ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ರಾಮನಗರ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ʻಉದ್ಯೋಗ ಮೇಳʼ ದಿನಾಂಕ 15-03-2025ರಂದು ಬೆಳಗ್ಗೆ 10 ರಿಂದ 4:30 ವರೆಗೆ, ರಾಮನಗರದ ಪೊಲೀಸ್ ಭವನದ ಹತ್ತಿರವಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಜರುಗಲಿದೆ.