Achievers coaching centre shivamogga(Official)
9.97K subscribers
4.81K photos
9 videos
2.2K files
2.47K links
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ
YouTube link
https://www.youtube.com/channel/UCmRHV
contact :-7812926702
Download Telegram
🌹🌹ಇಂದು ಸಂಜೆ 7:00 ಗಂಟೆಗೆ Online Quiz ಪ್ರಾರಂಭವಾಗಲಿದೆ.🌺🌺

ಭಾಗವಹಿಸಲು ಕೆಳಗಿನ ಲಿಂಕ್ ಅನ್ನು ಒತ್ತಿ ⬇️

🔜 https://t.me/studykitA2Z

Believe in yourself, Everything is Possible👍💪🙏
ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸುವ ವಿಧಿ...ಯಿಂದ .....ವರಗೆ
Anonymous Quiz
59%
12-35
20%
12-32
14%
14-32
7%
14-35
ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸುವ ಭಾಗ........
Anonymous Quiz
9%
II
75%
III
8%
V
8%
VI
ಮೂಲಭೂತ ಹಕ್ಕುಗಳನ್ನು ಸಂಸತ್ತು ತಿದ್ದುಪಡಿ ಮಾಡುವ ಅಧಿಕಾರ ಹೊಂದಿಲ್ಲ. ಎಂದು ಯಾವ ಪ್ರಕರಣದಲ್ಲಿ ಹೇಳಿದೆ?
Anonymous Quiz
29%
ಗೋಲಕನಾಥ Vs ಪಂಜಾಬ್ ರಾಜ್ಯ
51%
ಕೇಶವಾನಂದ ಭಾರತೀ Vs ಕೇರಳ ರಾಜ್ಯ
10%
A K ಗೋಪಾಲನ್ vs ಮದ್ರಾಸ್ ರಾಜ್ಯ
10%
ಗೋಲಕನಾಥ Vs ಪಂಜಾಬ್ ರಾಜ್ಯ
ಕೇಶವಾನಂದ ಭಾರತೀ Vs ಕೇರಳ ರಾಜ್ಯ
Supreme Court ಸಂವಿಧಾನದ ಮೂಲ ರಚನೆಗೆ ಧಕ್ಕೆ ಬಾರದಂತೆ ತಿದ್ದುಪಡಿ ಮಾಡಬಹುದು ಎಂದು ತೀರ್ಪು ನೀಡಿತು.

A K ಗೋಪಾಲನ್ Vs ಮದ್ರಾಸ್ ರಾಜ್ಯ
ಹೇಬಿಯಸ್ ಕಾರ್ಪಸ್ ಗೆ ಸಂಭಂಧಿಸಿದ ತೀರ್ಪು

ಶಂಕರಿ ಪ್ರಸಾದ್ Vs ಭಾರತ ಸರ್ಕಾರ
1951ರಲ್ಲಿ 1ನೇ ತಿದ್ದುಪಡಿಯಲ್ಲಾದ
ಖಾಸಗಿ ಆಸ್ತಿ ಹಕ್ಕನ್ನು ನಿಯಂತ್ರಿಸುವ ತಿದ್ದುಪಡಿಗೆ ಸಂಬಂಧಿಸಿದಂತೆ
ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಯಿತು.
ಈ ಮೊಕದ್ದಮೆಯಲ್ಲಿ
ಸಂಸತ್ತು ಮೂಲಭೂತ ಹಕ್ಕುಗಳಿಗೆ ತಿದ್ದುಪಡಿ ತರಬಹುದೆಂದು ತೀರ್ಪನ್ನು ನೀಡಿತು.


ಗೋಲಕನಾಥ Vs ಪಂಜಾಬ್ ರಾಜ್ಯ
1967ರಲ್ಲಿ 11ಜನರ ನ್ಯಾಯ ಪೀಠ..
ಸಂವಿಧಾನದ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಬಾರದೆಂದು ತೀರ್ಪು ನೀಡಿತು.
ಬಂದಿತ ವ್ಯಕ್ತಿಯನ್ನು...........ಗಂಟೆಯ ಒಳಗಾಗಿ ನ್ಯಾಯಾಲಯದ ಮುಂದೆ ಹಾಜರಪಡಿಸಬೇಕು?
Anonymous Quiz
2%
10
4%
6
7%
12
86%
24
ಕೇಳ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿ ಮಿರಿ ತೀರ್ಪು ನಿಷೇಧಿಸುಲು ಹೊರಡಿಸುವ ರಿಟ್ ಯಾವುದು. ?
Anonymous Quiz
14%
Habeas corpus
25%
Mandamus
45%
Prohibition
16%
Certiorari
ಕಾನೂನಿನ ಆದಾರವಿಲ್ಲದೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುವ ಹಾಗಿಲ್ಲ ಎಂದು ತಿಳಿಸುವ ವಿಧಿ.?
Anonymous Quiz
18%
24
28%
22
21%
20
33%
21
ಸಮಾನ ವೇತನ ಕಾಯ್ದೆ ಜಾರಿಗೆ ಬಂದದ್ದು. ?
Anonymous Quiz
12%
1974
18%
1975
60%
1976
9%
1977
ವಿಶ್ವ ಸಂಸ್ಥೆಯು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಎಲ್ಲಿ ಮತ್ತು ಯಾವಾಗ ಮಾಡಿತು.?
Anonymous Quiz
31%
Dec-10-1948 ಪ್ಯಾರಿಸ್
22%
NOV-10-1948 ಪ್ಯಾರಿಸ್
44%
Dec-10-1948 New York
4%
Nov-10-1948 New York
ಚುರಿಯಾ ಬೆಟ್ಟಗಳು ಎಂದೂ ಕರೆಯಲ್ಪಡುವ ಸಿವಾಲಿಕ್ ಬೆಟ್ಟಗಳು ಸಿಂಧೂ ನದಿಯಿಂದ ಪೂರ್ವಕ್ಕೆ 2,400 ಕಿ.ಮೀ (1,500 ಮೈಲಿ) ದೂರದಲ್ಲಿ ಬ್ರಹ್ಮಪುತ್ರ ನದಿಗೆ ಹತ್ತಿರದಲ್ಲಿದೆ, ಇದು ಭಾರತದ ಉಪಖಂಡದ ಉತ್ತರ ಭಾಗಗಳಲ್ಲಿ ವ್ಯಾಪಿಸಿರುವ ಹೊರಗಿನ ಹಿಮಾಲಯದ ಪರ್ವತ ಶ್ರೇಣಿಯಾಗಿದೆ.

🍀ಇದು 10–50 ಕಿಮೀ (6.2–31.1 ಮೈಲಿ) ಅಗಲವಿದೆ, ಸರಾಸರಿ 1,500–2,000 ಮೀ (4,900–6,600 ಅಡಿ) ಎತ್ತರವಿದೆ.
ಅಸ್ಸಾಂನ ಟೀಸ್ಟಾ ಮತ್ತು ರೈಡಾಕ್ ನದಿಗಳ ನಡುವೆ ಸುಮಾರು 90 ಕಿ.ಮೀ (56 ಮೈಲಿ) ಅಂತರವಿದೆ.

🍀ಕಲವು ಸಂಸ್ಕೃತ ಗ್ರಂಥಗಳಲ್ಲಿ, ಈ ಪ್ರದೇಶವನ್ನು ಮನಕ್ ಪರ್ಬತ್(Manak Parbat) ಎಂದು ಕರೆಯಲಾಗುತ್ತದೆ. ಶಿವಾಲಿಕ್ ಎಂದರೆ 'ಶಿವನ ಒತ್ತಡಗಳು(tresses of Shiva)'. ಸಿವಾಲಿಕ್ ಪ್ರದೇಶವು Soanian archaeological ಸಂಸ್ಕೃತಿಗೆ ನೆಲೆಯಾಗಿದೆ.
ಪತ್ಕಾಯಿ ನಾಗಾ ಬೆಟ್ಟಗಳ ಸಾಲು ಭಾರತವನ್ನು ಇದರಿಂದ ಪ್ರತ್ಯೇಕಿಸುತ್ತದೆ...
Anonymous Quiz
37%
ಟಿಬೆಟ್
14%
ಚೀನಾ
46%
ಬರ್ಮಾ
3%
ಪಾಕಿಸ್ತಾನ
ಭಾರತದಲ್ಲಿ ಮ್ಯುಚ್ಯುಯಲ್ ಫಂಡ್ ಮತ್ತು ಷೇರು ಮಾರುಕಟ್ಟೆಯ ನಿಯಂತ್ರಣ ಅಧಿಕಾರ ಯಾರಿಗಿದೆ ?
Anonymous Quiz
3%
ಭಾರತ ಸರ್ಕಾರ
20%
ಭಾರತದ ರಿಸರ್ವ ಬ್ಯಾಂಕ್
64%
SEBI
12%
ಷೇರು ವಿನಿಮಯ ಕ್ರೇಂದ್ರಗಳು
: “ ಇಂಡಿಯಾ ಡಿವೈಡೆಡ್ “ ಈ ಪುಸ್ತಕದ ಲೇಖಕರ ಹೆಸರನ್ನು ಗುರುತಿಸಿ ?
Anonymous Quiz
18%
ಅಬ್ದುಲ್ ಕಲಾಂ ಆಜಾದ್
18%
ಸದಾ೯ರ್ ಪಟೇಲ್
46%
ರಾಜೇಂದ್ರ ಪ್ರಸಾದ್
17%
ಪಂಡಿತ ನೆಹರು
“ ಇಂದಿರಾ ಪಾಯಿಂಟ್ “ ಎಲ್ಲಿದೆ ?
Anonymous Quiz
4%
ಸಿಕ್ಕಿಂ
12%
ಲಡಾಖ್
77%
ನಿಕೋಬಾರ್
6%
ಅರುಣಚಲ ಪ್ರದೇಶ
ಆಡಳಿತದ ಅಠಾರ ಕಚೇರಿ ವ್ಯವಸ್ಥೆಯನ್ನು ಜಾರಿಗೆ ತಂದ ಮೈಸೂರಿನ ದೊರೆ ಯಾರು ?
Anonymous Quiz
8%
ರಾಜ ಒಡೆಯರ್
71%
ಚಿಕ್ಕದೇವರಾಜ ಒಡೆಯರ್
11%
ದೊಡ್ಡ ದೇವರಾಜ ಒಡೆಯರ್
9%
ಕಂಠೀರವ ನರಸರಾಜ ಒಡೆಯರ್
ಮೈಸೂರು ಸಂಸ್ಥಾನ


• ಇವರು ಮೊದಲು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ಮಾಡುತ್ತಿದ್ದರು.

• ಮೂಲ ಹೆಸರು : ಮಹಿಷಿ ಮಂಡಲ

• ರಾಜಧಾನಿ : ಶ್ರೀರಂಗಪಟ್ಟಣ

• ರಾಜ್ಯಲಾಂಛನ : ಗಂಡಭೇರುಂಡ / ಗರುಡ

• ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ



ಯದುರಾಯ


• ಮೂಲಪ್ರದೇಶವಾದ ದ್ವಾರಕೆಯಿಂದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಹೊರಟಾಗ ಮಾರ್ಗಮಧ್ಯದಲ್ಲಿರುವ ಹದಿನಾಡಿನ ರಾಜಕುಮಾರಿಯಾದ ಚಿಕ್ಕದೇವರಸಿಯನ್ನು ಮದುವೆಯಾಗಿ ಹದಿನಾಡಿನ ಮುಖ್ಯಸ್ಥನಾದನು.

• ಈತನಿಂದಲೇ ಮೈಸೂರು ಸಂಸ್ಥಾನಕ್ಕೆ ಒಡೆಯನೆಂಬ ಹೆಸರು ಬಂದಿತು.

• ಈತನ ವಂಶ : ಯದುವಂಶ ಅಥವಾ ಕೃಷ್ಣವಂಶ

• ಈತನ ರಾಜಧಾನಿ : ಶ್ರೀರಂಗಪಟ್ಟಣ



ರಾಜಒಡೆಯರ್


• ಪ್ರಥಮಾರ್ಧದ ಪ್ರಸಿದ್ಧ ಅರಸನಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಸಂಸ್ಥಾನ ಬೇರ್ಪಡಿಸಿ ಸ್ವತಂತ್ರ ರಾಜ್ಯ ಕಟ್ಟಿದನು.

• ಮೈಸೂರಿನಲ್ಲಿ ಮಹಾನವಮಿ ಅಥವಾ ದಸರಾ ಉತ್ಸವ ಆರಂಭಿಸಿದನು.


ದೇವಾಲಯಗಳು :

೧. ಮೈಸೂರಿನಲ್ಲಿ ಚಾಮುಂಡೇಶ್ವರಿ

೨. ಮೈಸೂರಿನಲ್ಲಿ ಲಕ್ಷ್ಮೀರಮಣಸ್ವಾಮಿ

೩. ಶ್ರೀರಂಗಪಟ್ಟಣಲ್ಲಿ ಶ್ರೀರಂಗನಾಥವಿಠಲ

೪. ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಸ್ಥಾನ ನಿರ್ಮಿಸಿ,

೫. ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದನು.



ದೊಡ್ಡದೇವರಾಜ ಒಡೆಯರ್


• ಚಾಮುಂಡೇಶ್ವರಿ ದೇವಾಲಯಕ್ಕೆ ಮೆಟ್ಟಿಲು ಹಾಕಿಸಿ, ಮಧ್ಯದಲ್ಲಿ ನಂದಿವಿಗ್ರಹ ಪ್ರತಿಷ್ಠಾಪಿಸಿದನು.



೬ನೇ ಚಾಮರಾಜ ಒಡೆಯರ್


• ಈತನು ಶೈವಮತ ಪ್ರಚಾರ ಮಾಡಿದ್ದಕ್ಕಾಗಿ ಷಡ್ದರ್ಶನ ಪ್ರತಿಷ್ಠಾಪಕ ಎಂಬ ಬಿರುದು ಪಡೆದನು.

• ಈತನ ಕಾಲದಲ್ಲಿ ಆಡಳಿತದ ಅನುಕೂಲಕ್ಕಾಗಿ ದಳವಾಯಿ ಹುದ್ದೆ ಸೃಷ್ಠಿಯಾಯಿತು.

• ಈತನ ಮತ್ತು ಮೈಸೂರಿನ ಮೊದಲ ದಳವಾಯಿ - ಬೆಟ್ಟದರಸು.



೧ ನೇ ಕಂಠೀರವ ನರಸರಾಜ ಒಡೆಯರ್


• ಈತನು ಕತ್ತಿವರಸೆ ಕಾಳಗದಲ್ಲಿ ಅತ್ಯಂತ ಪರಿಣಿತನಾಗಿದ್ದಕ್ಕಾಗಿ ರಣಧೀರ ಎಂಬ ಬಿರುದು ಪಡೆದ.

• ಈತನು ಕಂಠೀರವ ಪಣ ಎಂಬ ನಾಣ್ಯವನ್ನು ಚಲಾವಣೆಗೆ ತಂದನು.

• ರೈತರ ನೀರಾವರಿಗಾಗಿ ಬಂಗಾರದೊಡ್ಡಿ ಕಾಲುವೆ ನಿರ್ಮಿಸಿದನು.



ಚಿಕ್ಕದೇವರಾಜ ಒಡೆಯರ್ (೧೬೬೧-೧೭೦೪)


• ಈತನು ಮೈಸೂರಿನ ಪ್ರಸಿದ್ಧ ಒಡೆಯ.


ದಾಳಿಗಳು :

• ೧೬೬೭ ರಲ್ಲಿ ಬಿಜಾಪುರದ ರಣದುಲ್ಲಾಖಾನನನ್ನು ಸೋಲಿಸಿದನು.

• ೧೬೭೭ ರಲ್ಲಿ ಮರಾಠರ ಪ್ರಸಿದ್ಧ ಅರಸನಾದ ಶಿವಾಜಿಯು ಮೈಸೂರಿನ ಮೇಲೆ ದಾಳಿ ಕೈಗೊಂಡಾಗ ಆತನನ್ನು ಸಂಪೂರ್ಣವಾಗಿ ಸೋಲಿಸಿ ಮೈಸೂರಿನ ಸೈನ್ಯವನ್ನು ಮಹಾರಾಷ್ಟ್ರದ ಗಡಿಯವರೆಗೆ ಮುನ್ನುಗ್ಗಿಸಿದ್ದಕ್ಕಾಗಿ ಮಹಾರಾಷ್ಟ್ರ ಭೂಪಾಲ ಜಾರಿಪು ಮತ್ತು ಅಪ್ರತಿಮ ವೀರ ಎಂಬ ಬಿರುದು ಪಡೆದನು.

• ೧೬೮೭ ರಲ್ಲಿ ಔರಂಗಜೇಬನ ಸೇನಾಪತಿಯಾದ ಖಾಸಿಂಖಾನ್ ನಿಂದ ಬೆಂಗಳೂರನ್ನು ಪಡೆದುಕೊಂಡನು. ಆಗ ಔರಂಗಜೇಬ ಈತನಿಗೆ ರಾಜಾಜಗದೇವ ಎಂಬ ಬಿರುದು ನೀಡಿದನು.


ಸಾಧನೆಗಳು :

• ಆಡಳಿತದ ಅನುಕೂಲಕ್ಕಾಗಿ ಅಠಾರಿ ಕಛೇರಿ ಜಾರಿಗೆ ತಂದನು.

• ಬರಿದಾದ ರಾಜಭಂಡಾರವನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ನವಕೋಟಿ ನಾರಾಯಣ ಎಂಬ ಬಿರುದು ಧರಿಸಿದನು.

• ವೈಷ್ಣವ ಮತಪ್ರಚಾರ ಮಾಡಿದ್ದಕ್ಕಾಗಿ ವೈಷ್ಣವ ಮತ ಪ್ರತಿಷ್ಠಾಪಕ ಬಿರುದು ಧರಿಸಿದನು.

• ಆಡಳಿತದ ಅನುಕೂಲಕ್ಕಾಗಿ ಬಾರಾಬಲೂತಿ ಪದ್ಧತಿ ಜಾರಿಗೆ ತಂದನು.

• ರೈತರ ನೀರಾವರಿಗಾಗಿ ದೊಡ್ಡದೇವರಾಜ ಮತ್ತು ಚಿಕ್ಕದೇವರಾಜ ನಾಲೆಗಳನ್ನು ಆರಂಭಿಸಿದನು.

• ಈತನು ಸ್ವತಃ ಸಾಹಿತಿಯಾದ ಒಡೆಯನಾಗಿದ್ದನು.


ಇತರ ಬಿರುದುಗಳು :

• ಕರ್ನಾಟಕದ ಚಕ್ರವರ್ತಿ
• ರಾಜರ್ಷಿ
• ಮಹರ್ಷಿ


ಸಾಹಿತ್ಯ :


೧. ಚಿಕ್ಕದೇವರಾಜ ಒಡೆಯರ್ :

• ಗೀತಗೋಪಾಲ
• ಭಾಗವತ
• ಶೇಷ ಧರ್ಮ
• ಚಿಕ್ಕದೇವರಾಜ ಭಿನ್ನಪ
• ಭಾರತ

೨. ತಿರುಮಲಾರ್ಯ :

• ಅಪ್ರತಿಮ ವೀರ ಚರಿತೆ(ಲಕ್ಷಣ ಗ್ರಂಥ)
• ಚಿಕ್ಕದೇವರಾಜ ವಂಶಾವಳಿ
• ದೇವರಾಜ ವಂಶಾವಳಿ


೩. ಸಿಂಗಾರಾರ್ಯ :

• ಮಿತ್ರವಿಂದಾ ಗೋವಿಂದ

(ಕನ್ನಡದ ಪ್ರಥಮ ನಾಟಕ)


೪. ಸಂಚಿಹೊನ್ನಮ್ಮ :

• ಹದಿಬದೆಯ ಧರ್ಮ (ಸಾಂಗತ್ಯ ಕೃತಿ)


೫. ಲಕ್ಷ್ಮೀಶ :

• ಜೈಮಿನಿ ಭಾರತ



೨ ನೇ ಕಂಠೀರವ ನರಸರಾಜ ಒಡೆಯರ್


• ಈತನು ಕಿವುಡ ಮತ್ತು ಮೂಕನಾದ ಒಡೆಯನಾಗಿದ್ದಕ್ಕಾಗಿ ಮತ್ತೆ ದಳವಾಯಿ ಹುದ್ದೆ ಸೃಷ್ಠಿಯಾಯಿತು.

• ಈತನ ಪ್ರಥಮ ದಳವಾಯಿ : ದೇವರಾಜಯ್ಯ

• ಈತನ ದ್ವಿತೀಯ ದಳವಾಯಿ : ನಂಜರಾಜ



ನಂಜರಾಜ


• ಈತನು ಸರ್ವಾಧಿಕಾರಿ ದಳವಾಯಿ ಆಗಿದ್ದು ರೈತರ ಮೇಲೆ ಅಧಿಕ ತೆರಿಗೆ ಹೇರಿದಾಗ ದಿಂಡಿಗಲ್ಲಿನ ಫೌಜುದಾರನಾಗಿದ್ದ ಹೈದರಾಲಿಯು ನಂಜರಾಜನನ್ನು ಉಚ್ಛಾಟನೆ ಮಾಡಿ ೭ ನೇ ಚಾಮರಾಜ ಒಡೆಯನ ಕಾಲದಲ್ಲಿ ಮೈಸೂರಿನ ಸರ್ವಾಧಿಕಾರಿಯಾದನು.



ಆಧುನಿಕ ಮೈಸೂರಿನ ಇತಿಹಾಸ

(೧೭೬೧-೧೯೪೮)

• ಈ ಅವಧಿಯ ಮಧ್ಯಭಾಗದಲ್ಲಿ ಹೈದರಲಿ ಮತ್ತು ಟಿಪ್ಪು ಸುಲ್ತಾನ ಆಳ್ವಿಕೆ ಮಾಡಿದರು.


ಮಧ್ಯಂತರ ಮುಸ್ಲಿಮರ ಆಳ್ವಿಕೆ

(೧೭೬೧-೧೭೯೯)

• ಈ ಅವಧಿಯಲ್ಲಿಯೇ ಬ್ರಿಟಿಷರೊಂದಿಗೆಯುದ್ಧಗಳು ಪ್ರಾರಂಭವಾದವು.

• ಅವೇ ಆಂಗ್ಲೋ-ಮೈಸೂರು ಯುದ್ಧಗಳು (೧೭೬೭-೧೭೯೯)

ಉದ್ದೇಶ :

ಬ್ರಿಟೀಷರು ಮೈಸೂರು ಸಂಸ್ಥಾನದ ಮೇಲೆ ಹಿಡಿತ ಸಾಧಿಸಲು


ಪ್ರಥಮ ಆಂಗ್ಲೋ-ಮೈಸೂರು ಯುದ್ಧ (೧೭೬೭-೬೯)

ದ್ವಿತೀಯ ಆಂಗ್ಲೋ-ಮೈಸೂರು ಯುದ್ಧ (೧೭೮೦-೮೪)

ತೃತೀಯ ಆಂಗ್ಲೋ-ಮೈಸೂರು ಯುದ್ಧ (೧೭೯೦-೯೨)

೪ ನೇ ಆಂಗ್ಲೋ-ಮೈಸೂರು ಯುದ್ಧ (೧೭೯೯)



ಪ್ರಥಮ ಆಂಗ್ಲೋ-ಮೈಸೂರು ಯುದ್ಧ (೧೭೬೭-೬೯)

ಕಾರಣಗಳು :

೧. ಮೈಸೂರಿನ ಮೇಲೆ ಹಿಡಿತ ಸಾಧಿಸಲು

೨. ಬ್ರಿಟೀಷರು ಹೈದರಾಬಾದಿನ ನಿಜಾಮನ ಮೇಲೆ ದಾಳಿ ಮಾಡುವ ಮೊದಲು ಹೈದರನಿಗೆ ಸೈನಿಕ ನೆರವು ಕೇಳಿದರು. ಆಗ ಹೈದರಲಿ ತಿರಸ್ಕರಿಸಿದನು.

ಘಟನೆ :

• ಈ ಯುದ್ಧದಲ್ಲಿ ಬ್ರಿಟೀಷ್ ಸೇನಾಪತಿ ಕರ್ನಲ್ ಸ್ಮಿತ್ ಮತ್ತು ಹೈದರನ ನಡುವೆ ಹಲವು ಕಡೆ ಕದನ ನಡೆಯಿತು.

• ಆಗ ಹೈದರಲಿ ಬ್ರಿಟೀಷರನ್ನು ಸಂಪೂರ್ಣವಾಗಿ ಸೋಲಿಸಿ ಮದ್ರಾಸಿನವರೆಗೆ ಬೆನ್ನಟ್ಟಿದನು. ಆಗ ಸೋತ ಬ್ರಿಟೀಷರು ಒಪ್ಪಂದಕ್ಕೆ ಅಣಿಯಾದರು.

• ಬ್ರಿಟೀಷರ ವಿರುದ್ಧ ಜಯ ಗಳಿಸಿದ ಪ್ರಥಮ ದೇಶೀಯ ಅರಸ : ಹೈದರಲಿ.

• ಮುಕ್ತಾಯದ ಒಪ್ಪಂದ : ೧೭೬೯ ರಲ್ಲಿ ಮದ್ರಾಸ್ ಒಪ್ಪಂದ.
____ಶಿಫಾರಸುಗಳ ಆಧಾರದ ಮೇಲೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು(MSP) ಘೋಷಿಸಲಾಗುತ್ತದೆ
Anonymous Quiz
37%
ರಾಷ್ಟ್ರೀಯ ಕೃಷಿ ಆಯೋಗ
17%
ರಾಷ್ಟ್ರೀಯ ರೈತರ ಆಯೋಗ
43%
ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ
3%
ಯಾವುದೂ ಅಲ್ಲ