TARGET KAS GROUP PAVAN RAJPUT
33.9K subscribers
7.43K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
👆👆👆👆👆👆👆👆👆
ಮುಂದೆ ಬರುವ ಪರೀಕ್ಷೆಯಲ್ಲಿ ಇತಿಹಾಸ ವಿಷಯದಲ್ಲಿ
2 ಪ್ರಶ್ನೆಗಳನ್ನು ನಿರೀಕ್ಷೆ ಮಾಡಬಹುದು
ಮಾರ್ಚ್ 5 ನಂತರ ಜಾರಿ ಆಗುವ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಬದಲಾವಣೆ ಕುರಿತು ನಿಮ್ಮ ಗೊಂದಲಗಳಿಗೆ ಸ್ಪಷ್ಟ ಮಾಹಿತಿ


ಸರ್ಕಾರಿ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಮಹತ್ತರ ಬದಲಾವಣೆ: ಯಾವೆಲ್ಲಾ ಹೊಸ ನಿಯಮಗಳಿವೆ ಗೊತ್ತೇ?

ರಾಜ್ಯ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳಲ್ಲಿನ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ನೇಮಕ ಪ್ರಕ್ರಿಯೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಮುಂಬರುವ ಯಾವುದೇ

    

ಹೈಲೈಟ್ಸ್‌:

ವೈದ್ಯಾಧಿಕಾರಿ, ಪಶುವೈದ್ಯ, ಇಂಜಿನಿಯರ್ ಹುದ್ದೆಗೆ ಸಂದರ್ಶನ ರದ್ದುಕೆಪಿಎಸ್‌ಸಿ ಎಲ್ಲ ಹಂತದ ಪರೀಕ್ಷೆಯಲ್ಲಿ ನೆಗೆಟಿವ್ ಅಂಕಮಾರ್ಚ್‌ 05 ರ ನಂತರದ ಎಲ್ಲ ಅಧಿಸೂಚನೆಗಳಿಗೆ ಹೊಸ ನಿಯಮ ಅನ್ವಯ.....

ರಾಜ್ಯ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳಲ್ಲಿನ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ನೇಮಕ ಪ್ರಕ್ರಿಯೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಮುಂಬರುವ ಯಾವುದೇ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಎಲ್ಲ ಹಂತದ ಪರೀಕ್ಷೆಗಳಲ್ಲಿ ನೆಗೆಟಿವ್ ಅಂಕ, ಇಂಗ್ಲಿಷ್ ಭಾಷೆ ಹಾಗೂ ಕಂಪ್ಯೂಟರ್ ಜ್ಞಾನ ಸೇರಿಸಲು ನಿರ್ಧರಿಸಲಾಗಿದೆ. ಹೀಗೆ ಹಲವು ನಿಯಮಗಳನ್ನು ಈ ಕೆಳಗಿನಂತೆ ಜಾರಿಗೆ ತರಲಾಗಿದೆ.

ಸಂದರ್ಶನ ರದ್ದು
ವಿಶೇಷವಾಗಿ ವೈದ್ಯಕೀಯ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು, ಇಂಜಿನಿಯರ್‌ಗಳ ಹುದ್ದೆಗಳಿಗೆ ನಡೆಸುತ್ತಿದ್ದ ಸಂದರ್ಶನವನ್ನು ಇನ್ನುಮುಂದೆ ನಡೆಸದಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ.

'ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2020' ಜಾರಿ ಮಾಡಿರುವ ಕರ್ನಾಟಕ ರಾಜ್ಯ ಸರ್ಕಾರ ಮುಂದಿನ ನೇಮಕಾತಿಗಳಿಗೆ ಅನ್ವಯವಾಗುವಂತೆ ಹೊಸ ನಿಯಮಗಳನ್ನು ಜಾರಿ ಮಾಡಿದೆ.

ಎಲ್ಲ ಹಂತದ ಪರೀಕ್ಷೆಗೆ ನೆಗೆಟಿವ್ ಅಂಕ

ಈ ಹಿಂದೆ ಕೆಪಿಎಸ್‌ಸಿ ನಡೆಸುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಈವರೆಗೂ ಗ್ರೂಪ್‌ 'ಎ' ಮತ್ತು 'ಬಿ' ವೃಂದದ ಹುದ್ದೆಗಳ ನೇಮಕಾತಿಗೆ ಮಾತ್ರ ನೆಗೆಟಿವ್ ಅಂಕಗಳನ್ನು ನೀಡಲಾಗುತ್ತಿತ್ತು. ಆದರೆ ಇನ್ನುಮುಂದೆ ಗ್ರೂಪ್‌ 'ಎ' ಇಂದ ಗ್ರೂಪ್‌ 'ಡಿ' ಹುದ್ದೆಗಳವರೆಗೂ ನಡೆಸಲಾಗುವ ನೇಮಕ ಪರೀಕ್ಷೆಯಲ್ಲಿ ನಾಲ್ಕನೇ ಒಂದರಷ್ಟು ಋಣಾತ್ಮಕ ಅಂಕ ನೀಡುವ ಪದ್ಧತಿ ಜಾರಿಗೆ ತರಲಾಗಿದೆ. ಆದರೆ ಚಾಲಕರ ನೇಮಕಾತಿಗೆ ಮಾತ್ರ ಈ ನಿಯಮ ಅನ್ವಯವಾಗುವುದಿಲ್ಲ.

ಕಂಪ್ಯೂಟರ್ ಜ್ಞಾನ ಪತ್ರಿಕೆ ಸೇರ್ಪಡೆ
ಪ್ರಥಮ ದರ್ಜೆ ಸಹಾಯಕರು ಸೇರಿದಂತೆ 'ಸಿ' ಮತ್ತು 'ಡಿ' ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಜ್ಞಾನ ಎಂಬ ಎರಡು ಪತ್ರಿಕೆಗಳಿದ್ದು, ಎರಡೂ ಪತ್ರಿಕೆಗಳಿಗೆ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಜತೆಗೆ, ಎರಡು ಪತ್ರಿಕೆಗಳಲ್ಲಿ ನಿಗದಿಪಡಿಸಿದ್ದ (ಕಟ್‌ಆಫ್‌ ಮಾರ್ಕ್ಸ್‌) ಒಟ್ಟು ಅಂಕಗಳನ್ನು ಗಳಿಸಿದಲ್ಲಿ ಆಯ್ಕೆಗೆ ಅರ್ಹತೆ ಪಡೆಯುತ್ತಿದ್ದರು. ಆದರೆ ಇದೀಗ ಎಲ್ಲ ನೇಮಕಾತಿಗಳಲ್ಲಿ ಕಡ್ಡಾಯ ಕನ್ನಡ, ಕಡ್ಡಾಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನವನ್ನು ಸೇರಿಸಲಾಗಿದೆ. ಈ ಮೂರು ವಿಷಯಗಳಲ್ಲಿ ಶೇಕಡ.35 ಅಂಕಗಳು ಪಡೆಯುವುದು ಕಡ್ಡಾಯಗೊಳಿಸಲಾಗಿದೆ. 2 ವಿಷಯಗಳಲ್ಲಿ ಶೇಕಡ.100 ರಷ್ಟು ಅಂಕ ಪಡೆದು ಒಂದು ವಿಷಯಗಳಲ್ಲಿ ಶೇಕಡ.35 ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ್ದಲ್ಲಿ ಅನರ್ಹರಾಗಲಿದ್ದಾರೆ.

ಪತ್ರಿಕೆ 2 ರಲ್ಲಿ ಹುದ್ದೆಯಾಧಾರಿತ ಪ್ರಶ್ನೆಗಳು

ಗ್ರೂಪ್‌ 'ಎ' ಮತ್ತು ಗ್ರೂಪ್‌ 'ಬಿ' ವೃಂದದ ಹುದ್ದೆಗಳ ನೇಮಕಾತಿ ಪತ್ರಿಕೆ 1 ರಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ಘಟನೆಗಳು, ಸಾಮಾನ್ಯ ವಿಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿರಲಿವೆ. ಆದರೆ ಪತ್ರಿಕೆ 2 ರಲ್ಲಿ ಯಾವ ಇಲಾಖೆಯ ಹುದ್ದೆ ಎಂಬುದರ ಆಧಾರಿತವಾಗಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಗ್ರೂಪ್ 'ಸಿ' ಹುದ್ದೆಗಳು, ಡಿಪ್ಲೊಮ, ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯ ಹುದ್ದೆಗಳಿಗೆ ನೇಮಕ ಮಾಡುವಲ್ಲಿ ಸಾಮಾನ್ಯ ಜ್ಞಾನದ ಜತೆಗೆ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಲಿದೆ.

ಮಾ.05 ರ ನಂತರದ ಅಧಿಸೂಚನೆಗಳಿಗೆ ಹೊಸ ನಿಯಮ
ಹೊಸ ವ್ಯವಸ್ಥೆಯನ್ನು ಜಾರಿ ಮಾಡುವ ಸಂಬಂಧ 2021 ರ ಜನವರಿ 4 ರಂದು ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳನ್ನು ರಾಜ್ಯ ಸರ್ಕಾರ ಆಹ್ವಾನಿಸಿತ್ತು. ಎಲ್ಲ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಮಾರ್ಚ್‌ 05 ರ ನಂತರದ ಎಲ್ಲ ನೇಮಕಾತಿ ಅಧಿಸೂಚನೆಗಳಿಗೆ ಈ ಹೊಸ ನಿಯಮಗಳು ಅನ್ವಯವಾಗಲಿವೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕೃತ ರಾಜ್ಯಪತ್ರದಲ್ಲಿ ಉಲ್ಲೇಖಿಸಿದೆ.



ಕೃಪೆ:ವಿಜಯ ಕರ್ನಾಟಕ ದಿನಪತ್ರಿಕೆ
Audio
ಮಾಹಾಶಿವರಾತ್ರಿ ದಿನದಂದು ಪವನ ರಜಪೂತ್ ಸರ್ ಮಾಡಿದ ಆಡಿಯೋ ಕ್ಲಿಪ್ ಗ್ರೂಪ್ ಅಲ್ಲಿ ಡಿಲೀಟ್ ಆಗಿತ್ತು ಅದಕ್ಕೆ ತುಂಬಾ ಜನ ಈ ಆಡಿಯೋ ಕ್ಲಿಪ್ ನಾವು ಇನ್ನೂ ಕೇಳಿಲ್ಲ ಸೆಂಡ್ ಮಾಡಿ ಅಂತ ಕೇಳ್ತಾ ಇದ್ದಿರಿ,ಅದಕ್ಕೆ ಈಗ ಈ ಆಡಿಯೋ ಕ್ಲಿಪ್ ಸಿಕ್ಕಿದೆ ಅದಕ್ಕೆ ಈಗ ಗ್ರೂಪ್ ಅಲ್ಲಿ ಸೆಂಡ್ ಮಾಡಿದ್ದೇನೆ ಎಲ್ಲರೂ ಮಿಸ್ ಮಾಡದೆ ಚನ್ನಾಗಿ ಕೇಳಿ ಒಳ್ಳೆದಾಗಲಿ
Forwarded from PAVAN S
KPSC ಪರೀಕ್ಷೆಯಲ್ಲಿನ ಹೊಸ ಬದಲಾವಣೆ ಏನಾಗಿದೆ ?
https://youtu.be/VWmqAQQ3glo
Forwarded from PAVAN S
ವಿಶೇಷ ಮಾಹಿತಿ....

ಈಗ ಅಷ್ಟೇ ಪವನ ರಜಪೂತ್ ಸರ್ ನಮಗೆ ಒಂದು ಮಾಹಿತಿ ತಿಳಿಸಿದರು,SDA ಪರೀಕ್ಷೆ ಏಪ್ರಿಲ್ ಎರಡನೇ ವಾರ ಅಥವಾ ಕೊನೆಯ ವಾರ ಅಂದ್ರೆ ಏಪ್ರಿಲ್ 25 ರಂದು ನಡೆಯುವ ಸಾಧ್ಯತೆ ಇದೆ ಅಂತೆ ಅದಕ್ಕೆ ಎಲ್ಲರೂ ಚನ್ನಾಗಿ ಅಧ್ಯಯನ ಮಾಡಿ

ಮತ್ತೆ ಈ ದಿನಾಂಕಗಳು ಬದಲಾಗುವ ಸಾಧ್ಯತೆ ಕೂಡ ಇದೆ ಸರ್ ಮತ್ತೆ ತಿಳಿಸುತ್ತೇನೆ ಅಂತ ಹೇಳಿದ್ದಾರೆ,ನೀವು ಸಮಯ ಇಲ್ಲ ಅಂತ ತಿಳಿದು ನಿರಂತರ ಅಧ್ಯಯನ ಮಾಡಿ...

ಒಟ್ಟಿನಲ್ಲಿ SDA ಪರೀಕ್ಷೆ ಏಪ್ರಿಲ್ ತಿಂಗಳಲ್ಲಿ ಆಗುವ ಸಾದ್ಯತೆ ತುಂಬಾ ಇದೆ
ಏಪ್ರಿಲ್ ಕೊನೆಯ ವಾರದಲ್ಲಿ ಇಲಾಖೆ ಪರೀಕ್ಷೆಗಳು ಕೂಡ ಇರೊದರಿಂದ ಪರೀಕ್ಷೆಯೇ ದಿನಾಂಕಗಳು ಇನ್ನೂ ಬದಲಾವಣೆಗೆ ಒಳಪಟ್ಟಿವೆ,ಆದ್ರೆ ನಿಮ್ಮ ತಯಾರಿ ಏಪ್ರಿಲ್ ಅಲ್ಲಿಯೇ ಪರೀಕ್ಷೆ ನಡೆಯುತ್ತೆ ಅಂತೇನೆ ನಿರಂತರ ಅಧ್ಯಯನ ಮಾಡಿ ಸಮಯ ವ್ಯರ್ಥ ಮಾಡದಿರಿ
65 ias rank candidates debarred bcz EWS fake certificate 👆👆
ಯಾವುದೆ ಸರ್ಕಾರಿ ಹುದ್ದೆಗೆ ಅರ್ಜಿ ಹಾಕುವಾಗ ಸರಿಯಾದ ಮಾಹಿತಿ ಯೊಂದಿಗೆ ಅರ್ಜಿ ಸಲ್ಲಿಸಿ🙏