TARGET KAS GROUP PAVAN RAJPUT
33.9K subscribers
7.42K photos
326 videos
3.07K files
908 links
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Download Telegram
TARGET KAS GROUP PAVAN RAJPUT
Photo
ಸ್ವಲ್ಪ ತಾಳ್ಮೆ ಇರಲಿ ಆಪಿಸಿಯಲ್ ಆಗಿ ಪ್ರೆಸ್ ನೋಟ್ ಪ್ರಕಟ ಮಾಡಿದ್ದಾರೆ ಹಾಲ್ ಟಿಕೆಟ್ ಬಗ್ಗೆ,

KPSC ಬಗ್ಗೆ ನಿಮಗೆ ಎಲ್ಲರಿಗೂ ಗೊತ್ತೇ ಇದೆ ಸ್ವಲ್ಪ ಲೆಟ್ ಆಗಿ ಹಾಲ್ ಟಿಕೆಟ್ ಅಪ್ಲೋಡ್ ಆಗುತ್ತೆ ಅಂತ ಅದಕ್ಕೆ ಸ್ವಲ್ಪ ಸಮಾಧಾನ ಇರಲಿ ಸ್ವಲ್ಪ ಸಮಯದಲ್ಲಿ ಅಪ್ಲೋಡ್ ಆಗುತ್ತೆ.
This media is not supported in your browser
VIEW IN TELEGRAM
👉ರಾಜ್ಯ ಲೋಕಸೇವಾ ಆಯೋಗಗಳ 25 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾನ್ಯ ಮುಖ್ಯಮಂತ್ರಿ ಅವರ ಪ್ರಮುಖ ಭಾಷಣ

👉KAS ಸಂದರ್ಶನ ಅಂಕಗಳು 25ಕ್ಕೆ ಇಳಿಕೆ ಮಾಡಲಾಗಿದೆ.

👉ಗ್ರುಪ್ B,C ಹುದ್ದೆಗಳಿಗೆ ಸಂದರ್ಶನ ತಗೆಯಲಾಗಿದೆ,ಪಾರದರ್ಶಕತೆ ಇಂದ ನೇಮಕಾತಿ ಮಾಡಲಾಗುತ್ತಿದೆ ಎಂದು ಮಾನ್ಯ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.
ಕೆಸೆಟ್-2023 ಕ್ಕೆ ಸಂಬಂಧಿಸಿದಂತೆ ಈಗಾಗಲೇ ದಾಖಲಾತಿ ಪರಿಶೀಲನೆ ಪೂರ್ಣಗೊಳಿಸಿರುವ ಹಾಗೂ (PG Degree - Pursuing) ಸ್ನಾತಕೊತ್ತರ ಪದವಿ ಪೂರ್ಣಗೊಳಿಸದೇ ಇರುವ ಅಭ್ಯರ್ಥಿಗಳು, ಪ್ರಸ್ತುತ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಲ್ಲಿ, ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಂಡಿರುವ ಬಗ್ಗೆ ಮೂಲ ಅಂಕಪಟ್ಟಿಯನ್ನು ಮತ್ತು ಈಗಾಗಲೇ ಪ್ರಾಧಿಕಾರದಿಂದ ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ನೀಡಿದ Verification Slip ಜೊತೆಗೆ ಇತರ ಎಲ್ಲಾ ಪೂರಕ ದಾಖಲೆಗಳನ್ನು ಸಲ್ಲಿಸಿ ದಿನಾಂಕ 31.01.2025 ರಂದು ಬೆಳಿಗ್ಗೆ 10.00 ಘಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು. ಇಲ್ಲಿ ತಮ್ಮ ಕೆಸೆಟ್ ಪ್ರಮಾಣ ಪತ್ರಗಳನ್ನು ಪಡೆಯಲು ಸೂಚಿಸಿದೆ.
DEPARTMENTBOARDS CORPORATION OMIC LETTER (1)_250111_164209.pdf
661.2 KB
ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಹೆಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತಂತೆ ವರದಿ ಸಲ್ಲಿಸಬೇಕಾಗಿರುವುದರಿಂದ ಈ ಕುರಿತು ಸರ್ಕಾರದ ವಿವಿಧ ಇಲಾಖೆ/ ನಿಗಮ/ ಮಂಡಳಿ/ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಅಧಿಕಾರಿ/ ನೌಕರರ ಹಾಗೂ ಫಲಾನುಭವಿಗಳ ಉಪಜಾತಿಯ ಮಾಹಿತಿಯನ್ನು ಪಡೆಯುವ ಬಗ್ಗೆ.

ಒಳಮೀಸಲಾತಿ ಪ್ರಕ್ರಿಯೆ ತುಂಬಾ ವೇಗವಾಗಿ ನಡೆಯುತ್ತಿದೆ.
ಪ್ರಮುಖ ವಿಷಯದ ಕುರಿತು ಸ್ಪಷ್ಟನೆ

👉KPSC ಕನ್ನಡದಲ್ಲಿ ಬರೆದ ಉತ್ತರ ಪತ್ರಿಕೆಗಳನ್ನು ಕನ್ನಡದಲ್ಲಿ ಇರುವ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ,ಇದ್ರಲ್ಲಿ ಯಾವದೆ ರೀತಿಯ ಸಂಶಯ ಬೇಡ,ಸರಿ ಇರುವದನ್ನು ಕೂಡ ಟೀಕಿಸುವದು ಒಳ್ಳೆಯದು ಅಲ್ಲ,

👉ಯಾರಾದ್ರೂ ಈ ಕುರಿತು ತಪ್ಪು ಮಾಹಿತಿ ನೀಡಿದ್ದರೆ ಅದನ್ನು ಡಿಲಿಟ್ ಮಾಡಿ,ಇಲ್ಲ ಅಂದ್ರೆ ಮುಂದೆ ನಿಮಗೆ ಆಗದೆ ಇರುವವರು ಯಾರಾದ್ರೂ ನಿಮಗೆ ಸಮಸ್ಯೆ ಮಾಡಬಹುದು,ನನಗೆ ಈ ಕುರಿತು ತುಂಬಾ ಜನ ಕೇಳ್ತಾ ಇದ್ದರೂ ಸರ್ ಮುಖ್ಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆದ ಉತ್ತರ ಪತ್ರಿಕೆಗಳನ್ನು ಇಂಗ್ಲಿಷ್ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ ನಿಜಾನಾ ಅಂತ ಅದಕ್ಕೆ ಇದು ಮಾಹಿತಿ ಹಂಚಿ ಕೊಳ್ಳುತ್ತಾ ಇರುವದು,ಇಲ್ಲ ಕನ್ನಡದಲ್ಲಿ ಬರೆದ ಉತ್ತರ ಪತ್ರಿಕೆಗಳನ್ನು ಕನ್ನಡದಲ್ಲಿ ಇರುವ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ ಅದಕ್ಕೆ ಸಾಕ್ಷಿ ಈ ಮೇಲಿನಂತಿದೆ ಗೊಂದಲ ಮಾಡಿಕೊಳ್ಳಬೇಡಿ.
ಇನ್ನೂ ನಂಬಿಕೆ ಬಂದಿಲ್ಲ ಅಂದ್ರೆ ಕೆಲವರಿಗೆ ಇದೊಂದು ಕೊನೆಯ ಸ್ಪಷ್ಟನೆ,

👉KAS ಮುಖ್ಯ ಪರೀಕ್ಷೆಯಲ್ಲಿ ಇಂಗ್ಲಿಷ್ ಉತ್ತರ ಪತ್ರಿಕೆಗಳನ್ನು ಇಂಗ್ಲಿಷ್ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ.
ಇನ್ನೂ ನಂಬಿಕೆ ಬಂದಿಲ್ಲ ಅಂದ್ರೆ ಕೆಲವರಿಗೆ ಇದೊಂದು ಕೊನೆಯ ಸ್ಪಷ್ಟನೆ,

👉KAS ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಉತ್ತರ ಪತ್ರಿಕೆಗಳನ್ನು ಕನ್ನಡದಲ್ಲಿ ಇರುವ ಉತ್ತರಗಳನ್ನು ನೋಡಿಕೊಂಡು ಮೌಲ್ಯಮಾಪನ ಮಾಡುತ್ತಾರೆ

👉ಯಾವುದು ಸರಿ ಇರುತ್ತೆ ಅದನ್ನು ಕೂಡ ನಾವು ತಪ್ಪು ಮಾಹಿತಿ ಕೊಡುವದು ತಪಾಗುತ್ತೆ,ಇರಲಿ ಕೆಲವು ಬಾರಿ ಕೆಲವು ಮಾಹಿತಿ ನೋಡಿ ಏನು ವಿಚಾರಿಸದೆ ಕೆಲವರ ಮೇಲೆ ನಂಬಿಕೆ ಇಟ್ಟು ಮಾಹಿತಿ ಹಂಚಿಕೊಂಡಿರುತ್ತಿರಿ,ಆದ್ರೆ ಅದು ನಾವು ನೀಡಿರುವ ಮಾಹಿತಿ ತಪ್ಪು ಅಂತ ಅರಿವು ಆದಾಗ ಅದನ್ನು ತಿದ್ದಿಕೊಂಡು ಕ್ಷಮೆ ಕೇಳಿ ಮತ್ತೆ ಸರಿಯಾದ ಮಾಹಿತಿ ನೀಡಬೇಕು ಅದ್ರಲ್ಲಿ ಯಾವುದೇ ಹಿಂಜರಿಕೆ ಇರಕೂಡದು,ಅದಕ್ಕೆ ಮತ್ತೊಮ್ಮೆ ಹೇಳುತ್ತಾ ಇದ್ದೇನೆ ಯಾರಾದ್ರೂ ಈ ಕುರಿತು ತಪ್ಪು ಮಾಹಿತಿ ನೀಡಿದ್ರೆ ಸರಿ ಪಡಿಸಿಕೊಳ್ಳಿ.
This media is not supported in your browser
VIEW IN TELEGRAM
ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದು ಒಂದು ವ್ಯವಸ್ಥಿತ ವಾಣಿಜ್ಯ ವ್ಯಾಪಾರವಾಗಿದೆ. ಕಷ್ಟ ಪಟ್ಟು ಓದಿ ಪರೀಕ್ಷೆಗೆ ಸಜ್ಜಾಗುವ ಅಭ್ಯರ್ಥಿಗಳಿಗೆ ಇಂದಿನ ದಿನಗಳಲ್ಲಿ ಪರೀಕ್ಷೆಯ ಭಯ ಒಂದೆಡೆಯಾದರೆ, ಪ್ರಶ್ನೆಪತ್ರಿಕೆಯ ಸೋರಿಕೆ ಭಯವೂ ಇರುತ್ತದೆ,ಎಂದು ಮಾನ್ಯ ಉಪ ರಾಷ್ಟ್ರಪತಿಗಳು ಹೇಳಿದ್ದಾರೆ.
This media is not supported in your browser
VIEW IN TELEGRAM
👉ಲೋಕಸೇವಾ ಆಯೋಗಗಳ ಅಧ್ಯಕ್ಷರು, ಸದಸ್ಯರು ಪಕ್ಷಪಾತಿ,ಆಗಿರಬಾರದು.ಅಲ್ಲದೇ ನಿರ್ದಿಷ್ಟ ಸಿದ್ಧಾಂತ ಮತ್ತು ವ್ಯಕ್ತಿನಿಷ್ಠರಾಗಿರುವವರು ಲೋಕಸೇವಾ ಆಯೋಗದ ಅಧ್ಯಕ್ಷ,ಸದಸ್ಯರಾಗುವುದು ಸಂವಿಧಾನದ ಆಶಯಕ್ಕೆ ವಿರುದ್ಧ ಎಂದು
ಮಾನ್ಯ ಉಪ ರಾಷ್ಟ್ರಪತಿಗಳು ಹೇಳಿದ್ದಾರೆ.
This media is not supported in your browser
VIEW IN TELEGRAM
ಅಪ್ಪಟ ದೇಶಭಕ್ತರು
ಸ್ವಾಮಿ ವಿವೇಕಾನಂದರ ಜಯಂತಿಯ ಶುಭಾಶಯಗಳು.

ಅವರ ಪ್ರಮುಖ ನುಡಿಗಳು

👉ಸಾಧ್ಯವಾದರೆ ಸಹಾಯ ಮಾಡಿ.ಇಲ್ಲದಿದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವುದನ್ನು ನೋಡುತ್ತಿರಿ.ನಿಮಗೆ ಸಹಾಯ ಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ.

👉ಒಂದು ಕಲ್ಪನೆಯನ್ನು ತೆಗೆದುಕೊಳ್ಳಿಆ ಒಂದು ಕಲ್ಪನೆಯನ್ನು ನಿಮ್ಮ ಜೀವನವನ್ನಾಗಿ ಮಾಡಿಕೊಳ್ಳಿ, ಅದರ ಕನಸು ಅದರ ಬಗ್ಗೆ ಯೋಚಿಸಿ, ಆ ಕಲ್ಪನೆಯ ಮೇಲೆ ಜೀವಿಸಿ ಮೆದುಳು, ದೇಹ, ಸ್ನಾಯುಗಳು, ನರಗಳು, ನಿಮ್ಮ ದೇಹದ ಪ್ರತಿಯೊಂದು ಭಾಗವು ಆ ಕಲ್ಪನೆಯಿಂದ ತುಂಬಿರಲಿ ಮತ್ತು ಉಳಿದೆಲ್ಲ ವಿಚಾರಗಳನ್ನು ಬಿಟ್ಟುಬಿಡಿ.ಇದು ಯಶಸ್ಸಿನ ಮಾರ್ಗವಾಗಿದೆ ಮತ್ತು ಇದು ಮಹಾನ್ ಆಧ್ಯಾತ್ಮಿಕ ದೈತ್ಯರನ್ನು ಹುಟ್ಟುಹಾಕುವ ಮಾರ್ಗವಾಗಿದೆ.

👉ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ.

ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು.
ಭಾರತೀಯ ಚಿತ್ರರಂಗದ ಪ್ರಸಿದ್ಧ ನಿರ್ದೇಶಕರು ಮತ್ತು ಬರಹಗಾರರು ಸಾಯಿ ಪರಂಜ್‌ಪೈ ಅವರಿಗೆ ಮುಂಬರುವ ಅಜಂತಾ-ಎಲ್ಲೋರಾ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವರು (AIFF) 2025 ರ ಪದ್ಮಪಾಣಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.
ಖ್ಯಾತ ಒಡಿಯಾ ಕವಿ ಪ್ರತಿವಾ ಸತ್ಪತಿ 2023 ರ ಕವನಕ್ಕಾಗಿ ಪ್ರತಿಷ್ಠಿತ ಗಂಗಾಧರ ರಾಷ್ಟ್ರೀಯ ಪ್ರಶಸ್ತಿಯನ್ನು ಸಂಬಲ್‌ಪುರ ವಿಶ್ವವಿದ್ಯಾಲಯದಿಂದ ಪಡೆದು ಕೊಂಡಿದ್ದಾರೆ, 1989 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯನ್ನು ಖ್ಯಾತ ಒಡಿಯಾ ಕವಿ ಗಂಗಾಧರ್ ಮೆಹೆರ್ ಅವರ ಹೆಸರಿಡಲಾಗಿದೆ.
ಸಂಬಂಧಪಟ್ಟವರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿ.
👉ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು
ನಾಡೋಜ ಡಾ.ಮಹೇಶ ಜೋಶಿ ಅವರು,

👉ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು,

👉87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ   ಗೊ.ರು.ಚನ್ನಬಸಪ್ಪ ಅವರು,

👉ರಾಜ್ಯದ ಮೂರು ಪ್ರಮುಖ ಗಣ್ಯ ವ್ಯಕ್ತಿಗಳು ಕರುನಾಡಲ್ಲಿ KAS ಪೂರ್ವಭಾವಿ ಮರುಪರೀಕ್ಷೆಯಲ್ಲಿ ಕನ್ನಡದಲ್ಲಿ ತಪ್ಪು ತಪ್ಪಾಗಿ ಪ್ರಶ್ನೆಗಳನ್ನು ನೀಡಿರುವುದರಿಂದ ಕನ್ನಡದ ಕಗ್ಗೊಲೆ ಮಾಡಿರುವದರ ಜೊತೆಗೆ ಕನ್ನಡ ಮಾಧ್ಯಮದ ಅವರಿಗೆ ಅನ್ಯಾಯ ಆಗಿದೆ ಈ ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳಿಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವದಕ್ಕೆ ರಾಜ್ಯದ ಎಲ್ಲ ಕನ್ನಡ ಮಾಧ್ಯಮದ ಸ್ಪರ್ಧಾರ್ಥಿಗಳ ಪರವಾಗಿ ಧನ್ಯವಾದಗಳು.