ಪ್ರಚಲಿತ ಘಟನೆಗಳನ್ನ ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ವಿವರಣೆ ಪ್ರತಿಯೊಂದಕ್ಕೂ ವಿಥ್ ಪ್ರೂಫ್ ಕೊಡ್ತಾ ಇರೋದು ... ಇಂದಿನ ಆಧುನಿಕ ಯುಗದಲ್ಲೂ ... ಇನ್ನು ಕೇವಲ ಟೆಕ್ಸ್ಟ್ ಬೇಸ್ಡ್ ಕಂಟೆಂಟ್ ಕೊಟ್ರೆ ಹೇಗೆ? ಹಾಗೇ ಕೊಡುದು ಸುಲಭ ಕೂಡಾ ... ಪುಸ್ತಕ ಓದೋದಕ್ಕೂ ... ಅಮರೇಶ್ ಪೋತ್ನಾಳ್ ಕ್ಲಾಸ್ ಕೇಳೋದಕ್ಕೂ ಸಾಕಷ್ಟು ವ್ಯತ್ಯಾಸ ಇದೆ ...
ಆದ್ರೂ ಇನ್ನು ಅದೇ ಹಳೆ ಕಾಲದ ಮೆಥಡ್ ಫಾಲೋ ಮಾಡಿ ... ಮೂರು ನಾಲ್ಕು ವರ್ಷ ವೇಸ್ಟ್ ಮಾಡ್ಕೊಂಡು ಎಷ್ಟೋ ವಿದ್ಯಾರ್ಥಿಗಳು ಬರಿ ಕೈಯಲ್ಲಿ ಮನೆ ದಾರಿ ಹಿಡಿತಾ ಇದಾರೆ ...
ಇತ್ತೀಚಿನ ಕೆಪಿಎಸ್ಸಿ Prelims Exam ಮತ್ತು KEA PSI 402 ಪರೀಕ್ಷೆಗಳು ಬಹಳಷ್ಟು ವಿದ್ಯಾರ್ಥಿಗಳ ಕಣ್ಣು ತೆರೆಸಿವೆ ... ಈಗ ಗೊತ್ತಾಗಿದೆ ... ನಾವು ಉಳಿಬೇಕಾದರೆ ಒನ್ ಲೈನರ್ ಬಿಟ್ಟು ಮಲ್ಟಿ ಲೈನರ್ ಕಡೆ ಬರಬೇಕು ಅಂತ ... ಯಾವತ್ತೂ ನಮ್ಮ ಶಕ್ತಿ ಮೀರಿ ಪ್ರಯತ್ನ ಇರಬೇಕು ... ಯಶಸ್ಸಿಗೆ ಶಾರ್ಟ್ ಕಟ್ ಯಾವುದು ಇಲ್ಲ ... ಒಂದು ವೇಳೆ ಇದ್ದರೆ .. ಅದು ಶಾಶ್ವತವೂ ಅಲ್ಲ ... ಒಂದು ವೇಳೆ ಶಾಶ್ವತದಂತೆ ಕಾಣಿಸಿದರೆ ... ಅದರಿಂದ ನೆಮ್ಮದಿಯಿಂದ ನಿದ್ದೆಯೂ ಬರುವುದಿಲ್ಲ ...
ಇವತ್ತು PSI 545 ಮತ್ತು ಬಿಎಂಟಿಸಿ BMTC ಪರೀಕ್ಷೆಗಳ ರಿಸಲ್ಟ್ ಬಂದಿದೆ ಅಲ್ವ ... ಕೇಳಿ ನೋಡಿ ಯಾವ ಕ್ಲಾಸ್ Use ಆದವು ಅಂತ ... ಸೆಲೆಕ್ಷನ್ ಲಿಸ್ಟ್ ಅಲ್ಲಿ ಇರಬೇಕಾದರೆ ಎಲ್ಲರ ರೀತಿ ಓದೋದು ಅಲ್ಲರೀ .. ಅವರಿಗಿಂತ ಸ್ವಲ್ಪ ಬೇರೇನೇ ಓದಬೇಕು ಅಂತ ನಂಬಿರೋನು ನಾನು .. ನಾನು ಪಾಠ ಮಾಡೋದೇ ಅದೇ ತರ ...
ಕೆಲವೊಬ್ಬರು ... ನಿಮ್ಮ ಚಾನೆಲ್ ಇಂದ ಹೊರಗಡೆ ಹೋಗ್ತಾ ಇದೀವಿ ... ಅನ್ ಸಬ್ ಸ್ಕ್ರೈಬ್ ಮಾಡ್ಕೊಳ್ತೀವಿ ಅಂತ ಮೆಸೇಜ್ ಹಾಕಿದ್ದ್ರಿ ... ಅವರಿಗೆ ನಂದು ಒಂದೇ ಉತ್ತರ ಇತ್ತು ... ಅದರಿಂದ ನಿಮಗೆ ನಷ್ಟ ಹೊರತು ನನಗಲ್ಲ ಅಂತ ... ನನ್ನ ಶ್ರಮದ ಬಗ್ಗೆ, ನನ್ನ ಪ್ರಯತ್ನದ ಬಗ್ಗೆ ನಂಗೆ ನಂಬಿಕೆ ಇದೆ ... ಕಳೆದ ಐದು ವರ್ಷಗಳಿಂದ ನಿರಂತರವಾಗಿ ಸತತವಾಗಿ ಉತ್ತಮ ವಿಡಿಯೋ ಗಳನ್ನ ಮಾಡಿರೋದು ... ನೆನಪಿರಲಿ ಉತ್ತಮ ವಿಡಿಯೋಗಳು ... ಸುಮ್ನೆ ಏನೋ ಒಂದಷ್ಟು ಇಂಟೆರ್ ನೆಟ್ ನಿಂದ ಕಾಪಿ ಮಾಡ್ಕೊಂಡು ಅರೆ ಬರೆ ವಿವರಣೆ ನೀಡೋ ಹಾಗಿದ್ದರೆ ಇನ್ನೂ ಸಾವಿರ ವಿಡಿಯೋ ಮಾಡಬಹುದಿತ್ತು .. ಆದರೆ ಕ್ವಾಲಿಟಿ ಇಂಪಾರ್ಟೆಂಟ್ ... ಕೆಪಿಎಸ್ಸಿ Prelims Exam ಮತ್ತು KEA PSI 402 ನಂತಹ ಕಠಿಣ ಪ್ರಶ್ನೆ ಪತ್ರಿಕೆ ಬಂದ್ರೂ ... ವಿಡಿಯೋ ಕೇಳಿರೋರು ಖುಷಿಯಿಂದ ಹೊರಗಡೆ ಬರಬೇಕು ... ಅದು ಕ್ವಾಲಿಟಿ ... ಆಗ ಸಮಾಧಾನ ...
ಬರಿ ಕರೆಂಟ್ ಅಫ್ಫೇರ್ಸ್ ಅಷ್ಟೇ ಅಲ್ಲ ಗುರು ಇರೋದು ... ಎಲ್ಲಾ ವಿಷಯಗಳ ಕಠಿಣ ಅಧ್ಯಾಯಗಳು, ಟಾಪಿಕ್ ಗಳು ಇರೋದು ... ನೆನಪಿರಲಿ ...
900 ಕ್ಕೂ ಹೆಚ್ಚಿನ ವಿಡಿಯೋಗಳು ಇದಾವೆ ... ಕರೆಂಟ್ ಅಫೇರ್, ಕಂಪ್ಯೂಟರ್, ಜಿಯಾಗ್ರಫಿ, ಪಾಲಿಟಿ, ಎಕನಾಮಿಕ್ಸ್, ಬಜೆಟ್, ಆರ್ಥಿಕ ಸಮೀಕ್ಷೆ, ಇತಿಹಾಸ, ಮಾನಸಿಕ ಸಾಮರ್ಥ್ಯ, ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹೀಗೆ ಎಲ್ಲಾ ವಿಷಯಗಳ ಮೇಲೆ ಇವೆ ... ಯಾರಿಗೆ ನಮ್ಮ ಚಾನೆಲ್ ಬಗ್ಗೆ ಗೊತ್ತಿದೆಯೋ ಅವರು ನೋಡೇ ನೋಡ್ತಾರೆ ... ಅಷ್ಟೇ ಸಿಂಪಲ್