Social Work Books(socialworkfootprints.org)
350 subscribers
378 photos
23 files
426 links
This is an exclusive channel for
SOCIAL WORK BOOKS.

Kindly share only Social Work Related Books and
don't post irrelevant posts/other books here.
https://www.socialworkfootprints.org/
Download Telegram
to view and join the conversation
Forwarded from M& HR Solutions Pvt Ltd
ನಿಮ್ಮ ಬದುಕಿನ ಸಮಸ್ಯೆಗಳಿಗೆ ಸಮಾಧಾನ

ಸಮಸ್ಯೆಗಳೇ ಇಲ್ಲದ ಬದುಕಿಲ್ಲ. ಒಬ್ಬೊಬ್ಬರಿಗೂ ಒಂದೊಂದು ಸಮಸ್ಯೆ. ಕೆಲವು ಸಂಕೀರ್ಣವಾದವು. ಅವುಗಳ ಆಳ ವಿಸ್ತಾರ ಅರ್ಥವಾಗುವುದಿಲ್ಲ. ಸಮಸ್ಯೆಗಳ ಬಲೆಯಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತ ಹತಾಶೆ, ನಿರಾಶೆಗಳಿಂದ ಕಂಗೆಡುವುದು ಹೊಸ ಸಮಸ್ಯೆಗೆ ನಾಂದಿಯಾಗುತ್ತದೆ. ಇಂಥ ಸಂದರ್ಭಗಳಲ್ಲಿ ಬದುಕುವ ಆಸೆ ಕಡಿಮೆಯಾಗಿ ಸಾಯುವ ಬಯಕೆ ತಲೆದೋರುತ್ತದೆ. ಗೊಂದಲಗಳು ದಿಕ್ಕು ಕೆಡಿಸುತ್ತವೆ. ಅಂಥ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ತತ್ತರಿಸುವವರಿಗೆ ಸಾಂತ್ವನ ಹೇಳುವುದು, ಗೊಂದಲವನ್ನು ಕಡಿಮೆ ಮಾಡಿ ಮನಸ್ಸನ್ನು ತಿಳಿಗೊಳಿಸಿ ಸಮಸ್ಯೆಗಳಿಂದ ಹೊರಬರಲು ಸಹಾಯಕವಾಗುವುದು ಈ ಕೃತಿಯ ಮುಖ್ಯ ಉದ್ದೇಶ.

ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ : https://cutt.ly/TUhUy7h
*ಮನೋಬಲ*

ಇಂದಿನ ನಮ್ಮ ಮಕ್ಕಳು ಹುಟ್ಟತ್ತಲೇ, ಕಂಪ್ಯೂಟರ್, ಮೊಬೈಲ್, ಐ ಪ್ಯಾಡ್, ಐ ಪೋನ್ ಮುಂತಾದ ಗ್ಯಾಡ್ಜೆಟ್ಗಳ ಬಗ್ಗೆ ಪರಿಚಿತರಾಗಿ, ದಿನದಿನಕ್ಕೂ ಪರಿಣತವಾಗಿ ಮಾರ್ಪಡುತ್ತಿದ್ದಾರೆ. ಇಂದಿನ ವಿದ್ಯಾಭ್ಯಾಸದ ಕ್ರಮವೂ ಅವರನ್ನು ‘ಮಾಹಿತಿ ಕಣಜ’ವನ್ನಾಗಿಸುತ್ತಿದೆ. ಆದರೆ ಅವರಲ್ಲಿ ಒಳಗೊಳಗೇ ಮನೋಬಲದ ಕುಸಿತವನ್ನು ಕಾಣುತ್ತಿದ್ದೇವೆ.

ಹದಿಹರಿಯದ ಮಕ್ಕಳಷ್ಟೇ ಅಷ್ಟೇ ಅಲ್ಲ, ನವಉದ್ಯೋಗಸ್ಥರೂ ನವವಿವಾಹಿತರು ಪುಟ್ಟಮಕ್ಕಳ ಪೋಷಕರೂ ನಡುವಯಸ್ಸಿನವರೂ ಕಡೆಗೆ ವೃದ್ಧರೂ ಕೂಡಾ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಮನೋಬಲದ ಅಭಾವದಿಂದಾಗಿ ಪರಿತಪ್ಪಿಸುತ್ತಿದ್ದಾರೆ. ಇಂಥವರಿಗೆಲ್ಲಾ ಬೆಳಕು ತೋರಿಸುವ ಕೃತಿ ಇದಾಗಿದೆ.

ನಕಾರಾತ್ಮಕ ಧೋರಣೆಗಳಾದ ಅನುಮಾನ, ಸಂಬಂಧಗಳಿಂದ ವಿಮುಖತೆ, ದ್ವೇಷಸಾಧನೆ, ಸಮಾಜಬಾಹಿರ ಚಟುವಟಿಕೆಗಳಲ್ಲಿ ಆಸಕ್ತಿ – ಇಂಥವುಗಳಿಂದ ಪಾರಾಗುವ ಉಪಾಯಗಳನ್ನೂ ಈ ಪುಸ್ತಕದಲ್ಲಿ ಸೂಚಿಸಲಾಗಿದೆ.

ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ : https://cutt.ly/eUfgaGi
Forwarded from M& HR Solutions Pvt Ltd
ಯಶಸ್ಸಿನ ಸೂತ್ರಗಳು

*ಸಾಧನೆಯ ಹಾದಿಯಲ್ಲಿ ಅಡೆತಡೆಗಳು ಬಹಳ*

ನಿಶ್ಚಿತವಾದ ಕಾರ್ಯಯೋಜನೆ ಹಾಕಿಕೊಳ್ಳದವರೂ ಈ ಅಡೆತಡೆಗಳಿಂದಾಗಿ ಹಿಮ್ಮೆಟ್ಟಬಹುದು. ಅರೆ ಮನಸ್ಸಿನಿಂದ ಕಾರ್ಯ ಪ್ರಾರಂಭಿಸಿದವರೂ ಈ ಅಡೆತಡೆಗಳಿಗೆ ಹೆದರಬಹುದು. ಯೋಜನೆಯ ಪ್ರಾರಂಭದಲ್ಲಿಯೇ ಮನಸ್ಸಿನಲ್ಲಿ ಹೋಗುವ ಸಂಶಯದ ಭೂತದಿಂದಾಗಿಯೂ ಈ ಅಡೆತಡೆಗಳನ್ನು ಎದುರಿಸುವಲ್ಲಿ ಸೋಲಬಹುದು. ಕೆಲವೊಮ್ಮೆ ಈ ಅಡೆತಡೆಗಳು ಅವರ ದುರ್ಬಲ ಮನಸ್ಸಿನ ಕಲ್ಪನೆಯ ಕೂಸೂ ಆಗಿರಬಹುದು.’ನಿಮ್ಮ ಉದ್ದೇಶಿತ ದಾರಿಯಿಂದ ನಿಮ್ಮ ದೃಷ್ಟಿ ವಿಚಲಿತವಾದಾಗ ಕಾಣಸಿಗುವ ಪದಾರ್ಥಗಳೇ ಈ ಅಡೆತಡೆಗಳು’ ಎನ್ನುತ್ತಾರೆ ತಿಳಿದವರು. ಎಲ್ಲಿಯವರೆಗೆ ನಿಮ್ಮ ಸಾಧನೆಯ ಮಾರ್ಗದಿಂದ ಕಾಯಾ ವಾಚಾ ಮನಸಾ ನೀವು ವಿಚಲಿತರಾಗುವುದಿಲ್ಲವೋ ಅಲ್ಲಿಯವರೆಗೆ ನಿಮಗೆ ಯಾವ ಅಡೆತೆಗಳೂ ಅಡ್ಡಬರವು..
ಒಟ್ಟಿನಲ್ಲಿ ಈ ಅಡೆತಡೆಗಳನ್ನು ದಾಟಿ ಮುನ್ನಡೆಯುವ ಮನೋಭೂಮಿಕೆಯನ್ನು ಮೈಗೂಡಿಸಿಕೊಳ್ಳದಿದ್ದರೆ ಪ್ರಯತ್ನದಲ್ಲಿ ಸೋಲು ಕಟ್ಟಿಟ್ಟ ಬುತ್ತಿಯೇ..

ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ : https://cutt.ly/sYCj1wp
Forwarded from M& HR Solutions Pvt Ltd
ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ

ಮನಸ್ಸು ಮತ್ತು ಅದರ ಬೆಳವಣಿಗೆ

ಮನಸ್ಸು ಜಗತ್ತಿನ ಅತ್ಯದ್ಭುತಗಳಲ್ಲಿ ಒಂದು. ಕಣ್ಣಿಗೆ ಕಾಣದ, ಕೈಗೆ ಸಿಗದ ಅದು ಅನುಭವಕ್ಕೆ ಮಾತ್ರ ಸಿಗುತ್ತದೆ. ಅದರ ಆಳ, ವಿಸ್ತಾರವನ್ನು ಅರಿತವರಿಲ್ಲ. ಮನಸ್ಸನ್ನು ಅರಿತುಕೊಳ್ಳಲು, ಅದರ ಕಾರ್ಯವೈಖರಿಯನ್ನು ತಿಳಿದುಕೊಳ್ಳಲು ಅನಾದಿ ಕಾಲದಿಂದ, ಮನುಷ್ಯ ಪ್ರಯತ್ನಪಡುತ್ತಲೇ ಇದ್ದಾನೆ. ಮನಸ್ಸಿನ ರಚನೆಯನ್ನು, ಸಾಮರ್ಥವನ್ನು ತಿಳಿಯಲು ಜ್ಞಾನಿಗಳು, ವಿಜ್ಞಾನಿಗಳು ಸತತವಾಗಿ ಅದ್ಯಯನವನ್ನು ನಡೆಸುತ್ತಾರೆ. ಮನಸ್ಸು ಚೆನ್ನಾಗಿದ್ದರೆ, ಪೂರ್ಣವಾಗಿ ವಿಕಾಸಗೊಂಡು ಆರೋಗ್ಯಕರವಾಗಿ ಕಾರ್ಯ ನಿರ್ವಹಿಸಿದರೆ ಎಲ್ಲವೂ ಸುಗಮ, ಸೊಗಸು. ಅದು ವಿಕಾಸಗೊಳ್ಳದೆ ಇದ್ದರೆ, ಅದರ ಆರೋಗ್ಯ ಕೆಟ್ಟು ಚಟುವಟಿಕೆಗಳೆಲ್ಲ ಏರುಪೇರಾದರೆ, ಎಲ್ಲವೂ ಎದವಟ್ಟು, ಗೊಂದಲಮಯ. ಆ ವ್ಯಕ್ತಿ ತನಗೆ ಮತ್ತು ಇತರರಿಗೆ ಅಪ್ರಯೋಜಕನಾಗಿ, ತೊಂದರೆದಾಯಕನಾಗುತ್ತಾನೆ.

ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ : https://cutt.ly/YUR5VeF
Forwarded from M& HR Solutions Pvt Ltd
*ಬಾಳಿಗೊಂದು ಬೆಳಕು*

ನಮ್ಮ ಅನುಭವಗಳ ಸಮ್ಮಿಶ್ರಣವೇ ನಮ್ಮ ಜೀವನ. ಪ್ರತಿಯೊಬ್ಬರ ಅನುಭವಗಳು ಬೇರೆ ಬೇರೆಯಾಗಿರುವುದರಿಂದಲೇ ಜೀವನದ ನೋಟ, ಅರ್ಥ, ಅಭಿವ್ಯಕ್ತಿಗಳು ವಿಭಿನ್ನವಾಗಿ ಕಾಣುತ್ತವೆ. ಸುಖೀ ಮತ್ತು ತೃಪ್ತ ಜೀವನವನ್ನು ನಡೆಸಲು ಹೊರಟ ನನ್ನ ಅನುಭವಗಳ ಸಾರವನ್ನು ಈ ಪುಸ್ತಕದ ಮೂಲಕ ಲೇಖಕರು ಭಟ್ಟಿ ಇಳಿಸಿರುತ್ತಾರೆ.
ಒಂದು ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡು ಸಾರ್ಥಕ ಜೀವನವನ್ನು ನಡೆಸಲು ಬೇಕಾಗುವ ಹಲವಾರು ವಿಷಯಗಳನ್ನು ಈ ಹೊತ್ತಿಗೆಯು ಒಳಗೊಂಡಿದೆ.
ಈ ಪುಸ್ತಕವು ಒಂದು ಸುಂದರ ಹೂವಾದರೆ, ಇದರಲ್ಲಿನ ಅಂಶಗಳು, ವಿಷಯಗಳು, ವಿಚಾರಧಾರೆಗಳು ಹೂವಿನ ಸುವಾಸನೆ. ಹೂ ಪಟಲಗಳ ಮೃದುತ್ವವೇ ಈ ಪುಸ್ತಕದ ಸರಳ ಭಾಷೆ ಮತ್ತು ಶೈಲಿ. ಅಲ್ಲಲ್ಲಿ ಬಂದಿರುವ ಸಣ್ಣಪುಟ್ಟ ಚಿತ್ರಗಳೇ ಹೂವಿನ ಮೋಹಕ ಬಣ್ಣ. ಈ ಪುಸ್ತಕದಲ್ಲಿನ ಅಂಶಗಳನ್ನು ನೀವು ಮೆಚ್ಚಿದರೆ, ಈ ಹೂವಿಗೆ ದೇವರ ಪಾದದ ನೆಲೆ ಸಾರ್ಥಕತೆ.

ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ : https://cutt.ly/9IuZVr5
ಆತ್ಮೀಯ ಓದುಗರೇ,

ನೀವು ಓದಿದ ಮತ್ತು ನಿಮ್ಮ ನೆಚ್ಚಿನ ಪುಸ್ತಕದ ವಿವರಗಳನ್ನು "ನನ್ನ ನೆಚ್ಚಿನ ಪುಸ್ತಕ" ಫೇಸ್ ಬುಕ್ ಗ್ರೂಪ್ ನಲ್ಲಿ ಹಂಚಿಕೊಳ್ಳಬಹುದು. ಇದರಿಂದ ಗ್ರೂಪಿನ ಇತರೆ ಸದಸ್ಯರಿಗೂ ಸಹ ನಿಮ್ಮ ಪುಸ್ತಕದ ಪರಿಚಯವಾಗುತ್ತದೆ. ಒಳ್ಳೆಯ ವಿಷಯಗಳನ್ನೊಳಗೊಂಡ ಪುಸ್ತಕಗಳ ವಿವರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದೇ ಈ ಗುಂಪಿನ ಪ್ರಮುಖ ಉದ್ದೇಶವಾಗಿರುವುದರಿಂದ, ಈ ಗುಂಪನ್ನು ಜ್ಞಾನಾರ್ಜನೆಯ ಒಂದು ಉತ್ತಮ ವೇದಿಕೆಯನ್ನಾಗಿ ನಾವೆಲ್ಲರೂ ಮಾಡೋಣ.

ಈ ಕೆಳಗಿನ ಲಿಂಕ್ ನ ಮೂಲಕ ಈ ಗ್ರೂಪ್ ನ ಸದಸ್ಯರಾಗಬಹುದು.
https://www.facebook.com/groups/socialworkbooks/
Forwarded from M& HR Solutions Pvt Ltd
Photo from Niruta Publications
Forwarded from M& HR Solutions Pvt Ltd
*ಪ್ರಶ್ನೆ: ನೀವೇ ಹೇಳಿದಂತೆ ಜನವರಿ 2017 ರಿಂದ ಇ.ಎಸ್.ಐ ವೇತನದ ಮಿತಿಯನ್ನು ಮಾಸಿಕ 21000-00 ರೂಪಾಯಿಗೆ ಹೆಚ್ಚಿಸಿದೆ. ಇಲ್ಲೊಂದು ಉಪ ಪ್ರಶ್ನೆ ನೌಕರನೊಬ್ಬ ಪಡೆಯುತ್ತಿರುವ ವೇತನವು ವೇತನ ವೃದ್ಧಿ, ಬೋನಸ್, ಅಧಿಕ ಕಾರ್ಯ ನಿರ್ವಹಿಸಿದುದಕ್ಕಾಗಿ ಪಡೆದ ಹಣವೂ ಸೇರಿ ತಿಂಗಳ ಒಂದರಲ್ಲಿ 21000-00 ರೂಪಾಯಿಗಿಂತ ಹೆಚ್ಚಾಗಿ ಬಿಟ್ಟರೆ, ಅಂತಹ ಸಂದರ್ಭದಲ್ಲಿ ವಿಮಾದಾರ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆಯೆ?*
ಉತ್ತರ: ಅಂದರೆ, ವೇತನ ಮಿತಿಯನ್ನು ಮೀರಿದ ತಕ್ಷಣವೇ ನೌಕರ ವಿಮಾದಾರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ ಎಂಬುದು ನಿಮ್ಮ ಅನಿಸಿಕೆ. ಅದು ಹಾಗಲ್ಲ. ಇ.ಎಸ್.ಐ ಕಾನೂನಿನಂತೆ ವಂತಿಗೆ ಅವಧಿಯನ್ನು ವರ್ಷವೊಂದರಲ್ಲಿ ಎರಡು ಭಾಗವಾಗಿ ವಿಂಗಡಿಸಲಾಗಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಿಂದ ಮಾರ್ಚ್. ವಿಷಯ ಹೀಗಿರುವಾಗ ವಂತಿಗೆಯ ಅವಧಿಯ ಮಧ್ಯದಲ್ಲಿ ವೇತನವು ಹೆಚ್ಚಾದರೂ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯಲಾರರು. ವಂತಿಗೆಯ ಅವಧಿಯು ಮುಗಿಯುವವರೆಗೆ ಅವರು ಮುಂದುವರೆಯುತ್ತಾರೆ. ಅಷ್ಟೇ ಏಕೆ, ಹೆಚ್ಚಾದ ಮೊತ್ತಕ್ಕೂ ವಂತಿಗೆಯನ್ನು ಸಲ್ಲಿಸಬೇಕಾಗುತ್ತದೆ. ಉದಾಹರಣೆಗೆ: ವಂತಿಗೆಯ ಅವಧಿ ಏಪ್ರಿಲ್‌ನಿಂದ ಸೆಪ್ಟೆಂಬರ್ ಮಧ್ಯೆ ಜೂನ್ ತಿಂಗಳಿನಲ್ಲಿ ವೇತನ ವೃದ್ಧಿಯ ಪರಿಣಾಮವಾಗಿ ನೌಕರನೊಬ್ಬನ ವೇತನ ರೂಪಾಯಿ. 22000-00 ಆಗಿಬಿಟ್ಟರೆ, ವಂತಿಗೆಯನ್ನು 22000-00 ಕ್ಕೆ ಸಲ್ಲಿಸಬೇಕು. ಅದಕ್ಕಾಗಿ ವೇತನ ಮಿತಿಯಾದ ರೂಪಾಯಿ. 22000-00 ಗೆ ಮಾಡಲಾಗದು ಎನ್ನುವುದನ್ನು ಪ್ರಮುಖವಾಗಿ ಇಲ್ಲಿ ಗಮನಿಸಬೇಕು. ಮುಂದೆ ವಂತಿಗೆಯ ಅವಧಿ ಮುಗಿಯುತ್ತಲೆ ಆಗಲೂ 21000-00 ಕ್ಕೆ ಹೆಚ್ಚಾಗಿದ್ದರೆ, ಅನಾಯಾಸವಾಗಿ ಅಂತಹ ವಿಮಾದಾರರು ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ.

*ಪ್ರಶ್ನೆ: ಇ.ಎಸ್.ಐ ಅಧಿನಿಯಮದ ಅಡಿಯಲ್ಲಿ ನೋಂದಾಯಿಸಿಕೊಂಡ ಸಂಸ್ಥೆಯು ಆವಧಿಕವಾಗಿ ಯಾವುದಾದರೂ ವಿವರಗಳನ್ನು ಸಲ್ಲಿಸಬೇಕೆ ?*
ಉತ್ತರ: ಹೌದು.
ಪ್ರತಿ ವರ್ಷ 31 ನೆಯ ಜನವರಿಯ ಒಳಗೆ ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಘಟಕದ ವಿಳಾಸ ಬದಲಾವಣೆಯಾಗಿದ್ದರೆ ಅದರ ಉಲ್ಲೇಖದೊಂದಿಗೆ ಪ್ರಪತ್ರ 01 ‘ಎ’ ಭರ್ತಿಮಾಡಿ ಸಂಬಂಧಪಟ್ಟ ಪ್ರಾದೇಶಿಕ ಅಥವಾ ಉಪ ಪ್ರಾದೇಶಿಕ ಕಾರ್ಯಾಲಯಕ್ಕೆ ಕಳುಹಿಸಿ ಕೊಡಬೇಕು.

ವರ್ಷದ 2 ವಂತಿಗೆಯ ಅವಧಿಗಳಾದ ಏಪ್ರಿಲ್‌ನಿಂದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಿಂದ ಮಾರ್ಚ್ ಅವಧಿಯ ನಂತರ ಅವಧಿಯು ಮುಕ್ತಾಯವಾದ 42 ದಿನಗಳ ಒಳಗಾಗಿ ಹಣ ಸಂದಾಯ ಮಾಡಿದ ಚಲನ್ ಪ್ರತಿಗಳನ್ನು ಲಗತ್ತಿಸಿ ಸಂಬಂಧಪಟ್ಟ ಶಾಖಾ ಕಛೇರಿಗೆ ಕಳುಹಿಸಿಕೊಡಬೇಕು. ನಿಯಮಗಳು ಹೀಗಿದ್ದರೂ ಇತ್ತೀಚಿನ ದಿನಗಳಲ್ಲಿ ವಂತಿಗೆಯನ್ನು ಆನ್‌ಲೈನ್ ಮುಖಾಂತರ ಸಲ್ಲಿಸುವುದರಿಂದ ಸಂದಾಯದ ವಿವರ ಸಿಸ್ಟಂನಲ್ಲಿ ಗೊತ್ತಾಗಿಬಿಡುತ್ತದೆ. ಹೀಗಾಗಿ ಈ ವ್ಯವಸ್ಥೆ ಈಗ ಮಹತ್ವವನ್ನು ಕಳೆದುಕೊಂಡಿದೆ.

ಇ.ಎಸ್.ಐ ಅಧಿನಿಯಮ 1948 ರ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಘಟಕವು ದುರ್ಘಟನಾ ರಿಜಿಸ್ಟರ್ ಅಂದರೆ ಪ್ರಪತ್ರ 11ನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಘಟಕ ಅಥವಾ ಸಂಸ್ಥೆಯ ಪರಿಸರವೂ ಸೇರಿದಂತೆ ವಿಮಾದಾರರು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ದುರ್ಘಟನೆಗೆ ತುತ್ತಾದರೆ ಅದರ ವಿವರವನ್ನು ಪ್ರಪತ್ರ 11ರಲ್ಲಿ ಭರ್ತಿಮಾಡಿ 24 ಘಂಟೆಯ ಒಳಗಾಗಿ ಸಂಬಂಧಪಟ್ಟ ಶಾಖಾ ಕಚೇರಿಗೆ ಹಾಗೂ ಅದರ ಒಂದು ಪ್ರತಿಯನ್ನು ಸಂಬಂಧಪಟ್ಟ ಇ.ಎಸ್.ಐ ಚಿಕಿತ್ಸಾಲಯಕ್ಕೂ ಕಳುಹಿಸಿಕೊಡಬೇಕು. ದುರ್ಘಟನೆಯ ವಿವರಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದು ಇ.ಎಸ್.ಐ ಇಲಾಖೆಯ ಅಧಿಕಾರಿಗಳು ಪರಿವೀಕ್ಷಣೆಗೆ ಬಂದಾಗ ಪ್ರಸ್ತುತ ಪಡಿಸಬೇಕು. ಅಂದರೆ, ಮುಂದೊಮ್ಮೆ ದುರ್ಘಟನೆಯಿಂದ ವಿಮಾದಾರ ತೀರಿಕೊಂಡರೆ ಅಥವಾ ದುರ್ಘಟನೆಯ ನಂತರ ವಿಕಲಾಂಗನಾದರೆ ಫಲಾನುಭವಗಳಿಗೆ ಈ ದಾಖಲೆಗಳು ಸಹಕಾರಿಯಾಗುತ್ತವೆ. ಇನ್ನೊಂದು ಮಾತಿನಲ್ಲಿ ಹೇಳಬೇಕೆಂದರೆ, ಫಲಾನುಭವಗಳಿಗೆ ಈ ದಾಖಲೆಗಳೇ ಮೂಲ ಆಧಾರಗಳು.
ಈ ವಿವರಗಳನ್ನು ಲಿಖಿತದಲ್ಲಿ ಕಳುಹಿಸಿಕೊಡುವ ಅವಶ್ಯಕತೆ ಇಲ್ಲ. ಯಾಕೆಂದರೆ, ಈಗ ಎಲ್ಲಾ ವಿವರವನ್ನು ಆನ್‌ಲೈನ್ ನಲ್ಲಿ ಕಳುಹಿಸಿಕೊಡುವ ವ್ಯವಸ್ಥೆ ಇದೆ. ಹಾಗೂ ಸಂಪೂರ್ಣ ವಿವರಗಳು ಸಿಸ್ಟಮ್‌ನಲ್ಲಿ ಲಭ್ಯವಿರುವುದರಿಂದ ಮೊದಲಿನಂತೆ ಆವಧಿಕವಾಗಿ ಕಳುಹಿಸಿಕೊಡಲೇಬೇಕು ಎಂಬ ನಿಯಮವಿಲ್ಲ. ಸುಲಭ ಸಂದರ್ಭಕ್ಕಾಗಿ ಇ.ಎಸ್.ಐ. ಇಲಾಖೆಯು ದಾಖಲೆಗಳ ವಿವರಗಳನ್ನು ಪರಿವೀಕ್ಷಿಸಿಕೊಳ್ಳುವುದು.

*ಪ್ರಶ್ನೆ: ವಿಮಾದರ ಎಷ್ಟು ದಿನಗಳ ನಂತರ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಅರ್ಹನಾಗುತ್ತಾನೆ ?*
ಉತ್ತರ: ಇ.ಎಸ್.ಐ ವಿಮಾದಾರನಾಗಿದ್ದು ಕನಿಷ್ಟ 2 ವರ್ಷಗಳವರೆಗೆ ಸೇವೆ ಸಲ್ಲಿಸಿ 156 ದಿನಗಳ ವಂತಿಗೆಯನ್ನು ಸಲ್ಲಿಸಿದ್ದರೆ ಸಾಕು. ಮುಂದುವರೆದ ಕಾಯಿಲೆಯ ನಿಯಮದನ್ವಯ 34 ಕಾಯಿಲೆಗಳಿಗೆ ಗುಣಮುಖವಾಗುವವರೆಗೆ ಅಥವಾ ಗರಿಷ್ಟ 3 ವರ್ಷಗಳವರೆಗೆ ವಿಮಾದಾರರು ಸೇರಿ ಅವಲಂಬಿತ ಕುಟುಂಬದ ಸದಸ್ಯರುಗಳು ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಆಸ್ಪತ್ರೆಗೆ ದಾಖಲಾಗದೇ ಸಾಮಾನ್ಯ ರೋಗಿಯಾಗಿ ಇ.ಎಸ್.ಐ. ಚಿಕಿತ್ಸಾಲಯ ಹಾಗೂ ಆಸ್ಪತ್ರೆಯಲ್ಲಿ ಔಷಧಿ ಪಡೆಯುವುದು ವಿಮಾದಾರನಾದ ದಿನದಿಂದಲೇ ಆರಂಭವಾಗುತ್ತದೆ. ವಿಶೇಷ ಶುಶ್ರೂಷೆಯ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳುವುದಕ್ಕೆ ಮಾತ್ರ ಎರಡು ವರ್ಷ ಕಾಯಬೇಕು.

ಹೆಚ್ಚಿನ ಮಾಹಿತಿಗಾಗಿ ಹಾಗೂ ಪುಸ್ತಕವನ್ನು ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:
https://cutt.ly/lIie4YS
*ಪತಿ ಪತ್ನಿಯರೇ ಅಟೆನ್ಷನ್ ಪ್ಲೀಸ್*

ಪತಿ-ಪತ್ನಿಯರ ಸಂಬಂಧ ಬಹಳ ವಿಶಿಷ್ಟವಾದದ್ದು ಮತ್ತು ಸಂಕೀರ್ಣವಾದದ್ದು. ತಂದೆ, ತಾಯಿ, ಅಕ್ಕ, ತಂಗಿ, ಚಿಕ್ಕಮ್ಮ, ಚಿಕ್ಕಪ್ಪ - ಇವರಲ್ಲಿ ಯಾರನ್ನೂ ನಾವು ಆಯ್ಕೆ ಮಾಡಿಕೊಳ್ಳುವುದಿಲ್ಲ. ಈ ಸಂಬಂಧಗಳು ದೈವದತ್ತವಾಗಿ ಬಂದವುಗಳು. ಆದರೆ ನಮ್ಮ ಸಂಗಾತಿಯನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ಆದ್ದರಿಂದಲೇ ಈ ಸಂಬಂಧವು ಬಹಳ ಮಹತ್ತರವಾದದ್ದು.
ಹಾಗೆಯೇ, ನಮ್ಮ ಸಂಗಾತಿಯೊಡನೆ ನಾವು ಬೆಳೆಸಿಕೊಳ್ಳುವ ಸಂಬಂಧವನ್ನೂ ಸಹ ನಾವು ಆಯ್ಕೆ ಮಾಡಿಕೊಳ್ಳಬಹುದು. (ಪುಸ್ತಕದಲ್ಲಿ `ಸಂಗಾತಿ' ಎಂದರೆ ಪತಿ-ಪತ್ನಿಯರೆಂದರ್ಥ. ನೀವು ಪತಿಯಾಗಿದ್ದರೆ, ಈ ಪುಸ್ತಕದಲ್ಲಿ ಸಂಗಾತಿಯೆಂದು ಓದಿದಾಗ, ಅದು ನಿಮ್ಮ ಪತ್ನಿಗೆ ಅನ್ವಯವೆಂದು ಭಾವಿಸಿ; ಹಾಗೆಯೇ, ನೀವು ಪತ್ನಿಯಾಗಿದ್ದರೆ, ಈ ಪುಸ್ತಕದಲ್ಲಿ `ಸಂಗಾತಿ'ಯೆಂದು ಓದಿದಾಗ ಅದು ನಿಮ್ಮ ಪತಿಯನ್ನುದ್ದೇಶಿಸಲಾಗಿದೆಯೆಂದು ಭಾವಿಸಿ. ನಿಮಗಿನ್ನೂ ಮದುವೆಯಾಗದಿದ್ದರೆ, ಅದು ನಮ್ಮ ಭಾವೀ ಸಂಗಾತಿಗೆಂದು ಭಾವಿಸಿ!)

ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ : https://cutt.ly/JIaFJnC
Forwarded from M& HR Solutions Pvt Ltd
ಇಂದಿನ ನಮ್ಮ ಮಕ್ಕಳು ಹುಟ್ಟುತ್ತಲೇ, ಕಂಪ್ಯೂಟರ್, ಮೊಬೈಲ್, ಐ ಪ್ಯಾಡ್, ಐ ಫೋನ್ ಮುಂತಾದ ಗ್ಯಾಡ್ಜೆಟ್‍ಗಳ ಬಗ್ಗೆ ಪರಿಚಿತರಾಗಿ, ದಿನದಿನಕ್ಕೂ ಪರಿಣತರಾಗಿ ಮಾರ್ಪಡುತ್ತಿದ್ದಾರೆ. ಇಂದಿನ ವಿದ್ಯಾಭ್ಯಾಸದ ಕ್ರಮವೂ ಅವರನ್ನು ‘ಮಾಹಿತಿ ಕಣಜ’ವನ್ನಾಗಿಸುತ್ತಿದೆ. ಆದರೆ ಅವರಲ್ಲಿ ಒಳಗೊಳಗೇ ಮನೋಬಲದ ಕುಸಿತವನ್ನು ಕಾಣುತ್ತಿದ್ದೇವೆ.

ಹದಿಹರೆಯದ ಮಕ್ಕಳಷ್ಟೇ ಅಷ್ಟೇ ಅಲ್ಲ, ನವಉದ್ಯೋಗಸ್ಥರೂ, ನವವಿವಾಹಿತರೂ, ಪುಟ್ಟಮಕ್ಕಳ ಪೋಷಕರೂ, ನಡುವಯಸ್ಸಿನವರೂ, ಕಡೆಗೆ ವೃದ್ಧರೂ ಕೂಡಾ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಮನೋಬಲದ ಅಭಾವದಿಂದಾಗಿ ಪರಿತಪಿಸುತ್ತಿದ್ದಾರೆ. ಇಂಥವರಿಗೆಲ್ಲಾ ಬೆಳಕು ತೋರಿಸುವ ಕೃತಿ ಇದಾಗಿದೆ.

ನಕಾರಾತ್ಮಕ ಧೋರಣೆಗಳಾದ ಅನುಮಾನ, ಸಂಬಂಧಗಳಿಂದ ವಿಮುಖತೆ, ದ್ವೇಷಸಾಧನೆ, ಭಾವೋದ್ವೇಗ, ಸಮಾಜಬಾಹಿರ ಚಟುವಟಿಕೆಗಳಲ್ಲಿ ಆಸಕ್ತಿ – ಇಂಥವುಗಳಿಂದ ಪಾರಾಗುವ ಉಪಾಯಗಳನ್ನೂ ಈ ಪುಸ್ತಕದಲ್ಲಿ ಸೂಚಿಸಲಾಗಿದೆ.

ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ : https://cutt.ly/eUfgaGi
WE ARE HAPPY TO ANNOUNCE THAT 20,000 SOCIAL WORK PROFESSIONALS ARE CONNECTED THROUGH OUR NIRATHANKA SOCIAL WORK GROUPS.

YOU CAN ALSO JOIN AND PARTICIPATE IN OUR GROUP DISCUSSIONS.

THE MEMBERS OF THE GROUP ARE PERMITTED TO SHARE SOCIAL WORK ARTICLES, SOCIAL WORK JOB POSTINGS AND ANNOUNCEMENTS ON SEMINARS / WORKSHOPS / TRAINING PROGRAMMES.

Kindly click the below link to join us:
https://groups.google.com/g/socialworkfootprints
ಹಸಿವು ಜಗತ್ತಿನ ಸಕಲ ಜೀವರಾಶಿಗಳು ಜೀವನ ಪರ್ಯಂತ ನಿರಂತರವಾಗಿ ಅನುಭವಿಸುವ ಒಂದು ಮನೋದೈಹಿಕ ಸಂಸ್ಥಿತಿ. ಹಸಿವು ಆಹಾರ ಬೇಕೆನ್ನುವುದರ ಸೂಚನೆ. ಆಹಾರ ಜೀವನದ ಬಹುಮುಖ್ಯ ಅವಶ್ಯಕತೆ. ಆಹಾರ ಶಕ್ತಿಯ ಮೂಲ. ಜೀವವಿರುವ ಪ್ರಾಣಿಗಳೆಲ್ಲವೂ ಸದಾ ಕಾಲ ಕ್ರಿಯಾನಿರತವಾಗಿರುತ್ತವೆ. ಎಚ್ಚರವಿರಲಿ, ಇಲ್ಲದಿರಲಿ, ಏನಾದರೂ ಮಾಡುತ್ತಲೇ ಇರುತ್ತವೆ. ನೀವು ವಿಶ್ರಾಂತ ಸ್ಥಿತಿಯಲ್ಲಿರುವಾಗಲೂ ಕಾರ್ಯನಿರತರಾಗಿರುತ್ತೀರಿ. ನಿಮ್ಮ ದೇಹದಲ್ಲಿ ಹಲವಾರು ಕ್ರಿಯೆಗಳು ನಡೆಯುತ್ತಿರುತ್ತವೆ. ನೀವು ಉಸಿರಾಡುತ್ತಿರುವಿರಿ; ರಕ್ತ ಪರಿಚಲನೆ ನಡೆಯುತ್ತಿರುತ್ತದೆ; ಆಹಾರ ಜೀರ್ಣವಾಗುತ್ತಿರುತ್ತದೆ. ನೀವು ಮಾನಸಿಕವಾಗಿ ಏನೋ ಆಲೋಚಿಸುತ್ತಿರಬಹುದು. ನಿದ್ರೆ ಮಾಡುವಾಗ ಕನಸು ಕಾಣುತ್ತಿರಬಹುದು. ಇವೆಲ್ಲದರಲ್ಲೂ ಶಕ್ತಿ ವ್ಯಯವಾಗುತ್ತಿರುತ್ತದೆ.
ನೀವು ಏನೇ ಮಾಡಬೇಕಾದರೂ ಶಕ್ತಿ ಬೇಕು. ಈ ಶಕ್ತಿ ಬರುವುದು ಆಹಾರದಿಂದ. ಆಹಾರದಲ್ಲಿರುವ ಗ್ಲೂಕೋಸ್ (ಸಕ್ಕರೆ), ಕೊಬ್ಬು, ಮತ್ತಿತರ ಪೋಷಕಾಂಶಗಳು ಜೀವಿಗಳ ಸಕಲ ಕ್ರಿಯೆಗಳಿಗೂ ಶಕ್ತಿಯನ್ನು ಒದಗಿಸುತ್ತವೆ. ಆಹಾರವಿಲ್ಲದಿದ್ದರೆ ಜೀವಿಗಳು ನಿಷ್ಕ್ರಿಯವಾಗಿ, ಬಲಹೀನವಾಗಿ, ಏನೂ ಮಾಡಲಾಗಲಾರದೆ, ಸಾಯಬಹುದು. ಆದುದರಿಂದ ಹಸಿವಿಲ್ಲದಿದ್ದರೆ ಆಹಾರ ಬೇಕೆಂಬ ಪರಿಜ್ಞಾನವಿರುವುದಿಲ್ಲ. ಆಹಾರವಿಲ್ಲದಿದ್ದರೆ ಶಕ್ತಿಯಿಲ್ಲ; ಶಕ್ತಿ ಇಲ್ಲದಿದ್ದರೆ ಚಟುವಟಿಕೆ ಇಲ್ಲ; ಜೀವನವಿಲ್ಲ. ಒಂದು ದೃಷ್ಟಿಯಿಂದ ನೋಡಿದರೆ, ಹಸಿವನ್ನು ತಣಿಸುವುದೇ ಜೀವನದ ಒಂದು ಪ್ರಮುಖ ಕಾರ್ಯವೆಂದು ಕಂಡುಬರುತ್ತದೆ. ಜೀವ ಉಳಿದಿರುವುದೆ ಹಸಿವನ್ನು ತಣಿಸಲು ಉಪಯೋಗಿಸುವ ಆಹಾರದಿಂದ. ಮಾನವನ ಸಕಲ ಸೃಷ್ಟಿಗಳು ಜರುಗುತ್ತಿರುವುದರ ಹಿನ್ನೆಲೆಯಲ್ಲಿ ಹಸಿವಿದೆ. ನಮ್ಮ ಎಲ್ಲಾ ವರ್ತನೆಗಳ ಹಿನ್ನೆಲೆಯಲ್ಲಿರುವ ಪ್ರೇರಣೆಗಳಲ್ಲಿ ಹಸಿವೇ ಪ್ರಮುಖವಾದುದು. ನಮ್ಮ ನಾಗರಿಕತೆ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ಇವೆಲ್ಲವೂ ಹುಟ್ಟಿ ಬಂದಿರುವುದು ನಾವು ನಮ್ಮ ಹಸಿವನ್ನು ತಣಿಸುವ ಹಾದಿಯಲ್ಲಿಯೇ. ನಮ್ಮ ಜನಪದರ ಮಾತಿನಲ್ಲಿ ಹೇಳುವುದಾದರೆ, ನಾವು ಮಾಡುವುದೆಲ್ಲಾ ಗೇಣು ಹೊಟ್ಟೆಗಾಗಿ.

ಹಸಿವೆಂದರೇನು?
ಈ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ. ವಿಜ್ಞಾನಿಗಳು ಇಂದಿನವರೆಗೆ ಹಸಿವನ್ನು ಕುರಿತು ಬಹಳಷ್ಟು ಹೇಳಿದ್ದಾರೆ. ಅವರು ಪ್ರತಿಪಾದಿಸಿರುವ ಸಿದ್ಧಾಂತಗಳನ್ನು ಪ್ರಮುಖವಾಗಿ ಮೂರು ಗುಂಪಾಗಿ ವಿಂಗಡಿಸಬಹುದು. 1. ಮೊದಲನೆಯವು ಜೈವಿಕ ಸಿದ್ಧಾಂತಗಳು (biological theories); ಹಸಿವಿಗೆ ಸಂಬಂಧಿಸಿದ ದೈಹಿಕ ಪ್ರಕ್ರಿಯೆಗಳನ್ನು ಕುರಿತಾದವು. 2. ಎರಡನೆಯವು ಆನುವಂಶಿಕ (genetic theories) ಸಿದ್ಧಾಂತಗಳು; ವಂಶಪರಂಪರಾಗತವಾಗಿ ನಿರ್ಧಾರವಾಗಿರುವ ಅಂಶಗಳು. 3. ಮೂರನೆಯವು ಮಾನಸಿಕ (psychological theories) ಸಿದ್ಧಾಂತಗಳು; ನಾವಾಗಿ ಅಭ್ಯಾಸ ಮಾಡಿಕೊಂಡ ಹಸಿವುಗಳು. ಇವುಗಳನ್ನು ಸಿದ್ಧಾಂತಗಳು ಎನ್ನುವುದಕ್ಕಿಂತ ಅಭಿಪ್ರಾಯಗಳು ಎಂದು ಕರೆಯುವುದು ಮೇಲು. ನಿಮಗೆ ಮೊದಲೇ ಹೇಳಿಬಿಡುತ್ತೇನೆ; ನೆನಪಿಡಿ, ಇವೆಲ್ಲಾ ಸಿದ್ಧಾಂತಗಳು ಅಥವಾ ಅಭಿಪ್ರಾಯಗಳು; ಫ್ಯಾಕ್ಟ್ಸ್ ಅಲ್ಲ. ನಿಜ ಹೇಳಬೇಕೆಂದರೆ, ಹಸಿವನ್ನು ಕುರಿತು ನಿರ್ದಿಷ್ಟವಾದ ಕೊನೆಯ ವಾಕ್ಯವನ್ನು ಇನ್ನೂ ಬರೆಯಬೇಕಿದೆ.https://www.nirutapublications.org/kannada-articles/7768296
Forwarded from M& HR Solutions Pvt Ltd
Photo from Niruta Publications
Forwarded from M& HR Solutions Pvt Ltd
Dear all

We are happy to announce that Nirathanka HR-Google group has reached 10,000 members. The members of the group are permitted to share HR articles,

HR job postings and announcements on seminars / workshops / training programs.



This group is exclusively for HR relevant topics & knowledge. Please do refer to your friends & colleagues to join our Google Group.

Join our Online HR Groups

https://bit.ly/394obra


Your's sincerely
MH. Ramesha, MSW, PGDELT
Forwarded from M& HR Solutions Pvt Ltd
Photo from Niruta Publications
ನಿಮ್ಮ ಮಕ್ಕಳ ಬೆಳವಣಿಗೆ ಚೆನ್ನಾಗಿದೆಯೇ ?

ನಡೆವಳಿಕೆ ಸಮಸ್ಯೆಗಳು

`ನಿಮ್ಮ ಮಗು ತುಂಬಾ ಟಿವಿ ಕಾರ್ಯಕ್ರಮಗಳನ್ನು ನೋಡುತ್ತಿದೆಯೇ ? ಆಟ-ಪಾಠಗಳನ್ನು ಮರೆತು, ಟಿವಿಯಲ್ಲೇ ಮಗ್ನವಾಗಿದೆಯೇ ?’ :

ಟಿವಿ ಒಂದು ಅತ್ಯಂತ ಆಕರ್ಷಣೆಯ ಪ್ರಬಲ ಮಾದ್ಯಮ, ಚಿಕ್ಕ ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಲಕ್ಷ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ, ನಾಡಿನ ಪ್ರತಿಭಾವಂತರನ್ನು ಕಲೆ ಹಾಕಿ, ವಿವಿಧ ಕಾರ್ಯ ಕ್ರಮಗಳನ್ನು ಮಾಡಿ ಪ್ರಸಾರ ಮಾಡುತ್ತಾರೆ. ಸಹಜವಾಗಿ ಇಂದಿನ ಮಕ್ಕಳು ಟಿವಿ-ವಿಡಿಯೋ ಸೆಳೆತಕ್ಕೆ ಒಳಗಾಗಿದ್ದಾರೆ. ಕಾಮಿಕ್ಸ್ ಚಿತ್ರ ನೋಡುತ್ತಾ, ವಿಡಿಯೋ ಗೇಮ್ಸ್ ಆಡುತ್ತಾ, ಊಟ ಮರೆಯುತ್ತಿದ್ದಾರೆ. ನಿದ್ರೆಯನ್ನು ದೂರ ಮಾಡುತ್ತಿದ್ದಾರೆ. ಆಟಗಳನ್ನಾಡುವ ಪ್ರವೃತ್ತಿಯನ್ನೇ ಕೈ ಬಿಡುತ್ತಿದ್ದಾರೆ. ಪಾಠ, ಅಧ್ಯಯನವೂ ಅವರಿಗೆ ಬೇಡವಾಗುತ್ತಿದೆ. ಟಿವಿ ನೋಡುವಾಗ, ಪಾಪ್ ಕಾರ್ನ್, ಚಿಪ್ಸ್, ಕಡ್ಲೇಕಾಯಿ ಬೀಜಗಳನ್ನು ಮೆಲ್ಲುತ್ತಾ ಶರೀರದ ತೂಕವನ್ನು ಹೆಚ್ಚಿಸಿಕೊಂಡು ಬೊಜ್ಜು (obesity) ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಟಿವಿ ಕಾರ್ಯಕ್ರಮಗಳ ಅವಾಸ್ತವ ಮತ್ತು ಉತ್ಪ್ರೇಕ್ಷಿತಪ್ರಪಂಚದಲ್ಲೇ ವಿಹರಿಸುತ್ತಾ, ಪರಿಸರ ಮತ್ತು ಸಮಾಜದ ವಾಸ್ತವಿಕ ಅಂಶಗಳಿಗೆ ಕುರುಡು-ಕಿವುಡಾಗುತ್ತಿದ್ದಾರೆ.

ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ : https://cutt.ly/CY8n5bo
Forwarded from M& HR Solutions Pvt Ltd
ಮನಸ್ಸಿನ ಮ್ಯಾಜಿಕ್

ವ್ಯಕ್ತಿತ್ವ ವಿಕಸನಕ್ಕಾಗಿ ಮನಸ್ಸಿನ ಮ್ಯಾಜಿಕ್

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಶೆ ನಿಮ್ಮಗೆಲ್ಲರಿಗೂ ಇದೆ. ಕಾರು ಖರೀದಿಸಬೇಕು, ಮನೆ ಕಟ್ಟಿಸಬೇಕು, ಒಡವೆ ಮಾಡಿಸಬೇಕು, ಸಂಪತ್ತು ಕೂಡಿಸಬೇಕು, ಪ್ರವಾಸ ಹೋಗಬೇಕು; ಹಾಗೆಯೇ ಸಾಹಿತ್ಯ, ಸಂಗೀತ, ನಾಟ್ಯ, ನಾಟಕ, ಚಿತ್ರಕಲೆ, ಕಂಪ್ಯೂಟರ್, ತಂತ್ರಜ್ಞಾನ ಅಥವಾ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಆಶೆ ಸಹಜ.

ಆದರೆ ಸಾಧನೆಯ ದಾರಿಯಲ್ಲಿ ಮುನ್ನಡೆಯಲು ನಿಮ್ಮ ಮನಸ್ಸು ಸಹಕರಿಸುತ್ತಿದೆಯೇ ? ಹಲವರು ಒಂದು ಹಂತದ ಬಳಿಕ, “ಇದೆಲ್ಲ ನನ್ನಿಂದಾಗದು” ಎಂದು ಕೈಚೆಲ್ಲುತ್ತಾರೆ. “ಏನು ಮಾಡಿದರೂ ನನಗೆ ಪ್ರಗತಿ ಸಾಧಿಸಲಾಗುತ್ತಿಲ್ಲ” ಎಂದು ಹತಾಶರಾಗುತ್ತಾರೆ.

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭವಲ್ಲ. ಹಾಗಂತ, ಹತಾಶರಾಗಿ ಸಾಧನೆಯ ಹಾದಿಯಿಂದ ವಿಮುಖರಾಗಬೇಕಾಗಿಲ್ಲ. ಹಿಂದೂಸ್ಥಾನಿ ಸಂಗೀತದ ಮೇರುಸಾಧಕ ಭೀಮಸೇನ ಜೋಶಿ, ಕ್ರಿಕೆಟಿನಲ್ಲಿ ನೂರು ಟೆಸ್ಟ್ ಶತಕಗಳನ್ನು ಸಿಡಿಸಿದ ಸಚಿನ್ ತೆಂಡುಲ್ಕರ್, ಭಾರತಕ್ಕೆ ಒಲಿಂಪಿಕ್ಸ್ ಏಕವ್ಯಕ್ತಿ ಸ್ಪರ್ಧೆಯಲ್ಲಿ ( ಶೂಟಿಂಗ್ ) ಮೊದಲ ಚಿನ್ನದ ಪದಕ ಗೆದ್ದು ಕೊಟ್ಟ ಅಭಿನವ ಭಿಂದ್ರಾ – ಇವರೆಲ್ಲರೂ ವರುಷಗಟ್ಟಲೆ ಸಾಧನೆಯ ಹಾದಿಯಲ್ಲಿ ಸಾಗಿ, ಏಳುಬೀಳುಗಳನ್ನು ದಾಟಿ, ತಮ್ಮತಮ್ಮ ಕ್ಷೇತ್ರದ ಉತ್ತುಂಗಕ್ಕೆ ಏರಿದವರು.

ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ : https://cutt.ly/1UrOSoC
*ನೆನಪಿನ ಹಳ್ಳಿ*

ದಿ|| ಪ್ರೊ. ಎಂ.ಎನ್. ಶ್ರೀನಿವಾಸ್ ಅವರು ಭಾರತೀಯ ಸಮಾಜವಿಜ್ಞಾನದಲ್ಲಿ ಒಬ್ಬ ವರಿಷ್ಠ ವ್ಯಕ್ತಿ. ನಮ್ಮ ಸಮಾಜ ಮತ್ತು ಸಂಸ್ಕೃತಿಗಳನ್ನು ತಿಳಿದುಕೊಳ್ಳುವ ದಿಸೆಯಲ್ಲಿ ಅವರು ‘ಕ್ಷೇತ್ರಾಧಾರಿತ ದೃಷ್ಟಿಕೋನ’ಎಂಬ ಅಧ್ಯಯನ ಮಾರ್ಗವನ್ನು ಬಳಸಿ ಜನಪ್ರಿಯಗೊಳಿಸಿದರು. ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯದಲ್ಲಿದ್ದಾಗ ದಂಗೆಕೋರರು ಹಚ್ಚಿದ ಬೆಂಕಿಗೆ ತುತ್ತಾಗಿ ತಮ್ಮೆಲ್ಲ ಕ್ಷೇತ್ರಕಾರ್ಯ ಟಿಪ್ಪಣಿಗಳನ್ನು ಕಳೆದುಕೊಂಡ ವಿಷಾದಕರ ದುರಂತದ ನಂತರ ಅವರು ಬರೆದ ‘ದಿ ರಿಮೆಂಬರ್ಡ್ ವಿಲೇಜ್’ ಎಂಬ ಗ್ರಂಥವು ಮಾನವವಿಜ್ಞಾನ ಮತ್ತು ಸಮಾಜವಿಜ್ಞಾನಗಳಲ್ಲಿ ಒಂದು ಸಾರ್ವಕಾಲಿಕ ಶ್ರೇಷ್ಠ ಕೃತಿ ಎನ್ನಬಹುದು. 1976 ರಲ್ಲಿ ಮೊದಲು ಪ್ರಕಟವಾದ ಈ ಕೃತಿಯು, ಅನೇಕ ಮರುಮುದ್ರಣಗಳನ್ನು ಕಂಡಿದೆಯಲ್ಲದೆ, ಕಳೆದ ಅನೇಕ ದಶಕಗಳ ಉದ್ದಕ್ಕೂ ಅದು ತನ್ನ ತಾಜಾತನವನ್ನು ಉಳಿಸಿಕೊಂಡು ಬಂದಿದೆ. ಪ್ರೊ. ಶ್ರೀನಿವಾಸರು ಇಂಗ್ಲಿಷ್ ಬರವಣಿಗೆಯ ಒಬ್ಬ ಶ್ರೇಷ್ಠ ಪಟುವಾಗಿದ್ದರು. ಅವರು ತನ್ನ ವಿದ್ವತ್ಪೂರ್ಣ ಬರವಣಿಗೆಗಳಲ್ಲಿ ಪ್ರಚುರಪಡಿಸಿದ ಅಂಶಗಳು ನಿಸ್ಸಂದೇಹವಾಗಿ ಮುಖ್ಯವಾದವುಗಳೇ ಆದರೂ, ಅವುಗಳನ್ನು ಅವರು ಹೇಗೆ ಅಭಿವ್ಯಕ್ತಗೊಳಿಸಿದರು ಎಂಬುದು ಇನ್ನೂ ಹೆಚ್ಚು ಆಕರ್ಷಕವಾದುದಾಗಿದೆ. ಅವರ ಬರವಣಿಗೆಯ ಈ ಕೌಶಲ್ಯವು ಅತ್ಯಂತ ಉತ್ಕೃಷ್ಟವಾಗಿ ಮೂಡಿ ಬಂದಿದ್ದೇ ‘ದಿ ರಿಮೆಂಬರ್ಡ್ ವಿಲೇಜ್’ ಕೃತಿಯಲ್ಲಿ.

ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ : https://cutt.ly/QYx3eft