ದಿನಾಂಕ 20-01-2024 ರಂದು ಬೆಳಗ್ಗೆ 10.30 ರಿಂದ 12 ಗಂಟೆಯವರೆಗೆ 'ಯುವನಿಧಿ ಯೋಜನೆಯ ಬಗ್ಗೆ ಮಾಹಿತಿ ಹಾಗೂ ನೇರ ಸಂವಾದ' ಸಂವಹನ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತಾಲಯದಲ್ಲಿ ಏರ್ಪಡಿಸಲಾಗಿತ್ತು. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮಾನ್ಯ ಆಯುಕ್ತರಾದ ಡಾ. ರಾಗಪ್ರಿಯಾ ಆರ್. ಕಾರ್ಯಕ್ರಮದ ಪ್ರಾರಂಭದಲ್ಲಿ ಯುವನಿಧಿ ಯೋಜನೆಯ ಬಗ್ಗೆ ಸಂಪೂರ್ಣ ಹಾಗೂ ವಿವರವಾದ ಮಾಹಿತಿಯನ್ನು ನೀಡಿದರು. ಯುವನಿಧಿ ಯೋಜನೆಯ ಸದುಪಯೋಗವನ್ನು ಎಲ್ಲಾ ಅರ್ಹ ಅಭ್ಯರ್ಥಿಗಳು ಪಡೆದುಕೊಳ್ಳಬೇಕೆಂದು ತಿಳಿಸುತ್ತಾ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಈ ಯೋಜನೆಯ ಕುರಿತು ಸಾಕಷ್ಟು ಮಾಹಿತಿ, ಮಾರ್ಗದರ್ಶನ ಹಾಗೂ ಪ್ರಚಾರವನ್ನು ನೀಡಬೇಕು ಹಾಗೂ ಈ ಯೋಜನೆಯನ್ನು ಗ್ರಾಮೀಣ ವಲಯದಲ್ಲಿರುವ ಅಭ್ಯರ್ಥಿಗಳಿಗೆ ತಲುಪಿಸಲು ಸೂಚಿಸಿದರು. ಯುವನಿಧಿ ಯೋಜನೆಯು ಯುವಜನರ ಸಾಮರ್ಥ್ಯ, ಕೌಶಲ್ಯ ಹಾಗೂ ಆತ್ಮ ವಿಶ್ವಾಸವನ್ನು ಆರ್ಥಿಕ ನೆರವಿನೊಂದಿಗೆ ಬಲಪಡಿಸಲು ಸರ್ಕಾರದ ವಿಶಿಷ್ಠವಾದ ಗ್ಯಾರಂಟಿ ಯೋಜನೆಯಾಗಿದ್ದು, ರಾಜ್ಯದ ಅರ್ಹ ನಿರುದ್ಯೋಗಿ ಯುವಜನತೆ ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಇಲಾಖೆಯ ಉದ್ಯೋಗ ವಿಭಾಗದ ಜಂಟಿ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರು 'ಯುವ ನಿಧಿ' ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಹಾಗೂ ಇನ್ನಿತರ ಮುಖ್ಯ ಮಾಹಿತಿಗಳ ಕುರಿತು ಪವರ್ ಪಾಯಿಂಟ್ ಪ್ರಸೆಂಟೇಶನ್ ಮೂಲಕ ವಿವರವಾಗಿ ತಿಳಿಸಿದರು. ಕೊನೆಯದಾಗಿ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗಳಿಗೆ ಹಾಗೂ ವಿವಿಧ ವಿಚಾರಗಳಿಗೆ ಸಮರ್ಪಕ ಉತ್ತರ ಹಾಗೂ ಮಾಹಿತಿಗಳನ್ನು ಒದಗಿಸಿದರು.
#ಯುವನಿಧಿ #yuvanidhi #rdpr #ite

👍1