ಇಂದು(27-10-2024) ನಡೆದ ಗ್ರಾಮ ಆಡಳಿತಾಧಿಕಾರಿ(Village Administrative Officer-VAO) ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆ ಯ ಟ್ರೆಂಡ್ ಅನಾಲಿಸಿಸ್ ಫ್ರಮ್ ಅಮರೇಶ್ ಪೋತ್ನಾಳ್
ಇತಿಹಾಸ - 21
ಭೂಗೋಳ - 05
ಸಂವಿಧಾನ - 05
ಎಕನಾಮಿಕ್ಸ್ - 00
ಪ್ರಚಲಿತ ಘಟನೆಗಳು - 37
ಸ್ಟಾಟಿಕ್ ಜಿಕೆ - 04
ಸಾಮಾನ್ಯ ವಿಜ್ಞಾನ - 15
ಮೆಂಟಲ್ ಎಬಿಲಿಟಿ - 11
ಪರಿಸರ ವಿಜ್ಞಾನ - 01
ಕಂಪ್ಯೂಟರ್ -00
ಸೈನ್ಸ್ ಅಂಡ್ ಟೆಕ್ - 00
ಪಂಚಾಯತ್ - ಸಹಕಾರಿ - 01
ಒಟ್ಟು - 100
ಇತಿಹಾಸ - 21
ಭೂಗೋಳ - 05
ಸಂವಿಧಾನ - 05
ಎಕನಾಮಿಕ್ಸ್ - 00
ಪ್ರಚಲಿತ ಘಟನೆಗಳು - 37
ಸ್ಟಾಟಿಕ್ ಜಿಕೆ - 04
ಸಾಮಾನ್ಯ ವಿಜ್ಞಾನ - 15
ಮೆಂಟಲ್ ಎಬಿಲಿಟಿ - 11
ಪರಿಸರ ವಿಜ್ಞಾನ - 01
ಕಂಪ್ಯೂಟರ್ -00
ಸೈನ್ಸ್ ಅಂಡ್ ಟೆಕ್ - 00
ಪಂಚಾಯತ್ - ಸಹಕಾರಿ - 01
ಒಟ್ಟು - 100
ಅಂತೂ ಇಂತೂ ... ಇದೇ ಮೊದಲ ಬಾರಿಗೆ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ (VAO)ಸ್ಪರ್ಧಾತ್ಮಕ ಪರೀಕ್ಷೆ ಅಂತೂ ಮುಗೀತು ... ಕೆಲವರು ಚೆನ್ನಾಗಿ ಮಾಡಿರ್ತೀರ ಕೆಲವರು ಇನ್ನೂ ಓದಬೇಕಾದ ... ಸಾಗಬೇಕಾದ ದಾರಿ ಬಹಳ ಇದೆ ಎಂದು ಗೊತ್ತಾಗಿದೆ ... ಒಂದತ್ತು ಸತ್ಯ ಎಲ್ಲರ ನಿರೀಕ್ಷೆ ಮೀರಿ ಉತ್ತಮ ಕ್ವಾಲಿಟಿ ಪ್ರಶ್ನೆ ಪತ್ರಿಕೆಗಳು(ಸಾಮಾನ್ಯ ಜ್ಞಾನ ಪತ್ರಿಕೆ ಮತ್ತು ಸಂವಹನ ಪತ್ರಿಕೆ) ಬಂದಿವೆ. ಪೊಲೀಸ್ ಕಾನ್ಸ್ಟೇಬಲ್ ಮತ್ತು VAO ಎರಡೂ 12 ನೇ ತರಗತಿ ಮೇಲೆ ನಡೆಯುವ ಪರೀಕ್ಷೆಗಳಾದರೂ ಈ ಪರೀಕ್ಷೆ ಕ್ವಾಲಿಟಿ ಬಗ್ಗೆ ಎರಡೂ ಮಾತೆ ಇಲ್ಲ ... ಯಾರು ಜಸ್ಟ್ ಒನ್ ಲೈನರ್ ಓದಿ ... ಆಳವಾದ ಜ್ಞಾನ ಇಲ್ಲವೋ ... ಅವರಿಗೆ ಒಂದು ಮಾರ್ಗದರ್ಶನ ಸಿಕ್ಕಿತು ... ಇನ್ನು ಮುಂದೆ ಇನ್ನು ಚೆನ್ನಾಗಿ ಸಬ್ಜೆಕ್ಟ್ ಅರ್ಥ ಮಾಡಿಕೊಂಡು ಓದಿ ... ವಿಷಯದ ಎಲ್ಲಾ ಮೂಲೆ ಗಳಿಂದಲೂ ಪ್ರಶ್ನೆಗಳು ಬರ್ತಾ ಇವೆ ಅಲ್ಲವೇ ... ಇರಲಿ ಇವತ್ತು ರೆಸ್ಟ್ ಮಾಡಿ ... ನಾಳೆಯಿಂದ ಮತ್ತೆ ಓದೋದು ಇದ್ದೇ ಇದೆ ... ಒಂದು ನೆನಪಿರಲಿ ... ಯಶಸ್ಸು ಎನ್ನುವುದು ... ಸಾಕಷ್ಟು ಪ್ರಯತ್ನದ ಫಲ ... ಕೇವಲ ಒಂದು ತಿಂಗಳು ಎರಡು ತಿಂಗಳು ಓದಿ ಪಾಸ್ ಆಗ್ತೀನಿ ಅನ್ನೋ ಕಾಲ ... ಇವತ್ತಿಗೆ ಮುಗಿದಂತಾಯ್ತು ... ಟಾಪ್ 100 ಪ್ರಶ್ನೆಗಳು, ಸಂಭವನೀಯ ಪ್ರಶ್ನೆಗಳು ... ಇಂಥವೆಲ್ಲ ವರ್ಕ್ ಔಟ್ ಆಗಲ್ಲ ... ಇವತ್ತು ರಿಯಲೈಸ್ ಆಗಿರಬೇಕು
ಒಂದು ವಿಡಿಯೋ ಒಂದು ಪ್ರಶ್ನೆ ... ಎತ್ತಿನಹೊಳೆ ಯೋಜನೆ ಬಗ್ಗೆ ಎಷ್ಟೆಲ್ಲಾ ಮಾಹಿತಿ ಗೊತ್ತಿರುತ್ತೆ ... ಆದರೆ ಯಾರು ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿದ್ದಾರೆ ... That is the twist in the question...
ಇದೊಂದು ವಿಡಿಯೋ ಮೂರು ಅಥವಾ ಅದಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಉಪಯೋಗ ಆಗಿದೆ ... ಎಷ್ಟೋ ಅಂತರರಾಷ್ಟ್ರೀಯ ಸಂಸ್ಥೆಗಳ ಬಗ್ಗೆ ಕೇಳಿದ್ದಾರೆ ಅಲ್ಲವೇ .. ಒಂದು ಸಲ ಚೆಕ್ ಮಾಡಿಕೊಳ್ಳಿ
ಇದೊಂದು ವಿಡಿಯೋ ಮೂರು ಅಥವಾ ಅದಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಉಪಯೋಗ ಆಗಿದೆ ... ಎಷ್ಟೋ ಅಂತರರಾಷ್ಟ್ರೀಯ ಸಂಸ್ಥೆಗಳ ಬಗ್ಗೆ ಕೇಳಿದ್ದಾರೆ ಅಲ್ಲವೇ .. ಒಂದು ಸಲ ಚೆಕ್ ಮಾಡಿಕೊಳ್ಳಿ
ಎಕ್ಸಾಮ್ ಅಂದ್ರೇನೆ ಹಾಗೆ ಇವತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಬಗ್ಗೆ ಹೆಚ್ಚು ಕೇಳಿದಾರೆ ... ಕಳೆದ ಪಿಎಸ್ಐ ಪೇಪರ್ ಅಲ್ಲಿ ರಾಷ್ಟ್ರೀಯ ಸಂಸ್ಥೆಗಳ ಬಗ್ಗೆ ಹೆಚ್ಚು ಕೇಳಿದ್ದರು ... ಎಲ್ಲದಕ್ಕೂ ನಾವು ರೆಡಿ ಇರಬೇಕು ಅಷ್ಟೇ ... ಟಾಪ್ 100 ಪ್ರಶ್ನೆಗಳು ... ಸಂಭವನೀಯ ಪ್ರಶ್ನೆಗಳು ..ಕೇವಲ 40 -50 ಮಾರ್ಕ್ಸ್ ಗೆ ತೆಗೆಯೋಕೆ ಅಷ್ಟೇ ಉಪಯೋಗ ... ಅದನ್ನ ಮೀರಿ ಬೆಳೀಬೇಕು .. ಅದನ್ನ ಮೀರಿ ತೆಗೀಬೇಕು ... 70 ಅಥವಾ 80 ರ ಹತ್ತಿರಕ್ಕೆ ಹೋಗಬೇಕು ಅಂದ್ರೆ ಅದಕ್ಕೆ ಸಮಗ್ರವಾದ, ನಿರಂತರವಾದ ಅಧ್ಯಯನ ಅವಶ್ಯಕ .....
ಹೌದು ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು ಕರ್ನಾಟಕ ಸರ್ಕಾರದ ಮೂಲ ಸರ್ಕಾರೀ ಹುದ್ದೆಗಳಲ್ಲೇ ಅತಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಹುದ್ದೆಗಳು ... ಹಾಗಾಗಿ ಅದರಲ್ಲಿ ಕೇಂದ್ರ ಸರಕಾರದ ಬಜೆಟ್/ಆರ್ಥಿಕ ಸಮೀಕ್ಷೆ ಯಲ್ಲಿರುವ ಯೋಜನೆಗಳು ಯಾಕೆ ಓದಬೇಕು ... ಅಂತ ತಾತ್ಸಾರ ಮಾಡಿದ್ರೆ ಹೇಗೆ ... ನೋಡಿ ಎಷ್ಟು ಯೋಜನೆಗಳ ಬಗ್ಗೆ ಕೇಳಿದಾರೆ
ದಾದಾಸಾಹೇಬ್ ಫಾಲ್ಕೆ ಅವಾರ್ಡ್ recent one ಕೇಳಿದಾರೆ ಆದರೆ ನೊಬೆಲ್ ಅವಾರ್ಡ್ಸ್ 2023 ರ ವೈದ್ಯಕೀಯ ಪ್ರಶಸ್ತಿ ಕೇಳಿದಾರೆ ಅಲ್ವ ...