𝐒𝐓𝐔𝐃𝐘 𝐂𝐈𝐕𝐈𝐋 𝐆𝐒
1.73K subscribers
499 photos
18 videos
339 files
248 links
Download Telegram
New Notifications Roster
6% backlog ಎನ್ನುವ ಕಾನೂನುಬಾಹಿರವಾದ ಸುಳ್ಳು ಭರವಸೆಯ ಕುರಿತು :-








ಮುಂಬರುವ ನೇಮಕಾತಿಗಳಲ್ಲಿ ಪರಿಶಿಷ್ಟ-ಜಾತಿ ಮತ್ತು ಪರಿಶಿಷ್ಟ-ಪಂಗಡಗಳ ಮೀಸಲಾತಿಯನ್ನು ಕಡಿತಗೊಳಿಸುವ (ಕ್ರಮವಾಗಿ 17%ರಿಂದ 15%ಕ್ಕೆ ಮತ್ತು 7%ರಿಂದ 3%ಕ್ಕೆ) ರಾಜ್ಯ-ಸರ್ಕಾರದ ಕ್ರಮದಲ್ಲಿ ಪ.ಜಾತಿಗಳಿಗೆ 2% ಮತ್ತು ಪ.ಪಂಗಡಗಳಿಗೆ 6% ಹುದ್ದೆಗಳನ್ನು ಕಾಯ್ದಿರಿಸುವ ಹುಸಿ ಭರವಸೆಯ ಕುರಿತು ವಿವರಣೆ :-




ರಾಜ್ಯ-ಸರ್ಕಾರದ (DPAR) ಆದೇಶದಲ್ಲಿರುವಂತೆ, ಮಾನ್ಯ ಉಚ್ಛ-ನ್ಯಾಯಾಲಯದ ಉಚ್ಚರಿಸಿರುವುದು :-  

"ಕರ್ನಾಟಕ ಪರಿಶಿಷ್ಟ-ಜಾತಿ ಮತ್ತು ಪರಿಶಿಷ್ಟ-ಪಂಗಡಗಳ (ಶಿಕ್ಷಣ-ಸಂಸ್ಥೆಗಳಲ್ಲಿ ಸೀಟುಗಳ ಮೀಸಲಾತಿ ಮತ್ತು ರಾಜ್ಯ-ಸರ್ಕಾರಿ ಹುದ್ದೆಗಳು ಮತ್ತು ಸಿವಿಲ್-ಸೇವೆಗಳ ನೇಮಕಾತಿ) ಕಾಯ್ದೆ - 2022ರ ಅಡಿಯಲ್ಲಿ ಹೆಚ್ಚಿಸಲಾದ ಮೀಸಲಾತಿಯನ್ನು ನಿರ್ದಿಷ್ಟಪಡಿಸುವ ಕೆಲವು ಅಧಿಸೂಚನೆಗಳ ಅನುಸಾರ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿರುವುದನ್ನು ಪರಿಗಣಿಸಿ, ಪ್ರಸ್ತುತ ಅರ್ಜಿಗಳ ವಿಲೇವಾರಿಯಾಗುವವರೆಗೆ ಹೆಚ್ಚಿಸಲಾದ ಮೀಸಲಾತಿಯ ಆಧಾರದ ಮೇಲೆ ನೇಮಕಾತಿಗಾಗಿ ಯಾವುದೇ ಅಧಿಸೂಚನೆಗಳನ್ನು ಹೊರಡಿಸಬಾರದು ಎಂದು ನಿರ್ದೇಶಿಸಲು 19/11/2025ರಂದು ಹೊರಡಿಸಿದ ನಮ್ಮ ಆದೇಶವನ್ನು ಮಾರ್ಪಡಿಸುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ. ಈಗಾಗಲೇ ಪ್ರಾರಂಭವಾಗಿರುವ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಬಹುದಾಗಿದ್ದು; ಆದರೆ, ಅಭ್ಯರ್ಥಿಗಳಿಗೆ ನೀಡುವ ಯಾವುದೇ ನೇಮಕಾತಿ ಆದೇಶಗಳಲ್ಲಿ ಪ್ರಸ್ತುತ ಪ್ರಕರಣದ ಅಂತಿಮ-ತೀರ್ಪಿಗೆ ಒಳಪಟ್ಟಿರುತ್ತದೆ ಎಂಬ ಷರತ್ತನ್ನು ವಿಧಿಸಬೇಕಿರುತ್ತದೆ."








ರಾಜ್ಯ-ಸರ್ಕಾರದ ಆದೇಶದಲ್ಲಿ ನಮೂದಿಸಿರುವಂತೆ, 2022ರ ಮೀಸಲಾತಿ ಕಾನೂನಿನ ಅಡಿಯಲ್ಲಿ (50% ಮೀಸಲಾತಿ ಕಾನೂನು : SC-15%, ST-3%, OBC-32%) ನೇಮಕಾತಿ ಮಾಡುವಾಗ 6% ಹುದ್ದೆಗಳನ್ನು backlog ಎಂದು ಕಾಯ್ದಿರಿಸುವ ರಾಜ್ಯ-ಸರ್ಕಾರದ ಈ ನಿರ್ಣಯಕ್ಕೆ ಕಾನೂನಿನಲ್ಲಿ ಯಾವುದೇ ರಕ್ಷಣೆ ಇರುವುದಿಲ್ಲ ಹಾಗೂ ಈ ಕ್ರಮವನ್ನು ಅನುಸರಿಸಿ ನೇಮಕಾತಿ ಮಾಡುವಂತೆ ನ್ಯಾಯಾಲಯವು ಈವರೆಗೂ ಆದೇಶ ನೀಡಿರುವುದಿಲ್ಲ. ಹಾಗಾಗಿ, ಮುಂಬರುವ ನೇರ-ನೇಮಕಾತಿಗಳಲ್ಲಿ 6% ಹುದ್ದೆಗಳನ್ನು backlog ಎಂದು ತಾತ್ಕಾಲಿಕವಾಗಿ ಪರಿಗಣಿಸಿ ಅಧಿಸೂಚನೆ ಹೊರಡಿಸಲು ಮುಂದಾಗಿರುವ ರಾಜ್ಯ-ಸರ್ಕಾರದ ಈ ಕ್ರಮವನ್ನು ಉಚ್ಛ-ನ್ಯಾಯಾಲಯದಲ್ಲಿ 56% ಮೀಸಲಾತಿ ಹೆಚ್ಚಳ ಪ್ರಕರಣದಲ್ಲಿನ ಅರ್ಜಿದಾರರು ಒಂದು ವೇಳೆ ಪ್ರಶ್ನೆ ಮಾಡಿದ್ದೇ ಆದಲ್ಲಿ, ರಾಜ್ಯ-ಸರ್ಕಾರವು ಪ್ರಸ್ತುತದಲ್ಲಿ ಅನುಸರಿಸಲು ಹೊರಟಿರುವ ಈ ಕ್ರಮವನ್ನು ಉಚ್ಛ-ನ್ಯಾಯಾಲಯವು ರದ್ದುಪಡಿಸಬಹುದು ಹಾಗೂ ನ್ಯಾಯಾಲಯದಲ್ಲಿ ಈಗಾಗಲೇ ದಾವೆ ಹೂಡಿರುವ ವ್ಯಕ್ತಿ ಸೇರಿದಂತೆ ಸಾಮಾನ್ಯ-ವರ್ಗದ ಯಾವುದೇ ಅಭ್ಯರ್ಥಿಗಳು ಇದನ್ನು ಪ್ರಶ್ನಿಸಬಹುದು. ಕೊನೆಯದಾಗಿ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಪರಿಶಿಷ್ಟ-ಪಂಗಡಕ್ಕೆ ಕಾಯ್ದಿರಿಸಿದ 2,257 ಹುದ್ದೆಗಳು ಮತ್ತು ಪರಿಶಿಷ್ಟ-ಜಾತಿಗೆ ಕಾಯ್ದಿರಿಸಿದ 1,128 ಹುದ್ದೆಗಳು ಸಾಮಾನ್ಯ-ವರ್ಗದ ಅಭ್ಯರ್ಥಿಗಳಿಗೆ ಲಭಿಸಲಿವೆ.




ರಾಜ್ಯ-ಸರ್ಕಾರವು ಪರಿಶಿಷ್ಟ-ಜಾತಿ ಮತ್ತು  ಪರಿಶಿಷ್ಟ-ಪಂಗಡದವರನ್ನು ತಕ್ಷಣಕ್ಕೆ ಮನವೊಲಿಸುವ ಸಲುವಾಗಿ ಹೀಗೆ ಕುತಂತ್ರವನ್ನು ಪ್ರದರ್ಶಿಸಿದೆ.
6
Forwarded from Nikhil
TALUK BAackward classes officer(hk) (1) (1).pdf
894.1 KB
TALUK BAackward classes officer(hk) (1).pdf
asst director of land records(hk).pdf
430.7 KB
asst director of land records(hk).pdf
ASSISTANT ENGINEER BBMP.pdf
527 KB
ASSISTANT ENGINEER BBMP.pdf
1