KAS MASTERMIND
21.7K subscribers
3.17K photos
26 videos
886 files
404 links
Karnataka and all state question with answer (Kannada)❤️ & English language

YouTube channel

https://www.youtube.com/@KASMASTERMIND-x5n

Cont NO 9686965597(only whatsapp & Telegram)
Download Telegram
🌿"ಆದಾಯ ತೆರಿಗೆ ದಿನ"
( Income Tax Day )


ಆದಾಯ ತೆರಿಗೆ ದಿನ:
ಪ್ರತಿ ವರ್ಷ ಜುಲೈ 24 ರಂದು ಭಾರತದಲ್ಲಿ 'ಆದಾಯ ತೆರಿಗೆ ದಿನ' (National Income Tax Day) ಎಂದು ಆಚರಿಸಲಾಗುತ್ತದೆ.
ಮೊದಲ ಬಾರಿಗೆ ತೆರಿಗೆ ಜಾರಿ (ಇತಿಹಾಸ):
ಜುಲೈ 24,1860 ರಂದು ಸರ್ ಜೇಮ್ಸ್ ವಿಲ್ಸನ್ (Sir James Wilson) ಅವರು ಭಾರತದಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆಯನ್ನು ಪರಿಚಯಿಸಿದರು
ಹಿನ್ನೆಲೆ: 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ (ಸಿಪಾಯಿ ದಂಗೆ) ಸಮಯದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಉಂಟಾಗಿದ್ದ ಆರ್ಥಿಕ ನಷ್ಟವನ್ನು ಸರಿದೂಗಿಸಲು ಈ ತೆರಿಗೆಯನ್ನು ವಿಧಿಸಲಾಯಿತು.
ಆಚರಣೆ ಪ್ರಾರಂಭವಾಗಿದ್ದು:
ಆದಾಯ ತೆರಿಗೆ ಜಾರಿಯಾಗಿ 150 ವರ್ಷ ಪೂರೈಸಿದ ನೆನಪಿಗಾಗಿ 2010 ರಲ್ಲಿ ಮೊದಲ ಬಾರಿಗೆ ಜುಲೈ 24 ನ್ನು ಆದಾಯ ತೆರಿಗೆ ದಿನವಾಗಿ ಆಚರಿಸಲು ನಿರ್ಧರಿಸಲಾಯಿತು.
ಆಡಳಿತ ಸಂಸ್ಥೆ:
ಆದಾಯ ತೆರಿಗೆ ಇಲಾಖೆಯು ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕಂದಾಯ ಇಲಾಖೆ ಮತ್ತು ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) ಯ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ.
ಆದಾಯ ತೆರಿಗೆಯು ಯಾವ ರೀತಿಯ ತೆರಿಗೆ?:
ಇದು ನೇರ ತೆರಿಗೆ (Direct Tax) ಮತ್ತು ಪ್ರಗತಿಪರ ತೆರಿಗೆ (Progressive Tax) ಆಗಿದೆ (ಅಂದರೆ ಆದಾಯ ಹೆಚ್ಚಿದಂತೆ ತೆರಿಗೆಯ ಪ್ರಮಾಣವೂ ಹೆಚ್ಚಾಗುತ್ತದೆ).
173
👉ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆ: ಭಾರತದಲ್ಲಿ ಪ್ರಸ್ತುತ 1961 ರ ಆದಾಯ ತೆರಿಗೆ ಕಾಯ್ದೆ (Income Tax Act, 1961) ಜಾರಿಯಲ್ಲಿದೆ. (ಇದು ಏಪ್ರಿಲ್ 1, 1962 ರಿಂದ ಜಾರಿಗೆ ಬಂದಿತು).

CBDT ಅಧ್ಯಕ್ಷರು (2026):
ಪ್ರಸ್ತುತ ಕೇಂದ್ರ ನೇರ ತೆರಿಗೆಗಳ ಮಂಡಳಿಯ (CBDT) ಅಧ್ಯಕ್ಷರಾಗಿ ರವಿ ಅಗರ್ವಾಲ್ (Ravi Agrawal) ಕಾರ್ಯನಿರ್ವಹಿಸುತ್ತಿದ್ದಾರೆ.
ಮುಖರಹಿತ ಮೌಲ್ಯಮಾಪನ ಯೋಜನೆ (Faceless Assessment Scheme):
ತೆರಿಗೆ ಪಾವತಿದಾರರು ಮತ್ತು ಅಧಿಕಾರಿಗಳ ನಡುವಿನ ನೇರ ಸಂಪರ್ಕವನ್ನು ತಪ್ಪಿಸಿ, ಪಾರದರ್ಶಕತೆ ತರಲು ಭಾರತ ಸರ್ಕಾರವು ಇದನ್ನು 2020 ರಲ್ಲಿ ಜಾರಿಗೆ ತಂದಿತು.
ಸಂವಿಧಾನದ ಬೆಂಬಲ:
ಭಾರತದ ಸಂವಿಧಾನದ 7 ನೇ ಅನುಸೂಚಿಯ (7th Schedule) 'ಕೇಂದ್ರ ಪಟ್ಟಿ'ಯಲ್ಲಿ (Union List - Entry 82) ಕೃಷಿ ಆದಾಯವನ್ನು ಹೊರತುಪಡಿಸಿ ಉಳಿದ ಆದಾಯದ ಮೇಲಿನ ತೆರಿಗೆಯನ್ನು ವಿಧಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. (ಗಮನಿಸಿ: ಕೃಷಿ ಆದಾಯದ ಮೇಲಿನ ತೆರಿಗೆ 'ರಾಜ್ಯ ಪಟ್ಟಿ'ಗೆ ಸೇರುತ್ತದೆ)
91
🌳ಜಿಮ್ ಕಾರ್ಬೆಟ್ (Jim Corbett)

ಪೂರ್ಣ ಹೆಸರು:
ಎಡ್ವರ್ಡ್ ಜೇಮ್ಸ್ ಕಾರ್ಬೆಟ್ (Edward James Corbett)
ಜನನ: ಜುಲೈ 25, 1875 ರಂದು ಪ್ರಸ್ತುತ ಉತ್ತರಾಖಂಡದ ನೈನಿತಾಲ್ನಲ್ಲಿ ಜನಿಸಿದರು
ಖ್ಯಾತ ಪುಸ್ತಕಗಳು: ಇವರು ಬರೆದ 'ಮ್ಯಾನ್-ಈಟರ್ಸ್ ಆಫ್ ಕುಮಾನ್' (Man-Eaters of Kumaon - 1944) ಅತ್ಯಂತ ಪ್ರಸಿದ್ಧ ಕೃತಿಯಾಗಿದೆ. ಇದರ ಆಧಾರದ ಮೇಲೆ 1948 ರಲ್ಲಿ ಹಾಲಿವುಡ್ ಚಲನಚಿತ್ರವೂ ಮೂಡಿಬಂದಿದೆ

🌳ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
(ಭಾರತದ ಮೊದಲ ಉದ್ಯಾನವನ)
ಸ್ಥಾಪನೆ: 1936ರಲ್ಲಿ ಭಾರತದ (ಹಾಗೂ ಏಷ್ಯಾದ) ಅತ್ಯಂತ ಮೊದಲ ರಾಷ್ಟ್ರೀಯ ಉದ್ಯಾನವನವಾಗಿ ಇದು ಸ್ಥಾಪನೆಯಾಯಿತು.
ಮೂಲ ಹೆಸರು: ಆರಂಭದಲ್ಲಿ ಇದಕ್ಕೆ ಬ್ರಿಟಿಷ್ ಗವರ್ನರ್ ಮಾಲ್ಕಮ್ ಹ್ಯಾಲಿ ಅವರ ನೆನಪಿನಲ್ಲಿ 'ಹ್ಯಾಲಿ ನ್ಯಾಷನಲ್ ಪಾರ್ಕ್' (Hailey National Park) ಎಂದು ಹೆಸರಿಡಲಾಗಿತ್ತು.
ಹೆಸರು ಬದಲಾವಣೆ: ಸ್ವಾತಂತ್ರ್ಯದ ನಂತರ ಇದಕ್ಕೆ 'ರಾಮಗಂಗಾ ನ್ಯಾಷನಲ್ ಪಾರ್ಕ್' ಎನ್ನಲಾಯಿತು. ತದನಂತರ ಜಿಮ್ ಕಾರ್ಬೆಟ್ ಅವರ ನಿಧನದ ನಂತರ, ಅವರ ಗೌರವಾರ್ಥವಾಗಿ 1957 ರಲ್ಲಿ 'ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ' ಎಂದು ಮರುನಾಮಕರಣ ಮಾಡಲಾಯಿತು.
ಹರಿಯುವ ನದಿ: ಈ ಉದ್ಯಾನವನದ ಮಧ್ಯದಲ್ಲಿ ರಾಮಗಂಗಾ ನದಿ (ಗಂಗಾ ನದಿಯ ಉಪನದಿ) ಹರಿಯುತ್ತದೆ.

Continue....👆
172
🌿ಆರಂಭ: ಭಾರತ ಸರ್ಕಾರವು ಹುಲಿಗಳ ಸಂರಕ್ಷಣೆಗಾಗಿ ಹಮ್ಮಿಕೊಂಡ ಪ್ರತಿಷ್ಠಿತ 'ಪ್ರಾಜೆಕ್ಟ್ ಟೈಗರ್' (Project Tiger) ಯೋಜನೆಯನ್ನು ಏಪ್ರಿಲ್ 1, 1973 ರಂದು ಇದೇ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಿಂದಲೇ ಅಧಿಕೃತವಾಗಿ ಪ್ರಾರಂಭಿಸಿತು.
ಹೆಸರಿಡಲಾದ ಪ್ರಭೇದ:
ಜಿಮ್ ಕಾರ್ಬೆಟ್ ಅವರ ಗೌರವಾರ್ಥವಾಗಿ ಅಳಿವಿನಂಚಿನಲ್ಲಿರುವ ಇಂಡೋಚೈನೀಸ್ ಹುಲಿ ಪ್ರಭೇದಕ್ಕೆ 'ಪ್ಯಾಂಥೆರಾ ಟೈಗ್ರಿಸ್ ಕಾರ್ಬೆಟ್ಟಿ' (Panthera tigris corbetti) ಎಂದು ಹೆಸರಿಸಲಾಗಿದೆ
ಪರಿಸರ ಸೂಕ್ಷ್ಮ ಪ್ರದೇಶ:
ಈ ಉದ್ಯಾನವನವು ಹಿಮಾಲಯದ ಶಿವಾಲಿಕ್ ಶ್ರೇಣಿಯ ತಪ್ಪಲಿನಲ್ಲಿದ್ದು, ಇಲ್ಲಿನ ವಿಶಾಲವಾದ ಹುಲ್ಲುಗಾವಲುಗಳನ್ನು 'ಚೌರ್ಸ್' (Chaurs) ಎಂದು ಕರೆಯಲಾಗುತ್ತದೆ.

👉ಪರೀಕ್ಷೆಯ ಸಂಭವನೀಯ ಪ್ರಶ್ನೆಗಳು:

1.ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?
-> ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ (1936).
2.ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹಳೆಯ ಹೆಸರೇನು?
-> ಹ್ಯಾಲಿ ನ್ಯಾಷನಲ್ ಪಾರ್ಕ್.
3.ಪ್ರಾಜೆಕ್ಟ್ ಟೈಗರ್ ದೇಶದಲ್ಲಿ ಎಲ್ಲಿಂದ ಲಾಂಚ್ ಆಯಿತು?
-> ಜಿಮ್ ಕಾರ್ಬೆಟ್ ಪಾರ್ಕ್, 1973.
105
🌳ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ
(FCRA – Foreign Contribution Regulation Act)


ಮಸೂದೆಯ ಹೆಸರು:
ಎಫ್‌ಸಿಆರ್‌ಎ (FCRA) ತಿದ್ದುಪಡಿ ಮಸೂದೆ-2026.
FCRA ಎಂದರೇನು.?
-
FCRA = Foreign Contribution (Regulation) Act
- ಉದ್ದೇಶ: ವಿದೇಶಿ ಹಣದ ದುರುಪಯೋಗ ತಡೆಯುವುದು ಹಾಗೂ ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವುದು.
ಹಿನ್ನೆಲೆ ಮತ್ತು ಉದ್ದೇಶ:
ಭಾರತದ ಆಂತರಿಕ ಭದ್ರತೆ,ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ವಿದೇಶಿ ಹಸ್ತಕ್ಷೇಪದಿಂದ ರಕ್ಷಿಸಲು ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದು ವಿದೇಶಗಳಿಂದ ಬರುವ ಧನಸಹಾಯ ಅಥವಾ ದೇಣಿಗೆಯನ್ನು ನಿಯಂತ್ರಿಸುತ್ತದೆ
ಮೂಲ ಜಾರಿ: ಈ ಕಾಯ್ದೆಯನ್ನು ಮೊದಲ ಬಾರಿಗೆ ತುರ್ತು ಪರಿಸ್ಥಿತಿಯ ಸಮಯದಲ್ಲಿ 1976 ರಲ್ಲಿ ಜಾರಿಗೆ ತರಲಾಯಿತು. ನಂತರ ಇದನ್ನು ರದ್ದುಗೊಳಿಸಿ, ಹೆಚ್ಚು ಕಠಿಣವಾದ FCRA 2010 ಅನ್ನು ತರಲಾಯಿತು.
ನಿರ್ವಹಣೆ: ಈ ಕಾಯ್ದೆಯನ್ನು ಭಾರತ ಸರ್ಕಾರದ ಗೃಹ ಸಚಿವಾಲಯ (Ministry of Home Affairs - MHA) ನಿರ್ವಹಿಸುತ್ತದೆ

ಯಾರು ವಿದೇಶಿ ದೇಣಿಗೆ ಪಡೆಯುವಂತಿಲ್ಲ?
◈ ಚುನಾವಣಾ ಅಭ್ಯರ್ಥಿಗಳು
◈ ಸಂಸದರು (MPs) ಮತ್ತು ಶಾಸಕರು (MLAs)
◈ ನ್ಯಾಯಾಧೀಶರು ಮತ್ತು ಸರ್ಕಾರಿ ನೌಕರರು
◈ ಪತ್ರಿಕೆ/ಮಾಧ್ಯಮದ ಕೆಲವು ವರ್ಗಗಳು
◈ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು.
10🙏1
🌳ಹೊರ್ಮುಜ್ ಜಲಸಂಧಿ ಬಿಕ್ಕಟ್ಟು

ಸ್ಥಳ ಮತ್ತು ಸಂಪರ್ಕ:
ಹೋರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿ (Persian Gulf) ಮತ್ತು ಓಮನ್ ಕೊಲ್ಲಿಯನ್ನು (Gulf of Oman) ಪರಸ್ಪರ ಸಂಪರ್ಕಿಸುತ್ತದೆ.ಇದು ಅರಬ್ಬಿ ಸಮುದ್ರಕ್ಕೆ ಮುಖ ಮಾಡಿದೆ.
ಆರ್ಥಿಕ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆ:
ಇದು ವಿಶ್ವದ ಅತ್ಯಂತ ಪ್ರಮುಖ ಜಲಮಾರ್ಗಗಳಲ್ಲಿ ಒಂದಾಗಿದೆ.ಜಗತ್ತಿನ ಒಟ್ಟು ಕಚ್ಚಾ ತೈಲ (Petroleum) ಬಳಕೆಯ ಸುಮಾರು ಶೇಕಡಾ 20 ರಿಂದ 21 ರಷ್ಟು ಭಾಗವು ಇದೇ ಕಿರಿದಾದ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಸೌದಿ ಅರೇಬಿಯಾ, ಇರಾಕ್, ಯುಎಇ, ಕುವೈತ್ ಮತ್ತು ಕತಾರ್ ದೇಶಗಳ ತೈಲ ರಫ್ತು ಈ ಮಾರ್ಗವನ್ನೇ ಅವಲಂಬಿಸಿದೆ.
ಚೋಕ್ ಪಾಯಿಂಟ್ (Choke Point):
ಇದು ಜಗತ್ತಿನ ಅತ್ಯಂತ ಪ್ರಮುಖ ತೈಲ 'ಚೋಕ್ ಪಾಯಿಂಟ್' (ಆಯಕಟ್ಟಿನ ಸಮುದ್ರ ಮಾರ್ಗ) ಆಗಿದೆ.

👉ಪ್ರಮುಖ ಸಮುದ್ರ ಮಾರ್ಗಗಳು

ಹೋರ್ಮುಜ್ ಜಲಸಂಧಿ
– ಪರ್ಷಿಯನ್ ಕೊಲ್ಲಿ - ಒಮಾನ್ ಕೊಲ್ಲಿ
ಬಾಬ್-ಎಲ್-ಮಂಡೆಬ್
– ಕೆಂಪು ಸಮುದ್ರ - ಏಡನ್ ಕೊಲ್ಲಿ
ಮಲಕ್ಕಾ ಜಲಸಂಧಿ
- ಹಿಂದೂ ಮಹಾಸಾಗರ - ದಕ್ಷಿಣ ಚೀನಾ ಸಮುದ್ರ
ಸೂಯೆಜ್ ಕಾಲುವೆ
– ಮೆಡಿಟರೇನಿಯನ್ - ಕೆಂಪು ಸಮುದ್ರ
ಪನಾಮಾ ಕಾಲುವೆ
– ಅಟ್ಲಾಂಟಿಕ್ - ಪೆಸಿಫಿಕ್ ಮಹಾಸಾಗರ

👉ಪರ್ಷಿಯನ್ ಕೊಲ್ಲಿಯ ಪ್ರಮುಖ ರಫ್ತು
ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ
231
6👌1
👌2
App ಓಪನ್ ಮಾಡಿದ ನಂತರ ಪ್ರಚಲಿತ ಘಟನೆ ಎಂಬ ಫೋಲ್ಡರ್ ಬರುತ್ತೆ ಅದನ್ನು ಓಪನ್ ಮಾಡಿ ಅಲ್ಲಿ ನಿಮಗೆ ಕ್ಲಾಸಿನ ವಿವರವನ್ನು ಸಿಗುತ್ತದೆ
👇👇👇👇👇👇👇👇
Current affairs class details

Step 1 open current affairs folder

Step 2 Dec to June current affairs classes and payment


👇👇👇👇👇👇👇👇👇
Play Store link

Check out "KAS MASTERMIND"
https://play.google.com/store/apps/details?id=com.jdbcko.nwvusy
10
🇮🇳 Sarnath Becomes India's 45th UNESCO World Heritage Site

UNESCO has inscribed Sarnath on the World Heritage List, taking India's total number of UNESCO World Heritage Sites to 45.

📍 About Sarnath

Located in Varanasi, Uttar Pradesh.

It is the place where Lord Buddha delivered his first sermon after attaining enlightenment, marking the beginning of the Dhammachakra Pravartana (Turning of the Wheel of Dharma).
20
ಎಲ್ಲರಿಗೂ ಹೃತ್ಪೂರ್ವಕ ನಮಸ್ಕಾರ. 🙏

KAS MASTERMIND APP ಅನ್ನು ಈಗಾಗಲೇ 10,000+ ಜನರು ಡೌನ್‌ಲೋಡ್ ಮಾಡಿರುವುದು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆಯ ವಿಷಯ.

ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ವಿದ್ಯಾರ್ಥಿಗಳನ್ನು ತಲುಪುತ್ತೇವೆ ಎಂದು ನಾನು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ. ಆದರೆ ನೀವು ತೋರಿದ ಪ್ರೀತಿ, ನಂಬಿಕೆ ಮತ್ತು ಬೆಂಬಲವೇ ಈ ಸಾಧನೆಗೆ ಕಾರಣವಾಗಿದೆ.

ನನ್ನ ಮೇಲೆ ವಿಶ್ವಾಸವಿಟ್ಟು ಈ ಪಯಣದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಮತ್ತು ಶುಭಚಿಂತಕರಿಗೂ ನಾನು ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮ ಈ ಪ್ರೋತ್ಸಾಹಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ.

ಇದು ಕೇವಲ 10,000 ಡೌನ್‌ಲೋಡ್‌ಗಳ ಸಂಭ್ರಮವಲ್ಲ; ಸಾವಿರಾರು ವಿದ್ಯಾರ್ಥಿಗಳ ಕನಸುಗಳನ್ನು ಸಾಕಾರಗೊಳಿಸುವ ನಮ್ಮ ಸಂಕಲ್ಪದ ಮೊದಲ ಹೆಜ್ಜೆಯಾಗಿದೆ.

ಇದೇ ಪ್ರೀತಿ, ಇದೇ ಬೆಂಬಲ ಮುಂದೆಯೂ ಇರಲಿ. ಇನ್ನಷ್ಟು ಉತ್ತಮ ಗುಣಮಟ್ಟದ ಶಿಕ್ಷಣ, ಮಾರ್ಗದರ್ಶನ ಮತ್ತು ಯಶಸ್ಸಿನ ಪಯಣವನ್ನು ನಿಮ್ಮೊಂದಿಗೆ ಮುಂದುವರಿಸುತ್ತೇವೆ.

ಧನ್ಯವಾದಗಳು. ❤️
Team KAS MASTERMIND
23🏆6🫡6
ಪ್ರಚಲಿತ ಪೇಪರ್ 26.07.2026.pdf
16.5 MB
ಪ್ರಚಲಿತ ಪೇಪರ್ 26.07.2026.pdf
1
🌳ರಾಜಧಾನಿಗೆ ದೇಶದ ಮೊದಲ 'ಟೆಕ್ ಮ್ಯೂಸಿಯಂ'

ಸುದ್ದಿ: ಭಾರತದಲ್ಲೇ ಮೊದಲ ಬಾರಿಗೆ ಆವಿಷ್ಕಾರ, ಸ್ಟಾರ್ಟ್‌ಅಪ್ ಮತ್ತು ತಂತ್ರಜ್ಞಾನದ ಇತಿಹಾಸವನ್ನು ಬಿಂಬಿಸುವ 'ಇನ್ನೋವೇಶನ್, ಸ್ಟಾರ್ಟ್‌ಅಪ್ ಆಂಡ್ ಟೆಕ್ನಾಲಜಿ ಮ್ಯೂಸಿಯಂ' (Tech Museum) ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುತ್ತಿದೆ
ಯೋಜನೆ ವೆಚ್ಚ:
ಸುಮಾರು 300 ಕೋಟಿ ರೂ. (ಸಾರ್ವಜನಿಕ-ಖಾಸಗಿ ಸಹಭಾಗಿತ್ವ / PPP ಮಾದರಿಯಲ್ಲಿ).
ಉದ್ದೇಶ:
ಕರ್ನಾಟಕದಲ್ಲಿ ಡೀಪ್-ಟೆಕ್ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರವು 'ಗವರ್ನಮೆಂಟ್ ಫಸ್ಟ್' ನೀತಿಯನ್ನು ಜಾರಿಗೆ ತರುತ್ತಿದೆ.
ಬೆಂಗಳೂರಿನ ಬಿರುದುಗಳು
◉ ಭಾರತದ ಸಿಲಿಕಾನ್ ವ್ಯಾಲಿ
◉ ವಿಜ್ಞಾನ ನಗರಿ
◉ ಭಾರತದ ಸ್ಟಾರ್ಟ್‌ಅಪ್ ರಾಜಧಾನಿ
17
🌳'ಭದ್ರಾ ಮೇಲ್ದಂಡೆ ಯೋಜನೆ'
(Upper Bhadra Project)


ಉದ್ದೇಶ:
ಮಧ್ಯ ಕರ್ನಾಟಕದ ನಿರಂತರ ಬರಪೀಡಿತ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಿಗೆ ನೀರಾವರಿ ಹಾಗೂ ಕುಡಿಯುವ ನೀರನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಭದ್ರಾ ನದಿಯ ಮೂಲ:
ಭದ್ರಾ ನದಿಯು ಚಿಕ್ಕಮಗಳೂರು ಜಿಲ್ಲೆಯ ಮುಡಿಗೇರೆ ತಾಲೂಕಿನ ಕುದುರೆಮುಖದ ಹತ್ತಿರವಿರುವ 'ಗಂಗಾಮೂಲ'ದಲ್ಲಿ ಜನಿಸುತ್ತದೆ. ಇದು ಮುಂದೆ ಶಿವಮೊಗ್ಗದ 'ಕೂಡ್ಲಿ' ಎಂಬಲ್ಲಿ ತುಂಗಾ ನದಿಯೊಂದಿಗೆ ಸೇರಿ 'ತುಂಗಭದ್ರಾ ನದಿ'ಯಾಗಿ ಹರಿಯುತ್ತದೆ.
ರಾಷ್ಟ್ರೀಯ ಯೋಜನೆ ಅಸ್ತಿತ್ವ:
ಭದ್ರಾ ಮೇಲ್ದಂಡೆ ಯೋಜನೆಯು ಕರ್ನಾಟಕದ ಮೊದಲ 'ರಾಷ್ಟ್ರೀಯ ಯೋಜನೆ' (National Project) ಎಂಬ ಮಾನ್ಯತೆ ಪಡೆದ ನೀರಾವರಿ ಯೋಜನೆಯಾಗಿದೆ.
ವಾಣಿ ವಿಲಾಸ ಸಾಗರ (ಮಾರಿ ಕಣಿವೆ):
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ 'ವೇದಾವತಿ' ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿದೆ. ಈ ಯೋಜನೆ ಮೂಲತಃ ವೇದಾವತಿ ನದಿ ಪಾತ್ರಕ್ಕೆ ನೀರನ್ನು ಪೂರೈಸಲು ಸಹಾಯ ಮಾಡುತ್ತದೆ.
❖ ಈ ಯೋಜನೆಯು 4 ಜಿಲ್ಲೆಗಳ 12 ತಾಲೂಕುಗಳ 787 ಹಳ್ಳಿಗಳ ಸುಮಾರು 74.26 ಲಕ್ಷ ಜನರಿಗೆ ತಲುಪುತ್ತದೆ
111
🌳ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಪ್ರಾಚೀನ ಬೌದ್ಧ ತಾಣ ಸಾರನಾಥ ಸೇರ್ಪಡೆ

ಉತ್ತರ ಪ್ರದೇಶದ ವಾರಣಾಸಿ ಹತ್ತಿರವಿರುವ ಪ್ರಾಚೀನ ಬೌದ್ಧ ತಾಣ ಸಾರನಾಥವನ್ನು ಯುನೆಸ್ಕೋ (UNESCO) ವಿಶ್ವ ಪರಂಪರೆಯ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ.
ಕೊರಿಯಾದ ಬುಸಾನ್‌ನಲ್ಲಿ ನಡೆದ ಯುನೆಸ್ಕೋದ ವಿಶ್ವ ಪರಂಪರೆಯ ಸಮಿತಿಯ 48ನೇ ಅಧಿವೇಶನದಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ
1998 ರಿಂದಲೇ ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿದ್ದ ಸಾರನಾಥಕ್ಕೆ ಈಗ ಜಾಗತಿಕ ಮನ್ನಣೆ ದೊರೆತಿದ್ದು,ಇದು ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ.
ಬುದ್ಧನ ಮೊದಲ ಬೋಧನೆ:
ಜ್ಞಾನೋದಯದ ನಂತರ ಗೌತಮ ಬುದ್ಧನು ತನ್ನ ಮೊದಲ ಐದು ಜನ ಶಿಷ್ಯರಿಗೆ 'ಧರ್ಮಚಕ್ರ ಪ್ರವರ್ತನ ಸುಟ್ಟ' (ಧರ್ಮದ ಚಕ್ರದ ಚಲನೆ) ಬೋಧನೆಯನ್ನು ನೀಡಿದ ಪವಿತ್ರ ಸ್ಥಳ ಇದಾಗಿದೆ.
❀ ನಾಲ್ಕು ಪ್ರಮುಖ ಪವಿತ್ರ ತಾಣಗಳಲ್ಲಿ ಒಂದು: ಬೌದ್ಧ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರಗಳಾದ ಲುಂಬಿನಿ (ಜನನ), ಬೋಧಗಯಾ (ಜ್ಞಾನೋದಯ) ಮತ್ತು ಕುಶಿನಗರ (ಮಹಾಪರಿನಿರ್ವಾಣ) ಗಳೊಂದಿಗೆ ಸಾರನಾಥವೂ ಒಂದಾಗಿದೆ.
ಅಶೋಕ ಸ್ತಂಭ ಮತ್ತು ಸಿಂಹ ಲಾಂಛನ:
ಸಾಮ್ರಾಟ್ ಅಶೋಕನು ನಿರ್ಮಿಸಿದ ಸ್ತಂಭದ ಮೇಲಿದ್ದ 'ನಾಲ್ಕು ಸಿಂಹಗಳ ಲಾಂಛನ'ವನ್ನು ಭಾರತ ಸರ್ಕಾರವು ತನ್ನ ರಾಷ್ಟ್ರೀಯ ಲಾಂಛನವಾಗಿ ಅಳವಡಿಸಿಕೊಂಡಿದೆ. ಈ ಮೂಲ ಲಾಂಛನವನ್ನು ಸಾರನಾಥದ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.
14🤝2
🚩2026ರ ಕಾಮನ್‌ವೆಲ್ತ್ ಕ್ರೀಡಾಕೂಟ

ಭಾರತಕ್ಕೆ ಮೊದಲ ಪದಕ:
ಪ್ರಸ್ತುತ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕ್ರೀಡಾಕೂಟದ ಎರಡನೇ ದಿನದಂದು ಭಾರತ ತನ್ನ ಪದಕದ ಖಾತೆಯನ್ನು ತೆರೆದಿದೆ.
ಸಾಧಕ ಕ್ರೀಡಾಪಟು:
ಬಿಹಾರ ಮೂಲದ 28 ವರ್ಷದ ಜೊಂಡು ಕುಮಾರ್ (Jandu Kumar)ಅವರು ಪುರುಷರ ಹೆವಿವೇಟ್ ಪ್ಯಾರಾ ಪವರ್‌ಲಿಫ್ಟಿಂಗ್ (Para Powerlifting)ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಮೊದಲ ಕಂಚಿನ ಪದಕ (Bronze Medal)ತಂದುಕೊಟ್ಟಿದ್ದಾರೆ.
ಆರಂಭ ಮತ್ತು ಮೊದಲ ಆವೃತ್ತಿ: ಕಾಮನ್‌ವೆಲ್ತ್ ಕ್ರೀಡಾಕೂಟವು ಮೊದಲ ಬಾರಿಗೆ 1930 ರಲ್ಲಿ ಕೆನಡಾದ ಹ್ಯಾಮಿಲ್ಟನ್ ನಗರದಲ್ಲಿ ನಡೆಯಿತು
ಹಳೆಯ ಹೆಸರುಗಳು:
ಆರಂಭದಲ್ಲಿ ಇದನ್ನು 'ಬ್ರಿಟಿಷ್ ಎಂಪೈರ್ ಗೇಮ್ಸ್' (1930–1950) ಮತ್ತು 'ಬ್ರಿಟಿಷ್ ಕಾಮನ್‌ವೆಲ್ತ್ ಗೇಮ್ಸ್' (1970–1974)ಎಂದು ಕರೆಯಲಾಗುತ್ತಿತ್ತು.1978 ರಿಂದ ಅಧಿಕೃತವಾಗಿ 'ಕಾಮನ್‌ವೆಲ್ತ್ ಗೇಮ್ಸ್' ಎಂದು ಹೆಸರಿಸಲಾಯಿತು.
ಆವರ್ತನ:
ಈ ಕ್ರೀಡಾಕೂಟವನ್ನು ಒಲಿಂಪಿಕ್ಸ್ ಮಾದರಿಯಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ.
ಭಾರತದಲ್ಲಿ ಕಾಮನ್‌ವೆಲ್ತ್:
ಭಾರತವು 2010 ರಲ್ಲಿ ನವದೆಹಲಿಯಲ್ಲಿ 19ನೇ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿತ್ತು.
ಮುಂದಿನ ಆವೃತ್ತಿ (2030): ಕಾಮನ್‌ವೆಲ್ತ್ ಕ್ರೀಡಾಕೂಟವನ್ನು (ಶತಮಾನೋತ್ಸವ ಆವೃತ್ತಿ) ಭಾರತದ ಅಹಮದಾಬಾದ್ ನಗರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
20
🌳'ಭವ್ಯ ರಸಾಯನ ಯೋಜನೆ'
(BHAVYA Rasayan Scheme)


◆ 'ಭವ್ಯ ರಸಾಯನ ಯೋಜನೆ' ಎಂದರೇನು.?
ದೇಶದಲ್ಲಿ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಒಂದು ಮಹತ್ವದ ಕೈಗಾರಿಕಾ ಯೋಜನೆಯಾಗಿದೆ.
◆ ಇದರ ಪೂರ್ಣ ಹೆಸರು 'ಭಾರತ್ ಔದ್ಯೋಗಿಕ್ ವಿಕಾಸ ಯೋಜನಾ ರಸಾಯನ್'(Bharat Audyogik Vikas Yojana Rasayan) ಎಂದಾಗಿದ್ದು,2026ರ ಜುಲೈ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ಇದಕ್ಕೆ ಅಧಿಕೃತ ಅನುಮೋದನೆ ನೀಡಿದೆ.
ಯೋಜನೆಯ ಮುಖ್ಯ ಉದ್ದೇಶ:
ಭಾರತದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮೂರು ಪ್ರತ್ಯೇಕ ಮೀಸಲಾದ ರಾಸಾಯನಿಕ ಉದ್ಯಾನವನಗಳನ್ನು (3 Chemical Parks) ಸ್ಥಾಪಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಸಚಿವಾಲಯ:
ಈ ಯೋಜನೆಯು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ (Ministry of Chemicals & Fertilizers) ವ್ಯಾಪ್ತಿಗೆ ಬರುತ್ತದೆ.
ಜಾಗತಿಕ ಸ್ಥಾನಮಾನ:
ಭಾರತವು ರಾಸಾಯನಿಕ ಉತ್ಪಾದನೆಯಲ್ಲಿ ಪ್ರಸ್ತುತ ಜಗತ್ತಿನಲ್ಲಿ 6ನೇ ಅತಿ ದೊಡ್ಡ ದೇಶ ಮತ್ತು ಏಷ್ಯಾದಲ್ಲಿ 3ನೇ ಸ್ಥಾನದಲ್ಲಿದೆ.
ಅವಧಿ:
ಈ ಯೋಜನೆಯು 2026-27ನೇ ಹಣಕಾಸು ವರ್ಷದಿಂದ 2030-31ರವರೆಗೆ ಒಟ್ಟು 5 ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ.
8
🚩 ಉತ್ತರಗಳು

✯ ಜೆಲ್ಲಿಫಿಶ್ (Jellyfish)
✯ ಮುಹಮ್ಮದ್ ಕುಲಿ ಕುತುಬ್ ಶಾ
✯ ಬಚೇಂದ್ರಿ ಪಾಲ್
✯ ಆಚಾರ್ಯ ವಿನೋಬಾ ಭಾವೆ
✯ ಟೋಕಿಯೋ (Tokyo)
✯ ಇಥಿಯೋಪಿಯಾ (Ethiopia)
✯ ಜಾನ್ ಲಾಕ್ (John Locke)
✯ ಸಾಂಟಾ ಮರಿಯಾ,ಪಿಂಟಾ ಮತ್ತು ನಿನಾ
✯ ಆಂಡ್ರ್ಯೂ ಜಾಕ್ಸನ್ (Andrew Jackson)
✯ ಕಿತ್ತೂರು ರಾಣಿ ಚೆನ್ನಮ್ಮ
15
🍄‘ಹೆಬ್ಬಕ’ (Great Indian Bustard - GIB)

ವೈಜ್ಞಾನಿಕ ಹೆಸರು:
ಆರ್ಡಿಯೋಟಿಸ್ ನೈಗ್ರಿಸೆಪ್ಸ್ (Ardeotis nigriceps). ಇದು ಹಾರುವ ಪಕ್ಷಿಗಳಲ್ಲಿ ಅತ್ಯಂತ ಭಾರವಾದ ಪಕ್ಷಿಗಳಲ್ಲಿ ಒಂದಾಗಿದೆ.
ಆವಾಸಸ್ಥಾನ (Habitat):
ಇವು ಮುಖ್ಯವಾಗಿ ಒಣ ಹಸಿರು ಹುಲ್ಲುಗಾವಲುಗಳು (Dry grasslands) ಮತ್ತು ಮುಳ್ಳುಪೊದೆಗಳಿರುವ ಅರೆ-ಬರಡು ಪ್ರದೇಶಗಳಲ್ಲಿ ವಾಸಿಸುತ್ತವೆ.
ಸೂಚಕ ಪ್ರಭೇದ (Indicator Species):
ಪತ್ರಿಕೆಯಲ್ಲಿ ಉಲ್ಲೇಖಿಸಿರುವಂತೆ, ಹೆಬ್ಬಕವನ್ನು ಹುಲ್ಲುಗಾವಲು ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಅಳೆಯುವ ‘ಸೂಚಕ ಪ್ರಭೇದ’ ಎಂದು ಪರಿಗಣಿಸಲಾಗುತ್ತದೆ.
ಕರ್ನಾಟಕದಲ್ಲಿ ಆವಾಸಸ್ಥಾನ:
ಕರ್ನಾಟಕದಲ್ಲಿ ಇವು ಮುಖ್ಯವಾಗಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಮತ್ತು ಸುತ್ತಮುತ್ತಲಿನ ಒಣ ಹುಲ್ಲುಗಾವಲು ಪ್ರದೇಶಗಳಲ್ಲಿ ಕಂಡುಬರುತ್ತವೆ.
ರಾಜ್ಯ ಪಕ್ಷಿ ಸ್ಥಾನಮಾನ:
ಇದು ಭಾರತದ ರಾಜಸ್ಥಾನ ರಾಜ್ಯದ ಅಧಿಕೃತ ರಾಜ್ಯ ಪಕ್ಷಿಯಾಗಿದೆ (ಅಲ್ಲಿ ಇದನ್ನು 'ಗೋದಾವನ್' ಎಂದು ಕರೆಯಲಾಗುತ್ತದೆ)
ಬಳ್ಳಾರಿ ಭಾಗದ ವಿಶೇಷತೆ:
ಇಡೀ ಕರ್ನಾಟಕದಲ್ಲಿ ಹೆಬ್ಬಕಗಳು ಕಾಣಸಿಗುವ ಕೊನೆಯ ಆಶ್ರಯತಾಣ ಎಂದರೆ ಅದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಭಾಗ ಮಾತ್ರ ಎಂದು ವರದಿ ಹೇಳುತ್ತದೆ.
ಸಂತಾನೋತ್ಪತ್ತಿ ಕೇಂದ್ರ:
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಹೆಬ್ಬಕಗಳ ಕೃತಕ ಸಂತಾನೋತ್ಪತ್ತಿ ಕೇಂದ್ರವನ್ನು (Captive Breeding Centre) ಸ್ಥಾಪಿಸಲಾಗಿದೆ.
14
🌳ಹುಲಿ ಸಂರಕ್ಷಣೆ

ರಾಷ್ಟ್ರೀಯ ಪ್ರಾಣಿ:
ಹುಲಿ (Scientific Name: Panthera tigris) ಭಾರತದ ರಾಷ್ಟ್ರೀಯ ಪ್ರಾಣಿಯಾಗಿದೆ
ವಿಶ್ವ ಹುಲಿ ದಿನ (World Tiger Day):
ಪ್ರತಿ ವರ್ಷ ಜುಲೈ 29 ರಂದು ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ
NTCA (National Tiger Conservation Authority): ಇದು ಭಾರತದಲ್ಲಿ ಹುಲಿ ಯೋಜನೆಗಳನ್ನು ಮೇಲ್ವಿಚಾರಣೆ ಮಾಡುವ ಶಾಸನಬದ್ಧ ಸಂಸ್ಥೆಯಾಗಿದೆ (ಸ್ಥಾಪನೆ: 2005)
ಹುಲಿಗಳ ಸಂಖ್ಯೆಯಲ್ಲಿ 2ನೇ ಸ್ಥಾನ:
2022 ರ ಹುಲಿ ಗಣತಿಯ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವು ದ್ವಿತೀಯ (2ನೇ) ಸ್ಥಾನದಲ್ಲಿದೆ (563 ಹುಲಿಗಳು). ಮೊದಲ ಸ್ಥಾನದಲ್ಲಿ ಮಧ್ಯಪ್ರದೇಶ (785 ಹುಲಿಗಳು) ಇದೆ.
ಎಂ-ಸ್ಟ್ರಿಪ್ಸ್ (M-STrIPES):
ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಗಸ್ತು ತಿರುಗಲು ಮತ್ತು ಹುಲಿಗಳ ಉಸ್ತುವಾರಿಗಾಗಿ ಅರಣ್ಯ ಇಲಾಖೆ ಬಳಸುವ ಅತ್ಯಾಧುನಿಕ ಸಾಫ್ಟ್‌ವೇರ್ ಆಧಾರಿತ ಆ್ಯಪ್ ಇದಾಗಿದೆ (Monitoring System for Tigers - Intensive Protection and Ecological Status).
ಕೇಂದ್ರ ಸರ್ಕಾರದ ಇತ್ತೀಚಿನ ಉಪಕ್ರಮ:
ಭಾರತವು ಜಾಗತಿಕ ಮಟ್ಟದಲ್ಲಿ ಹುಲಿ ಸೇರಿದಂತೆ 7 ಪ್ರಮುಖ ಬಿಗ್ ಕ್ಯಾಟ್‌ಗಳ ಸಂರಕ್ಷಣೆಗಾಗಿ ‘ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್’ (IBCA) ಅನ್ನು ಪ್ರಾರಂಭಿಸಿದೆ.
12🏆1