ಪದ್ಯದ ಶೀರ್ಷಿಕೆ *ಕನ್ನಡಮ್ಮ*
ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದೊಳಿರುವ ಕೆಪಿಎಸ್ಸಿ ಎಂಬ ವ್ಯಾಘ್ರನ ಪರಿಯನಾನೆಂತು ಪೇಳ್ವೆನು ।
ಮಧ್ಯರಾತ್ರಿಯೊಳೆದ್ದು ವ್ಯಾಘ್ರನು
ನೊಂದವರ್ ಕಂಬನಿಸ್ನಾನ ಮಾಡಿ
ಬಡವನೆತ್ತರ ತಿಲಕವಿಟ್ಟು
ಚತುರ ದಾಳವ ಹೂಡಿದ ।
ಉದ್ಯೋಗ ಸೌಧದ ಕುರ್ಚಿ ಕೆಳಗೆ
ಪುಂಗಿಯೂದುತ ಕೆಪಿಎಸ್ಸಿ
ಬಳಸಿನಿಂದ ಏಜೆಂಟರನ್ನು
ಬಳಿಗೆ ಕರೆದನು ಹರುಷದಿ ।
ಸಂಗ ಬಾರೋ ,ರಂಗ ಬಾರೋ ಸೋಮ,ಭೀಮ ನೀನು ಬಾರೋ
ಕೋಟಿ ಲೂಟಿ ಮಾಡೊ ಸಮಯ,
ವ್ಯಾಘ್ರ ಕೂಗಿ ಕರೆದನು ।
ವ್ಯಾಘ್ರ ಕರೆದ ಧ್ವನಿಯ ಕೇಳಿ
ಏಜೆಂಟರೆಲ್ಲ ಬಂದು ನಿಂತು
ಚೆಲ್ಲಿ ಸೂಸಿ ಕೋಟಿ ಸುರಿಯಲು
ತುಂಬಲಿಲ್ಲ ಪೆಟ್ಟಿಗೆ ।
ತುಕ್ಕು ಹಿಡಿದ ವ್ಯವಸ್ಥೆಯೊಳಗೆ,
ಕೆಪಿಎಸ್ಸಿ ಎಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು
ಸೌಧದ ಕಿಬ್ಬಿಯೊಳುತಾನಿದ್ದನು ।
ದೋಷ ಪೂರಿತ ಪರೀಕ್ಷೆ ನಡೆಸಿ,
ಘುಡುಘುಡಿಸಿ ಭೋರಿಡುತ್ತ ಛಂಗನೆ ದುಡ್ಡು ಮಾಡುವ ರಭಸದಲ್ಲಿ ,
ಅಂಕಪಟ್ಟಿಯನ್ನೂ ಬಿಟ್ಟನು।
ಕಮರಿ ಹೋದವು ನೊಂದ ಮನಸುಗಳ್
ಚದುರಿ ಹೋದವೆಷ್ಟೊ
ಕನಸುಗಳ್
ಈ ಗೋಳು ಕೇಳದ ಕೆಪಿಯಸ್ಸಿ
ನಿನ್ನ ಮೆಚ್ಚನಾ ಪರಮಾತ್ಮನು ?!
🐮ಕನ್ನಡಮ್ಮ ಎಂಬ ಗೋವು ,
ತನ್ನ ಕಂದನ ನೆನೆದುಕೊಂಡು,
ಕನ್ನಡದಲ್ಲಿ ಓದಿ ಆಫೀಸರ ಆಗ್ತಾನ ಎಂದು ,
ಚಂದದಲಿ ತಾ ಬರುತಿರೆ।
🐯ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು, ಬಂಧು-ಬಳಸಿ ಅಡ್ಡಗಟ್ಟಿ ನಿಂದ ನಾ ಲೂಟಿಕೋರನು।
🐯ನಿನಗೆ ಇಂಗ್ಲಿಷ್ ಬರುವುದಿಲ್ಲ,
ನಿನ್ನ ಬಳಿ ಹಣವು ಇಲ್ಲ,
ನಿನ್ನ ಮಕ್ಕಳು ನಮಗೆ ಸಲ್ಲ ,
ಹೋಗಿರೆಲ್ಲರು ಕೂಲಿಗೆ ।
🐯ಮೇಲೆ ಬಿದ್ದು ಬೀಳೊಹೊಯುವೆನು ನಿನ್ನ ಒಡಲನು ಸೀಳಿ ಬಿಡುವೆನು
ಎನುತ ಕೋಪದಿ
ಕ್ರೂರವ್ಯಾಘ್ರನು ಅಬ್ಬರಿಸುತ ಕೂಗಲು।
🐮ಒಂದು ಭಿನ್ನಹ ವ್ಯಾಘ್ರ ಕೇಳು
ಕಂದ ಓದುವ ದೊಡ್ಡಿಯೊಳಗೆ
ಒಂದು ನಿಮಿಷದಿ ವಿಷಯ ತಿಳಿಸಿ ಬಂದು ಸೇರುವೆನಿಲ್ಲಿಗೆ।
🐯ಹಸಿದ ವೇಳೆಗೆ ಸಿಕ್ಕಿದೊಡವೆಯಾ
ವಶವ ಮಾಡದೆ ಬಿಡಲು ನೀನು ನುಸುಳಿ ಹೋಗುವೆ ಮತ್ತೆ ಬರುವೆಯ?
ಹುಸಿಯ ನಾಡುವೆ ಎಂದಿತು ।
🐮ನಾಡೆ ನನ್ನ ತಂದೆ ತಾಯಿ
ಕನ್ನಡಿಗರೆ ಬಂಧು ಬಳಗ
ಮಾತೃ ಭಾಷೆಗೆ ತಪ್ಪಿ ನಡೆದರೆ
ಮೆಚ್ಚನ ಪರಮಾತ್ಮನು।
🐮ಕೊಂದು ತಿನ್ನುವೆನೆಂಬ ವ್ಯಾಘ್ರಗೆ ಚೆಂದದಿಂದ ಭಾಷೆ ಇತ್ತು
ಕಂದ ನಿನ್ನನು
ನೋಡಿ ಹೋಗುವೆನೆಂದು ಬಂದೆನು ದೊಡ್ಡಿಗೆ ।
👶🏻ಕನ್ನಡಮ್ಮ ನೀ ಸಾಯಲೇಕೆ?
ನನ್ನ ತಬ್ಬಲಿ ಮಾಡಲೇಕೆ ?
ಅಧಿಕಾರಿ ನಾ ಆಗಲೊಲ್ಲೆ ,
ಸುಮ್ಮನಿಲ್ಲಿಯೆ ನಿಲ್ಲೆನುತ್ತಾ
ಅಮ್ಮಗೆ ಕಂದ ಹೇಳಲು।
🐮ತಬ್ಬಲಿಯು ನೀನಾದೆ ಮಗನೇ ಸಾಧ್ಯವಾದರೆ ಇಂಗ್ಲಿಷ್ ನೀ ಕಲಿ,
ಇಬ್ಬರ ಋಣ ತೀರಿತೆಂದು ತಬ್ಬಿ ಕೊಂಡಿತು ಕಂದನ.,
👶🏻ಬೇರಾವ ಭಾಷೆ ನಾ ಕಲಿಯಲಮ್ಮ?
ಯಾರ ಸೇರಿ ಬದುಕಲಮ್ಮ?
ಯಾರ ಒಡಲಲಿ ಆಡಲಮ್ಮ?
ಯಾರು ನನಗೆ ಹಿತವರು ?
🌳ತನ್ನ ಕಂದನ ಬಿಟ್ಟು ಬಂದು,
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲ್ಲಿ ಹುಲಿಗೆಂದಿತು -
🐮ಛಂದಸ್ಸಿದೆ ಕೋ,ಸಮಾಸವಿದೆಕೋ,
ಸಹಸ್ರ ವರ್ಷಗಳ್ ಇತಿಹಾಸವಿದೆ ಕೋ,
ಮೂಢ ವ್ಯಾಘ್ರನೆ ನೀನಿದೆಲ್ಲವನ್ ಕೊಂದು ಸಂತಸದಿಂದಿರು।
🐯ಕನ್ನಡಾಂಬೆಯ ಮಾತು ಕೇಳಿ ಕಣ್ಣನೀರನು ಒರೆಸಿಕೊಂಡು
ಕನ್ಯೆ ಇವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು।
🐯ಎನ್ನ ಹುಟ್ಟಿನ ಸೆಲೆಯೆ ನೀನು
ನಿನ್ನ ಕೊಂದ್ ನಾ ಏನ ಪಡೆವೆನು ?
ಅನ್ಯ ಭಾಷೆಯ ಮೋಹದಾಹ
ಹಾಳುಗೆಡವಿತು ನನ್ನನು.
🐯ಹೀಗೆ ಹೇಳುತ ಉಗ್ರ ವ್ಯಾಘ್ರನು
ಪರಿತಪಿಸುತ್ತ ಪಶ್ಚತಾಪದಿ
ಹಾರಿನೆಗೆದು ಘೀಳಿಡುತ್ತ
ತನ್ನ ಪ್ರಾಣವ ಬಿಟ್ಟಿತು।
ಆಂಗ್ಲ ಭಾಷೆಯೆ ತಾಯಿ ಎಂದ ಅಹಂಕಾರಿಗಳ ಕಥೆ ಇದು
🐮ಕನ್ನಡಮ್ಮನು ನಲಿದು ಕಂದಗೆ,
ಉಣಿಸಿತು ಕೈತುತ್ತ ಹರುಷದಿ,
ಪೊನ್ನರನ್ನರ ಕರೆದು ತಾನು ಮುನ್ನಿಂತು ಹೀಗೆಂದಿತು -
ಎನ್ನ ವಂಶದ ಕಂದಗಳಿರ
ಎನ್ನ ಕುಲದ ಚೆಂದಗಳಿರ
ಮುನ್ನ ಪ್ರತಿ ರಾಜ್ಯೋ ತ್ಸವ ದೊಳ್ ಭುವನೇಶ್ವರಿಯ ಭಜಿಸಿರೈ ।
ಭಾಷೆಯೇ ಭಗವಂತನೆಂದ ಕನ್ನಡಮ್ಮನ ಕಥೆ ಇದು॥
-ರಚನೆ
ರಂಜಿತ ( PREMS CLASSES ವಿದ್ಯಾರ್ಥಿನಿ )

❤33🔥10👍5🥰2❤🔥1
•ದಿನದ ಮಾತು•❤️
ಬೇರೆಯವರು ಪ್ರಶ್ನಿಸಿದಾಗ ಉತ್ತರಿಸಲಾಗದೆ ಇರಬಹುದು, ನಿಮ್ಮ ಅಂತರಾತ್ಮ ಪ್ರಶ್ನಿಸಿದಾಗ ಉತ್ತರ ಕೊಡಬಲ್ಲಷ್ಟು ಸಿದ್ಧರಿದ್ದರೆ ಸಾಕು.
ಬೇರೆಯವರು ಪ್ರಶ್ನಿಸಿದಾಗ ಉತ್ತರಿಸಲಾಗದೆ ಇರಬಹುದು, ನಿಮ್ಮ ಅಂತರಾತ್ಮ ಪ್ರಶ್ನಿಸಿದಾಗ ಉತ್ತರ ಕೊಡಬಲ್ಲಷ್ಟು ಸಿದ್ಧರಿದ್ದರೆ ಸಾಕು.
❤13🔥1
•ದಿನದ ಮಾತು•❤️
ಸರಳವಾಗಿರು. ಭಗವಂತನಿಗೆ ಕೊಟ್ಟಿದ್ದನ್ನು ಮರಳಿ ಪಡೆಯುವುದೂ ಗೊತ್ತು!
ಸರಳವಾಗಿರು. ಭಗವಂತನಿಗೆ ಕೊಟ್ಟಿದ್ದನ್ನು ಮರಳಿ ಪಡೆಯುವುದೂ ಗೊತ್ತು!
❤🔥8👍3❤2
•ದಿನದ ಮಾತು•❤️
ಟೈಮ್ ಸರಿ ಇದ್ರೆ ಭೂಮಿ ಬಗೆದವನನ್ನೂ ಎದುರಿಸಿ ಗೆಲ್ಲಬಹುದು. ಕೆಟ್ಟಾಗ ಒಂದು ಸೈಟ್ ತೊಗೊಂಡಿದ್ದಕ್ಕೆ ಸೋಲು ಅನುಭವಿಸಬೇಕಾಗಬಹುದು!
ಟೈಮ್ ಸರಿ ಇದ್ರೆ ಭೂಮಿ ಬಗೆದವನನ್ನೂ ಎದುರಿಸಿ ಗೆಲ್ಲಬಹುದು. ಕೆಟ್ಟಾಗ ಒಂದು ಸೈಟ್ ತೊಗೊಂಡಿದ್ದಕ್ಕೆ ಸೋಲು ಅನುಭವಿಸಬೇಕಾಗಬಹುದು!
👍6😁1
•ದಿನದ ಮಾತು•❤️
ಊಟಕ್ಕಾಗಿ ಬದುಕಬಾರದು ಸರಿ. ಹಾಗಂತ ಮನೆಗೆ ಬಂದವರಿಗೆ ಊಟ ಹಾಕದೆ ಕಳಿಸಬಾರದು ಎನ್ನುವುದೂ ಆದರ್ಶವೇ!
ಊಟಕ್ಕಾಗಿ ಬದುಕಬಾರದು ಸರಿ. ಹಾಗಂತ ಮನೆಗೆ ಬಂದವರಿಗೆ ಊಟ ಹಾಕದೆ ಕಳಿಸಬಾರದು ಎನ್ನುವುದೂ ಆದರ್ಶವೇ!
👍11❤5
1st PUC ಇತಿಹಾಸ.pdf
19.8 MB
👍7❤1👏1
ಇಂದು ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟದಲ್ಲಿ ನಮ್ಮ ವಿದ್ಯಾರ್ಥಿಗಳು ದೂರದ ಊರುಗಳಿಂದ ಭಾಗವಹಿಸಿ ಯಶಸ್ವಿಗೊಳಿಸಲು ಸಹಕಾರ ನೀಡುತ್ತಿದ್ದಾರೆ , ಧನ್ಯವಾದಗಳು. ❤️ . ನಮ್ಮ ಹೋರಾಟ ಹಗರಣ ಮತ್ತು ಭಾಷಾಂತರದ ವಿರುದ್ಧವೇ ಹೊರತು , mains ಬರೆಯುತ್ತಿರುವ ವಿದ್ಯಾರ್ಥಿಗಳ ವಿರುದ್ಧವಲ್ಲ .
ನಮ್ಮ ಎಲ್ಲಾ mains ಬರೆಯುತ್ತಿರುವ ವಿದ್ಯಾರ್ಥಿಗಳು ಯಾವುದೇ ಭಯ ಬೇಡ , ತಮ್ಮ ಅಧ್ಯಯನ ಮುಂದುವರೆಸಿ , ಇಂದಲ್ಲ ನಾಳೆ ನೀವು mains ಬರೆಯಲೇ ಬೇಕು , ಮತ್ತು ನಮ್ಮ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಭಾಷಾಂತರ ತಪ್ಪು ಆಗುವುದಿಲ್ಲ , ಈವಾಗ ನಡೆಯುತ್ತಿರುವ ಹೊರಟದಿಂದ ಎಚ್ಚರಿಕೆ ತಲುಪಿದೆ .

👍47❤14👎5🔥3
ಮುಖ್ಯಮಂತ್ರಿಗಳು 2 ದಿನಗಳ ಕಾಲಾವಕಾಶ ಕೇಳಿದ್ದಾರೆ , ಮುಂದಿನ 2 ದಿನಗಳ ನಂತರ KPSC ಪರೀಕ್ಷೆಯ ಕುರಿತು ಮುಖ್ಯಮಂತ್ರಿಗಳು ನಿರ್ಧಾರ ಹೇಳುತ್ತಾರೆ ಎಂದು ಕರವೇ ಅಧ್ಯಕ್ಷರು ತಿಳಿಸಿದ್ದಾರೆ .
👍29🔥4