Forwarded from ಲೇಖನಿ.ಕಾಂ
6% backlog ಎನ್ನುವ ಕಾನೂನುಬಾಹಿರವಾದ ಸುಳ್ಳು ಭರವಸೆಯ ಕುರಿತು :-
ಮುಂಬರುವ ನೇಮಕಾತಿಗಳಲ್ಲಿ ಪರಿಶಿಷ್ಟ-ಜಾತಿ ಮತ್ತು ಪರಿಶಿಷ್ಟ-ಪಂಗಡಗಳ ಮೀಸಲಾತಿಯನ್ನು ಕಡಿತಗೊಳಿಸುವ (ಕ್ರಮವಾಗಿ 17%ರಿಂದ 15%ಕ್ಕೆ ಮತ್ತು 7%ರಿಂದ 3%ಕ್ಕೆ) ರಾಜ್ಯ-ಸರ್ಕಾರದ ಕ್ರಮದಲ್ಲಿ ಪ.ಜಾತಿಗಳಿಗೆ 2% ಮತ್ತು ಪ.ಪಂಗಡಗಳಿಗೆ 6% ಹುದ್ದೆಗಳನ್ನು ಕಾಯ್ದಿರಿಸುವ ಹುಸಿ ಭರವಸೆಯ ಕುರಿತು ವಿವರಣೆ :-
ರಾಜ್ಯ-ಸರ್ಕಾರದ (DPAR) ಆದೇಶದಲ್ಲಿರುವಂತೆ, ಮಾನ್ಯ ಉಚ್ಛ-ನ್ಯಾಯಾಲಯದ ಉಚ್ಚರಿಸಿರುವುದು :-
"ಕರ್ನಾಟಕ ಪರಿಶಿಷ್ಟ-ಜಾತಿ ಮತ್ತು ಪರಿಶಿಷ್ಟ-ಪಂಗಡಗಳ (ಶಿಕ್ಷಣ-ಸಂಸ್ಥೆಗಳಲ್ಲಿ ಸೀಟುಗಳ ಮೀಸಲಾತಿ ಮತ್ತು ರಾಜ್ಯ-ಸರ್ಕಾರಿ ಹುದ್ದೆಗಳು ಮತ್ತು ಸಿವಿಲ್-ಸೇವೆಗಳ ನೇಮಕಾತಿ) ಕಾಯ್ದೆ - 2022ರ ಅಡಿಯಲ್ಲಿ ಹೆಚ್ಚಿಸಲಾದ ಮೀಸಲಾತಿಯನ್ನು ನಿರ್ದಿಷ್ಟಪಡಿಸುವ ಕೆಲವು ಅಧಿಸೂಚನೆಗಳ ಅನುಸಾರ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿರುವುದನ್ನು ಪರಿಗಣಿಸಿ, ಪ್ರಸ್ತುತ ಅರ್ಜಿಗಳ ವಿಲೇವಾರಿಯಾಗುವವರೆಗೆ ಹೆಚ್ಚಿಸಲಾದ ಮೀಸಲಾತಿಯ ಆಧಾರದ ಮೇಲೆ ನೇಮಕಾತಿಗಾಗಿ ಯಾವುದೇ ಅಧಿಸೂಚನೆಗಳನ್ನು ಹೊರಡಿಸಬಾರದು ಎಂದು ನಿರ್ದೇಶಿಸಲು 19/11/2025ರಂದು ಹೊರಡಿಸಿದ ನಮ್ಮ ಆದೇಶವನ್ನು ಮಾರ್ಪಡಿಸುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ. ಈಗಾಗಲೇ ಪ್ರಾರಂಭವಾಗಿರುವ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಬಹುದಾಗಿದ್ದು; ಆದರೆ, ಅಭ್ಯರ್ಥಿಗಳಿಗೆ ನೀಡುವ ಯಾವುದೇ ನೇಮಕಾತಿ ಆದೇಶಗಳಲ್ಲಿ ಪ್ರಸ್ತುತ ಪ್ರಕರಣದ ಅಂತಿಮ-ತೀರ್ಪಿಗೆ ಒಳಪಟ್ಟಿರುತ್ತದೆ ಎಂಬ ಷರತ್ತನ್ನು ವಿಧಿಸಬೇಕಿರುತ್ತದೆ."
ರಾಜ್ಯ-ಸರ್ಕಾರದ ಆದೇಶದಲ್ಲಿ ನಮೂದಿಸಿರುವಂತೆ, 2022ರ ಮೀಸಲಾತಿ ಕಾನೂನಿನ ಅಡಿಯಲ್ಲಿ (50% ಮೀಸಲಾತಿ ಕಾನೂನು : SC-15%, ST-3%, OBC-32%) ನೇಮಕಾತಿ ಮಾಡುವಾಗ 6% ಹುದ್ದೆಗಳನ್ನು backlog ಎಂದು ಕಾಯ್ದಿರಿಸುವ ರಾಜ್ಯ-ಸರ್ಕಾರದ ಈ ನಿರ್ಣಯಕ್ಕೆ ಕಾನೂನಿನಲ್ಲಿ ಯಾವುದೇ ರಕ್ಷಣೆ ಇರುವುದಿಲ್ಲ ಹಾಗೂ ಈ ಕ್ರಮವನ್ನು ಅನುಸರಿಸಿ ನೇಮಕಾತಿ ಮಾಡುವಂತೆ ನ್ಯಾಯಾಲಯವು ಈವರೆಗೂ ಆದೇಶ ನೀಡಿರುವುದಿಲ್ಲ. ಹಾಗಾಗಿ, ಮುಂಬರುವ ನೇರ-ನೇಮಕಾತಿಗಳಲ್ಲಿ 6% ಹುದ್ದೆಗಳನ್ನು backlog ಎಂದು ತಾತ್ಕಾಲಿಕವಾಗಿ ಪರಿಗಣಿಸಿ ಅಧಿಸೂಚನೆ ಹೊರಡಿಸಲು ಮುಂದಾಗಿರುವ ರಾಜ್ಯ-ಸರ್ಕಾರದ ಈ ಕ್ರಮವನ್ನು ಉಚ್ಛ-ನ್ಯಾಯಾಲಯದಲ್ಲಿ 56% ಮೀಸಲಾತಿ ಹೆಚ್ಚಳ ಪ್ರಕರಣದಲ್ಲಿನ ಅರ್ಜಿದಾರರು ಒಂದು ವೇಳೆ ಪ್ರಶ್ನೆ ಮಾಡಿದ್ದೇ ಆದಲ್ಲಿ, ರಾಜ್ಯ-ಸರ್ಕಾರವು ಪ್ರಸ್ತುತದಲ್ಲಿ ಅನುಸರಿಸಲು ಹೊರಟಿರುವ ಈ ಕ್ರಮವನ್ನು ಉಚ್ಛ-ನ್ಯಾಯಾಲಯವು ರದ್ದುಪಡಿಸಬಹುದು ಹಾಗೂ ನ್ಯಾಯಾಲಯದಲ್ಲಿ ಈಗಾಗಲೇ ದಾವೆ ಹೂಡಿರುವ ವ್ಯಕ್ತಿ ಸೇರಿದಂತೆ ಸಾಮಾನ್ಯ-ವರ್ಗದ ಯಾವುದೇ ಅಭ್ಯರ್ಥಿಗಳು ಇದನ್ನು ಪ್ರಶ್ನಿಸಬಹುದು. ಕೊನೆಯದಾಗಿ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಪರಿಶಿಷ್ಟ-ಪಂಗಡಕ್ಕೆ ಕಾಯ್ದಿರಿಸಿದ 2,257 ಹುದ್ದೆಗಳು ಮತ್ತು ಪರಿಶಿಷ್ಟ-ಜಾತಿಗೆ ಕಾಯ್ದಿರಿಸಿದ 1,128 ಹುದ್ದೆಗಳು ಸಾಮಾನ್ಯ-ವರ್ಗದ ಅಭ್ಯರ್ಥಿಗಳಿಗೆ ಲಭಿಸಲಿವೆ.
ರಾಜ್ಯ-ಸರ್ಕಾರವು ಪರಿಶಿಷ್ಟ-ಜಾತಿ ಮತ್ತು ಪರಿಶಿಷ್ಟ-ಪಂಗಡದವರನ್ನು ತಕ್ಷಣಕ್ಕೆ ಮನವೊಲಿಸುವ ಸಲುವಾಗಿ ಹೀಗೆ ಕುತಂತ್ರವನ್ನು ಪ್ರದರ್ಶಿಸಿದೆ.

❤6