TARGET KAS GROUP PAVAN RAJPUT
35.3K subscribers
8.46K photos
349 videos
3.27K files
1.04K links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
ಇವರು ಕೇವಲ ಪತ್ರದಲ್ಲಿ ಮಾತ್ರ
ಒಂದು ದಿನಾನೂ ಕೂಡ ಸರ್ಕಾರಕ್ಕೆ ನಿರಂತರವಾಗಿ ಒತ್ತಡ ತರುವ ಕೆಲಸ ಮಾಡಿಲ್ಲ.

ಮಾನ್ಯರೇ ಮೊದಲು ನಿಮಗೆ ಕನ್ನಡದ ಬಗ್ಗೆ ವಿಶೇಷ ಆದ್ಯತೆ ಇದ್ದರೆ,ನಿರಂತವಾಗಿ ಒತ್ತಡ ಹಾಕುವ ಕೆಲಸ ಮಾಡಿ ನೀವು ಮನಸು ಮಾಡಿದ್ರೆ ಇದು ದೊಡ್ಡ ಕೆಲಸ ಅಲ್ಲವೇ ಅಲ್ಲ,

ಸ್ಪರ್ಧಾರ್ಥಿಗಳು ನಿಮಗೆ ಒತ್ತಡ ಹಾಕಿದ ತಕ್ಷಣ ಒಂದು ಪತ್ರ ಬರೆಯುತ್ತೀರಿ ಆಮೇಲೆ ಆ ವಿಷಯ ಮರೆತು ಬಿಡುತ್ತೀರಿ,

ನಿಮಗೆ ನಿಜವಾಗಲು ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗುವಂತೆ ಆಗಬೇಕು ಅಂತ ಇದ್ದರೆ,ಸರ್ಕಾರಕ್ಕೆ ಒತ್ತಡ ಹಾಕಿ ನೇರವಾಗಿ ಮಾನ್ಯ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿ,ಇಂಗ್ಲಿಷ್,ಕಂಪ್ಯೂಟರ್ ಬೇಡ ಅಂತ ಅಲ್ಲ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರಲಿ ಅದು ನಮ್ಮ ಸ್ಪರ್ಧಾರ್ಥಿಗಳ ಒತ್ತಾಯ ಯಾಕೆ ಅಂದ್ರೆ ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್,ಕಂಪ್ಯೂಟರ್ ಕೂಡ ಅವಶ್ಯಕ, ಆದ್ರೆ ನಮ್ಮ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು ಅದಕ್ಕೆ ಹೆಚ್ಚು ಅಂಕಗಳು ನಿಗದಿ ಆಗಬೇಕು,

ಸಂಪೂರ್ಣ ಗ್ರೂಪ್ C ಪಠ್ಯಕ್ರಮ 2021 ಗೆ ತಿದ್ದುಪಡಿ ನಿಯಮ ಆಗಬೇಕು ಅದಕ್ಕೆ ನೀವು ಒತ್ತಡ ಹಾಕಿ ಪತ್ರ ಬರೆದರೆ ಅದು ಡಸ್ಟ್ ಬಿನ್ ಸೇರುತ್ತೆ ಅಷ್ಟೇ.

ಸಾಮಾನ್ಯ ಕನ್ನಡ 60 ಅಥವಾ 50 ಅಂಕಗಳು

ಸಾಮಾನ್ಯ ಇಂಗ್ಲಿಷ್ 20/25 ಅಂಕಗಳು

ಕಂಪ್ಯೂಟರ್ 20/25 ಅಂಕಗಳು

ಈ ರೀತಿಯಾಗಿ 2021 ರ ನೇಮಕಾತಿ ನಿಯಮಕ್ಕೆ ತಿದ್ದುಪಡಿ ಆಗಬೇಕು ಆಗ ಯಾರಿಗೂ ಅನ್ಯಾಯ ಆಗಲ್ಲ,ಆಗ ನಮ್ಮ ನಾಡಲ್ಲಿ ಕನ್ನಡಕ್ಕೆ ಆದ್ಯತೆ
TARGET KAS GROUP PAVAN RAJPUT
Photo
ಇದನ್ನು ಸ್ಪರ್ಧಾರ್ಥಿಪರ ಸಂಘಟನೆಗಳು ಒಗ್ಗಟ್ಟು ಆಗಿ ಗಂಭೀರವಾಗಿ ಪರಿಗಣಿಸಬೇಕು,ಬೇರೆ ಎಲ್ಲ ರಾಜ್ಯಗಳಲ್ಲಿ ಅಲ್ಲಿನ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ಇದೆ ನಮ್ಮ ರಾಜ್ಯದಲ್ಲಿ ನಮ್ಮ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ಇಲ್ಲ,ಕೇವಲ ಕನ್ನಡ 60% ಅಂತ ಹೇಳಿ ನಿಮಯ ಜಾರಿ ಮಾಡಿದ್ರೆ ಮುಖ್ಯ ಅಲ್ಲಾ ಮಾನ್ಯ ಮುಖ್ಯಮಂತ್ರಿ ಅವರೇ ಅದನ್ನು ಸ್ಪರ್ಧಾತ್ಮಕ ಪರೀಕ್ಷೆ ಅಲ್ಲಿ ಜಾರಿಗೆ ತರುವ ಕೆಲಸ ಮಾಡಿ,ಆಗ ನಿಮ್ಮ ಕನ್ನಡ ಅಭಿಮಾನಕ್ಕೆ ಒಂದು ಅರ್ಥ ಬರುತ್ತೆ,ಅಷ್ಟಕ್ಕೂ ಈಗಿನ ಸರಕಾರಕ್ಕೆ ತಿದ್ದುಪಡಿ ಮಾಡೋಕೆ ದೊಡ್ಡ ಕೆಲಸ ಅಲ್ಲಾ 2/3 ದಿನದ ಕೆಲಸ ಅಷ್ಟೇ,ಹೇಗೆ 1978 ನೇಮಕಾತಿ ನಿಯಮಗಳು ತಗೆದು ಹಾಕಿ ನಮ್ಮ ಕನ್ನಡ ಭಾಷೆಯನ್ನು ಹೇಗೆ ಮುಲೆಗುಂಪು ಮಾಡಿದರು ಅದಕ್ಕೆ ತಿದ್ದುಪಡಿ ತಂದರು ಈಗ ಅದೇ ಆಸಕ್ತಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡುವ ಕೆಲಸ ಆಗಲಿ,ಯಾವುದೇ ವಿಷಯ ತಗೆದು ಹಾಕುವುದು ಬೇಡ ಇಂಗ್ಲಿಷ್ ಇರಲಿ,ಕಂಪ್ಯೂಟರ್ ಇರಲಿ, ಆದ್ರೆ ನಮ್ಮ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಲಿ ಅಷ್ಟೇ ನಮ್ಮ ಸ್ಪರ್ಧಾರ್ಥಿಗಳ ಬೇಡಿಕೆ.
ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗುವಂತೆ ಮಾಡಲು ಯಾವ ಸ್ಪರ್ಧಾರ್ಥಿಪರ ಸಂಘಟನೆಗಳು ಒಗ್ಗಟ್ಟು ಆಗಿ ಹೋರಾಟ ಮಾಡಿ ಕನ್ನಡಕ್ಕೆ 50/60 ಅಂಕಗಳು ನಿಗದಿ ಮಾಡುವಲ್ಲಿ ನೀವು ಯಶಸ್ವಿ ಆಗಿದ್ದೆ ಆದಲ್ಲಿ ಕರುನಾಡಲ್ಲಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತೆ,ಎಲ್ಲದಕ್ಕಿಂತ ಮುಖ್ಯವಾಗಿ ಕನ್ನಡ ಉಳಿಯುತ್ತೆ ಮತ್ತು ಬೆಳೆಯುತ್ತೆ,

ನಿಮ್ಮ ಘೋಷಣೆ ಒಂದೇ ಆಗಿರಲಿ

ಇಂಗ್ಲಿಷ್ ಇರಲಿ, ಕಂಪ್ಯೂಟರ್ ಇರಲಿ,ಆದ್ರೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಲಿ, ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ, ಎಂಬ ಘೋಷವಾಕ್ಯ ಇಂದ ನಿಮ್ಮ ಬೇಡಿಕೆ ಪ್ರಾರಂಭ ಆಗಲಿ.
ಯಾರದರೂ ನನಗೆ ಮೆಸ್ಸೇಜ್ ಮಾಡಲಿ ಇದನ್ನು ವಿರೋಧಿಸಿ ಅವರಿಗೆ ನಾನು ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಡುತ್ತೇನೆ,

ಯಾರೆಲ್ಲ 1978 ರ ನಿಯಮ ರದ್ದು ಆಗೋಕೆ ಕನ್ನಡವನ್ನು ತಗೆದು ಹಾಕಿಸ್ಸೋಕೆ ಪ್ರಯತ್ನ ಮಾಡಿದ್ದೀರಿ ಎಲ್ಲವೂ ಗೊತ್ತಿದೆ ಸುಮ್ನೆ ಬೇಡ,.

ಈಗ ನಮ್ಮ ಸ್ಪರ್ಧಾರ್ಥಿಗಳ ಬೇಡಿಕೆ ಒಂದೇ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು,ಕಂಪ್ಯೂಟರ್,ಇಂಗ್ಲಿಷ್ ಕೂಡ ಇರಬೇಕು,ಇದಕ್ಕೆ ವಿರೋಧ ಮಾಡಿ ನೋಡೋಣ ಆಗ ನಿಮ್ಮ ಉದ್ದೇಶ ಏನು ಅಂತ ಗೊತ್ತು ಆಗುತ್ತೆ,

ಅದೇನೋ ಹೇಳಿದ್ರಿ ಅಲ್ವಾ ಈ ಹಿಂದೆ ಕಂಪ್ಯೂಟರ್,ಇಂಗ್ಲಿಷ್ ಕೂಡ ತುಂಬ ಮುಖ್ಯ ಅಂತ ಹೌದು ಮುಖ್ಯ ಇಲ್ಲ ಅಂದವರು ಯಾರು,ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಅದರ ಬಗ್ಗೆ ಜ್ಞಾನ ಇರಬೇಕು,ಅದಕ್ಕೆ ಕಂಪ್ಯೂಟರ್ ಇರಲಿ ಇಂಗ್ಲೀಷ್ ಇರಲಿ ಆದ್ರೆ ಕನ್ನಡಕ್ಕೆ ಹೆಚ್ಚಿನ ಅಂಕಗಳು ನಿಗದಿ ಆಗಲಿ.
TARGET KAS GROUP PAVAN RAJPUT
https://x.com/PavanRajpu92488/status/2095009783556485274
ಆಸಕ್ತಿ ಇರುವ ಎಲ್ಲರೂ ರಿ ಟ್ವಿಟ್ ಮಾಡಿ
ನಿಮಗೋಸ್ಕರ ಇದು ನಮ್ಮ ಕೊನೆಯ ಪ್ರಾಮಾಣಿಕ ಪ್ರಯತ್ನ.
TARGET KAS GROUP PAVAN RAJPUT pinned «https://x.com/PavanRajpu92488/status/2095009783556485274»
ಇದರಲ್ಲಿ ಯಶಸ್ಸು ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ,ಆದ್ರೆ ನಿಮಗೋಸ್ಕರ ಕೊನೆಯ ಪ್ರಾಮಾಣಿಕ ಪ್ರಯತ್ನ ಅಷ್ಟೇ, ನಿಮ್ಮ ನಿಮ್ಮ ಹೆಸರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಗಳನ್ನು ತಲುಪಿಸಿ.
TARGET KAS GROUP PAVAN RAJPUT
Photo
ಅಂದ್ರೆ ನಿಮಗೆ ಸರಳವಾಗಿ ಅರ್ಥವಾಗುವ ಹಾಗೆ ಹೇಳಬೇಕು ಅಂದ್ರೆ,

👉ನೀವು ವಿವಾಹವಾಗಿದ್ದರೆ,ಒಂದು ಸ್ವಾಯತ್ತ ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ
ನಿಮ್ಮ ಆದಾಯಕ್ಕೆ ನಿಮ್ಮ ತಂದೆ,ತಾಯಿಯರ ಆದಾಯ ಸೇರಿಸುವಂತಿಲ್ಲ,

👉ನೀವು ವಿವಾಹವಾಗಿದ್ದರೆ,ಒಂದು ಸ್ವಾಯತ್ತ ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಪತಿಯ ಆದಾಯ ಪತ್ನಿಗೆ ಅನ್ವಯ ಆಗುತ್ತೆ,ಪತ್ನಿಯ ಆದಾಯ ಪತಿಗೆ ಕೂಡ ಅನ್ವಯ ಆಗುತ್ತೆ,

👉ನೀವು ಅವಿಭಕ್ತ ಕುಟುಂಬದ ಭಾಗವಾಗಿದ್ದರೆ,ನಿಮ್ಮ ಆದಾಯ ಮತ್ತು ಅವಿಭಕ್ತದ ಕುಟುಂಬದ ಆದಾಯವನ್ನು ಒಟ್ಟಿಗೆ ಪರಿಗಣಿಸಿ ಕುಟುಂಬದ ಆದಾಯ ಕಂಡುಹಿಡಿಯಬೇಕು.

👉ಒಟ್ಟಿನಲ್ಲಿ ಇದರಿಂದ ಅನುಕೂಲ ಆಗುವದು,ಮದುವೆ ಆದವರಿಗೆ ನಿಮ್ಮ ತಂದೆ ತಾಯಿಯರ ಆದಾಯ ನಿಮಗೆ ಅನ್ವಯ ಆಗಲ್ಲ,ಅದು ಯಾವಾಗ ನೀವು ಸ್ವಾಯತ್ತ ಕುಟುಂಬವಾಗಿ ಇದ್ದಾಗ
This media is not supported in your browser
VIEW IN TELEGRAM
Kas ನೇಮಕಾತಿಯಲ್ಲಿ ಅಕ್ರಮ
ತನಿಖೆ ಅಂತೆ ಎನ್ ಡ್ರಾಮಾ ಇದು ಅಕ್ರಮ ಆಗಿರೋದು ಜಗತ್ ಜಾಹಿರ್ ಆಗಿದ್ದು ಎಲ್ಲರಿಗೂ ಗೊತ್ತು,

ಇದು CBI ತನಿಖೆ ಮಾಡಿದ್ರೆ ಮಾತ್ರ ಎಲ್ಲ ಸತ್ಯ ಹೊರಗೆ ಬರುತ್ತೆ ಇಲ್ಲ ಅಂದ್ರೆ ಏನು ಆಗಲ್ಲ.
ನೀವು ಕೆಲವರು ನಮ್ಮನ್ನು ಟೀಕೆ ಮಾಡುತ್ತೀರಿ,ಬಯ್ಯುತ್ತೀರಿ ಏನೇನೋ ನಮ್ಮ ಬಗ್ಗೆ ಮಾತಾಡುತ್ತೀರಿ ಮಾತಾಡಿ ಬಯ್ಯಿರಿ ಏನು ಸಮಸ್ಯೆ ಇಲ್ಲ,ಅದು ನಮಗೆ ಏನು ಪರ್ಕ್ ಆಗಲ್ಲ ಅದೆಲ್ಲ ನೋಡ್ಕೊಂಡು ಬಂದಿರೋದು ಏನು ಹೊಸದು ಅಲ್ಲ,ನೀವು ಕೆಲವರು ಏನೋ ಮಾತಾಡುತ್ತೀರಿ ಅಂತ ಅಕ್ರಮ ಆಗಿರುವುದರ ಬಗ್ಗೆ ಮಾತಾಡದೆ ಸುಮ್ನೆ ಇರೋಕೆ ಆಗಲ್ಲ,

ಜೊತೆಗೆ ಈಗ ನೀವು ಏನು ಪರೀಕ್ಷೆ ಬರೆದು ಸಂದರ್ಶನ ಕೊಟ್ಟವರು ಕೆಲವರು ಏನು ನಮ್ಮ ಬಗ್ಗೆ ಮಾತಾಡುತ್ತೀರಿ ಮಾತಾಡಿ ಒಂದು ವೇಳೆ ನಾಳೆ ಆಯ್ಕೆ ಪಟ್ಟಿ ಪ್ರಕಟ ಆದಮೇಲೆ ನಿಮ್ಮ ಹೆಸರು ಇರಬೇಕಾದ ಜಾಗದಲ್ಲಿ ಅಕ್ರಮ ಇಂದ ಹಣ ಕೊಟ್ಟು ಆಯ್ಕೆ ಆದವರು ನಿಮ್ಮ ಜಾಗದಲ್ಲಿ ಅವರು ಹೆಸರು ಇದ್ದರೆ ಆಗ ಯಾರನ್ನು ಟೀಕೆ ಮಾಡುತ್ತೀರಿ ನೋಡೋಣ,ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಸಂದರ್ಶನ ಕೊಟ್ಟವರಲ್ಲಿ ನನ್ನ ಸ್ಪರ್ಧಾರ್ಥಿಗಳು 11 ಜನ ಇದ್ದಾರೆ ಆದ್ರೆ ಅವರು ಯಾವತ್ತೂ ನಮ್ಮ ಬಗ್ಗೆ ಮಾತಾಡಿಲ್ಲ ಯಾಕೆ ಅಂದ್ರೆ ಅವರಿಗೆ ಗೊತ್ತು ನಮ್ಮ ಉದ್ದೇಶ ಏನು ಅಂತ

ಟೀಕೆಗಳಿಗೆ,ಬಯ್ಯುತ್ತೀರಿ ಅಂತ ಸುಮ್ನೆ ಇರೋಕೆ ನೀವು ನನಗೆ ಬೇರೆ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿದ ಹಾಗೆ ನನಗೆ ಮಾಡೋಕೆ ಆಗಲ್ಲ,ನಾವು CM ಮತ್ತು ಸಚಿವರನ್ನೇ ಬಿಟ್ಟಿಲ್ಲ ಅವರು ತಪ್ಪು ಮಾಡಿದಾಗ ಅವರ ವಿರುದ್ಧ ಮಾತಾಡಿದ್ದೇವೆ ಇನ್ನೂ ನೀವು ಯಾರು ಅಂತ ನಿಮ್ಮಿಂದ ಆದ್ರೆ ಅನ್ಯಾಯದ ವಿರುದ್ಧ ಮಾತಾಡಿ ಅದು ನಿಮಗೆ ಮತ್ತು ಎಲ್ಲರಿಗೂ ಒಳ್ಳೇದು.
This media is not supported in your browser
VIEW IN TELEGRAM
ಮಾಜಿ ಮುಖ್ಯಮಂತ್ರಿಗಳು,ಹಾಲಿ ಕೇಂದ್ರ ಸಚಿವರು ಆಗಿರುವರು ದಾಖಲೆ ಇಲ್ಲದೆ ಹೇಳೋದಿಲ್ಲ,ಇನ್ನೂ ಸರ್ಕಾರ ನಿಜವಾಗಲು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಅವರು ಆಯ್ಕೆ ಆಗಬೇಕು ಅಂದ್ರೆ CBI ತನಿಖೆ ಮಾಡಿಸಲಿ,

ನೋಡ್ರೂ ಆಯೋಗ್ಯರಾ ಆಕ್ರಮಣದ ವಿರುದ್ಧ ಮಾತಾಡಿದ್ರೆ ನಮಗೆ ಟೀಕೆ ಮಾಡುತ್ತಾ ಇದ್ದೀರಿ ಅಲ್ವಾ ಕೆಲವರು,ನಿಮ್ಮ ಹುದ್ದೆಗಳನ್ನು ಎಲ್ಲ ದುಡ್ಡು ಕೊಟ್ಟು ಅವರು ಖರೀದಿ ಮಾಡಿದ್ದಾರೆ,ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಆಯ್ಕೆ ಆಗಬೇಕು ಅಕ್ರಮ ತನಿಖೆ ಆಗಲಿ ಅಂತ ನಾವು ಎಲ್ಲರೂ ಅಕ್ರಮ ವಿರುದ್ಧ ಮಾತಾಡಿದ್ರೆ ನೀವು ನಮಗೆ ಟೀಕೆ ಮಾಡುತ್ತೀರಿ,

ಯಾಕೆ ನೀವು ಏನಾದ್ರೂ ದುಡ್ಡು ಕೊಟ್ಟು ಹುದ್ದೆ ಬುಕ್ ಮಾಡ್ಕೊಂಡ್ರಾ ಏನು ಮತ್ತೆ,ಯಾಕೆ ಅಂದ್ರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಅಕ್ರಮ ಹೊರಗೆ ಬರಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ತಾವೆಲ್ಲ ಆಯ್ಕೆ ಆಗಲಿ ಅಂತ ಅವರು ಅಕ್ರಮ ವಿರುದ್ಧ ಮಾತಾಡುತ್ತಾರೆ.

ಈ ನೇಮಕಾತಿ ಅಕ್ರಮ ತನಿಖೆ ಆಗಿ ಮುಂದಿನ 319 ರ kas ನೇಮಕಾತಿ ಇನ್ನೂ ಪಾರದರ್ಶಕತೆ ಇಂದ ನಡೆಯಲಿ ಈಗಲೇ ಹೆಚ್ಚಿಗೆ ಭಯ ಇರಲಿ ಅಂತ ನಾವು 384 ನೇಮಕಾತಿ ಅಕ್ರಮ ಎನಾಗಿದೆ ತನಿಖೆ ಆಗಬೇಕು ಅಂತ ಒತ್ತಾಯ ಮಾಡುತ್ತಿದ್ದೇವೆ ಅಷ್ಟೇ.

ರೆಸಾರ್ಟ್ ಅಲ್ಲಿ ಕೂರಿಸಿkas ಪರಿಕ್ಷೆ
ಬರಿಸಿದ್ದಾರೆ ಎಂದು ಮಾನ್ಯ ಕೇಂದ್ರ ಸಚಿವರು ಆರೋಪ ಮಾಡಿದ್ದಾರೆ,ಇದು ತನಿಖೆ ಆಗಬೇಕು,ಮುಂದೆ 319 kas ನೇಮಕಾತಿ ಇನ್ನೂ ಹೆಚ್ಚು ಪಾರದರ್ಶಕತೆ ಇಂದ ನಡೆಯಬೇಕು ಎಂದು ಇಗ ಇಂದಲೇ ನಮ್ಮ ಈ ಪ್ರಯತ್ನ.