ಟಿದ್ದ ಕಪ್ಪು ಹಣವನ್ನು ಬಹಿರಂಗಪಡಿಸಿದ ಜಾಗತಿಕ ತನಿಖಾ ವರದಿಗಳು
1
ಸುಪ್ರೀಂಕೋರ್ಟ್ ಸೂಚನೆ:
6ನೇ ತರಗತಿಯ ಹಂತದಲ್ಲಿ ತ್ರಿಭಾಷಾ ನೀತಿಯನ್ನು ಏಕಾಏಕಿ ಜಾರಿಗೊಳಿಸುವುದರಿಂದ ವಿದ್ಯಾರ್ಥಿಗಳ ಮೇಲಾಗುವ ಒತ್ತಡವನ್ನು ತಪ್ಪಿಸಲು ವಿನಾಯಿತಿ ನೀಡುವ ಬಗ್ಗೆ ಪರಿಶೀಲಿಸಲು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಸೂಚಿಸಿದೆ.


ತ್ರಿಭಾಷಾ ಸೂತ್ರ
(Three-Language Formula):


​ಮೊದಲ ಬಾರಿಗೆ 1968ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (NEP 1968) ಕೊಠಾರಿ ಆಯೋಗದ (Kothari Commission - 1964-66) ಶಿಫಾರಸಿನ ಮೇರೆಗೆ ಇದನ್ನು ಅಧಿಕೃತವಾಗಿ ಜಾರಿಗೆ ತರಲಾಯಿತು.

ಇದರ ಉದ್ದೇಶ: ಮಾತೃಭಾಷೆ/ಪ್ರಾದೇಶಿಕ ಭಾಷೆ, ಹಿಂದಿ ಮತ್ತು ಇಂಗ್ಲಿಷ್ (ಅಥವಾ ಪ್ರಾದೇಶಿಕವಲ್ಲದ ಯಾವುದೇ ಆಧುನಿಕ ಭಾರತೀಯ ಭಾಷೆ) ಕಲಿಕೆಯನ್ನು ಉತ್ತೇಜಿಸುವುದು.

ರಾಷ್ಟ್ರೀಯ ಶಿಕ್ಷಣ ನೀತಿ 2020 (NEP 2020):

ಕಸ್ತೂರಿರಂಗನ್ (Dr. K. Kasturirangan) ಸಮಿತಿಯ ವರದಿ ಆಧರಿಸಿ NEP 2020 ರೂಪಿಸಲಾಗಿದೆ

​ಈ ನೀತಿಯು ಕನಿಷ್ಠ 5ನೇ ತರಗತಿಯವರೆಗೆ (ಸಾಧ್ಯವಾದರೆ 8ನೇ ತರಗತಿಯವರೆಗೆ) ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲೇ ಬೋಧನೆ ನೀಡಲು ಒತ್ತು ನೀಡುತ್ತದೆ.
7
NCERT Science bio Key points Notes.pdf.pdf
21.2 MB
NCERT Science bio Key point Notes ನಿಮಗಾಗಿ..
5
Media is too big
VIEW IN TELEGRAM
ಕೆಲವರಿಗೆ ಈಗಾಗಲೇ ನಾನು ಈ ವಿಷಯದ ಬಗ್ಗೆ ತಿಳಿಸಿದ್ದೇನೆ. ಇನ್ನು ಮುಂದೆ ಪೊಲೀಸ್ ಡ್ರೆಸ್‌ನಲ್ಲಿ ರೀಲ್ಸ್, ವಿಡಿಯೋಗಳು ಮಾಡುವುದಾಗಲಿ ಅಥವಾ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಲಿ ಮಾಡಿದರೆ ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಈ ಕುರಿತು ಈಗಾಗಲೇ ಗೃಹ ಸಚಿವರ ಮಟ್ಟದಲ್ಲಿಯೂ ಕೆಲವು ಮಾಹಿತಿಗಳು ಬಂದಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆದಿದೆ.

ಆದ್ದರಿಂದ ಪೊಲೀಸ್ ಡ್ರೆಸ್ ಧರಿಸಿ ರೀಲ್ಸ್, ವಿಡಿಯೋಗಳು ಅಥವಾ ಇತರೆ ಸಾಮಾಜಿಕ ಜಾಲತಾಣದ ವಿಷಯಗಳನ್ನು ಮಾಡುತ್ತಿರುವವರು ಈಗಲೇ ಎಚ್ಚರಿಕೆ ವಹಿಸಿ. ಇನ್ನು ಕೆಲವೇ ದಿನಗಳಲ್ಲಿ ಇಂತಹ ಚಟುವಟಿಕೆಗಳ ವಿರುದ್ಧ ಸರ್ಕಾರ ಅಥವಾ ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಹೀಗಾಗಿ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಈಗಲೇ ಇದನ್ನು ಸರಿಪಡಿಸಿಕೊಳ್ಳುವುದು ಉತ್ತಮ.

ಜನಗಳಿಗೆ ಒಳ್ಳೆಯ ಮಾಹಿತಿ ಕೊಡುವುದರಲ್ಲಿ ಸರ್ಕಾರದು ಏನು ತೊಂದರೆ ಇಲ್ಲ ಉದಾಹರಣೆಗೆ ಸೈಬರ್ ಅಪರಾಧ ವಂಚನೆಗಳು ಕಳ್ಳ ಸಾಗಾಣಿಕೆ ಮಹಿಳೆಯರ ಎಚ್ಚರಿಕೆ ಇತ್ಯಾದಿ
12👌1